ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಕಾಲಿಟ್ಟ ಸ್ಟ್ರಾಪ್‌ ಕುರ್ತಾ-ಧೋತಿ

Summer Wedding Fashion: ಬೇಸಿಗೆಯ ಸೆಕೆಗೆ ಹೊಂದುವಂತಹ ಸ್ಟ್ರಾಪ್‌ ವಿನ್ಯಾಸದ ಕುರ್ತಾ –ಧೋತಿ ಡಿಸೈನರ್‌ವೇರ್ಸ್ ಇದೀಗ ಈ ಸೀಸನ್‌ನ ವೆಡ್ಡಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಈ ಔಟ್‌ಫಿಟ್‌ ವಿಶೇ‍ಷತೆಯೇನು? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಅಂಕಿತಾ ಶರ್ಮಾ, ನಟಿ
1/5

ವೆಡ್ಡಿಂಗ್‌ ಫ್ಯಾಷನ್‌ಗೆ ಸ್ಟ್ರಾಪ್‌ ಕುರ್ತಾ-ಧೋತಿ ಡಿಸೈನರ್‌ವೇರ್ಸ್ ಎಂಟ್ರಿ ನೀಡಿವೆ.

2/5

ಈ ಬೇಸಿಗೆಯ ಸೆಕೆಗೆ ಹೊಂದುವಂತಹ ಸ್ಟ್ರಾಪ್‌ ವಿನ್ಯಾಸದ ಕುರ್ತಾ –ಧೋತಿ ಫ್ಯಾಷನ್‌ ಹೊಸ ರೂಪದಲ್ಲಿ ವೆಡ್ಡಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟಿದ್ದು, ಎದ್ದು ಕಾಣುವಂತಹ ಕಲರ್‌ಗಳಲ್ಲಿ ಹಾಗೂ ಗ್ರ್ಯಾಂಡ್‌ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ.

3/5

ಸ್ಟ್ರಾಪ್‌ ಕುರ್ತಾ –ಧೋತಿಯಲ್ಲಿ ಅಂಕಿತಾ ಶರ್ಮಾ

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಅಂಕಿತಾ ಶರ್ಮಾ ಧರಿಸಿದ್ಧ ವೈಬ್ರೆಂಟ್‌ ಹಸಿರು ವರ್ಣದ ಗ್ರ್ಯಾಂಡ್‌ ಲುಕ್‌ ಹೊಂದಿದ್ದ ಸ್ಟ್ರಾಪ್‌ ಹೊಂದಿದ ಕುರ್ತಾ ಹಾಗೂ ಧೋತಿ ಫ್ಯಾಷನ್‌ ಹುಡುಗಿಯರನ್ನು ಸೆಳೆದಿದೆ. ಅಲ್ಲದೇ, ಈ ಫ್ಯಾಷನ್‌ ಟ್ರೆಂಡಿಯಾಗಲು ಕಾರಣವಾಗಿದೆ.

4/5

ಸ್ಟ್ರಾಪ್‌ ಕುರ್ತಾ-ಧೋತಿ ಡಿಸೈನರ್‌ವೇರ್ಸ್

ಅಂದಹಾಗೆ, ಇತರೇ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿದ್ದ, ಈ ಕುರ್ತಾ –ಧೋತಿ ಡಿಸೈನರ್‌ವೇರ್ಸ್ ಈ ಸೀಸನ್‌ಗೆ ಹೊಂದುವಂತೆ ಕೊಂಚ ರೂಪ ಬದಲಿಸಿ ಬಂದಿವೆ. ಈ ವೆಡ್ಡಿಂಗ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ ಕೆಟಗರಿಯಲ್ಲಿ, ಸ್ಲೀವ್‌ ಬದಲು ಸ್ಟ್ರಾಪ್‌ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಸೆಕೆಯನ್ನು ತಡೆಯುವಂತಹ ಈ ಡಿಸೈನ್‌ಗಳು ಸದ್ಯ ಜೆನ್‌ ಜಿ ಹುಡುಗಿಯರಿಗೆ ಪ್ರಿಯವಾಗಿವೆ ಎನ್ನುತ್ತಾರೆ ಡಿಸೈನರ್ಸ್.

5/5

ಗ್ರ್ಯಾಂಡ್‌ ಲುಕ್‌ ನೀಡುವ ಸ್ಟ್ರಾಪ್‌ ಕುರ್ತಾ-ಧೋತಿ ಸ್ಟೈಲಿಂಗ್‌ ಹೇಗೆ?

  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸ ಆಯ್ಕೆ ಮಾಡಿ.
  • ಸ್ಟ್ರಾಪ್‌ ಕುರ್ತಾಗಳು ದೇಹದ ಮೇಲ್ಭಾಗವನ್ನು ಎಕ್ಸ್‌ಪೋಸ್‌ ಮಾಡುತ್ತವೆ ಎಂಬುದು ಗಮನದಲ್ಲಿರಲಿ.
  • ದುಪಟ್ಟಾಗಳನ್ನು ಬಳಸಿದಲ್ಲಿ ಅಗತ್ಯವಿದ್ದಾಗ ಹೊದ್ದುಕೊಳ್ಳಬಹುದು.
  • ಆದಷ್ಟೂ ಸ್ಟ್ರಾಪ್‌ ಡಿಸೈನ್‌ ನಿಮಗೆ ಫಿಟ್‌ ಆಗಿ ಹೊಂದುಕೊಳ್ಳುವಂತಿರಲಿ.
  • ಟ್ರೆಂಡಿಯಾಗಿರುವ ಕಲರ್ಸ್‌, ವಿನ್ಯಾಸವನ್ನು ಆಯ್ಕೆ ಮಾಡಿ.
  • ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತದೆ.

ಶೀಲಾ ಸಿ ಶೆಟ್ಟಿ

View all posts by this author