ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಜೆನ್‌ ಜಿ ಫ್ಯಾಷನ್‌ಗೆ ಕಾಲಿಟ್ಟ ಸ್ಟ್ರೈಪ್ಡ್ ಮಿನಿ ಡ್ರೆಸ್‌

Striped Mini Dress: ಈ ಸಮ್ಮರ್‌ನಲ್ಲಿ ಸ್ಟ್ರೈಪ್ಸ್ ವಿನ್ಯಾಸವಿರುವಂತಹ ಮಿನಿ ಲೇಸ್‌ ಡ್ರೆಸ್‌ಗಳು ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದ್ಯಾವ ಬಗೆಯ ಔಟ್‌ಫಿಟ್‌? ಏನಿದರ ಸ್ಪೆಷಾಲಿಟಿ? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಸೋನಾಲಿ ಗುಪ್ತಾ, ನಟಿ
1/5

ಜೆನ್‌ ಜಿ ಹುಡುಗಿಯರ ಬೇಸಿಗೆಯ ಫ್ಯಾಷನ್‌ನಲ್ಲಿ ಇದೀಗ ಸ್ಟ್ರೈಪ್ಡ್ ಮಿನಿ ಡ್ರೆಸ್‌ಗಳು ಕಾಲಿಟ್ಟಿವೆ.

2/5

ಬಗೆಬಗೆಯ ಸ್ಟ್ರೈಪ್ಸ್ ವಿನ್ಯಾಸ

ಹೌದು, ಈ ಸಮ್ಮರ್‌ನಲ್ಲಿ ಇದೀಗ ನಾನಾ ಬಗೆಯ ಲೈನ್ಸ್ ಪ್ರಿಂಟ್‌ ಇರುವಂತಹ ಬಿಗ್‌, ಸ್ಮಾಲ್‌ ಸ್ಟ್ರೈಪ್ಸ್ ವಿನ್ಯಾಸವಿರುವಂತಹ ಮಿನಿ ಲೇಸ್‌ ಡ್ರೆಸ್‌ಗಳು ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

3/5

ಶರ್ಟ್ಸ್ ಸ್ಟ್ರೈಪ್ಸ್‌ನಂತೆ ಕಾಣಿಸುವ ಡ್ರೆಸ್‌

ಶರ್ಟ್ ಸ್ಟ್ರೈಪ್ಸ್‌ನಂತೆ ಕಾಣಿಸುವ ಈ ಲೈನ್‌ಗಳ ಪ್ರಿಂಟ್‌ ಇರುವ ಮಿನಿ ಡ್ರೆಸ್‌ಗಳು ಜೆನ್‌ ಜಿ ಹುಡುಗಿಯರನ್ನು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರನ್ನು ಸೆಳೆದಿವೆ. ಇವುಗಳಲ್ಲೇ ನಾನಾ ಬಗೆಯ ಡ್ರೆಸ್‌ಗಳು ಕೂಡ ಬಿಡುಗಡೆಗೊಂಡಿವೆ.

4/5

ಸೋನಾಲಿ ಗುಪ್ತಾ ಧರಿಸಿದ್ಧ ಸ್ಟ್ರೈಪ್ಡ್ ಮಿನಿ ಡ್ರೆಸ್‌

ಇನ್ನು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಸೋನಾಲಿ ಗುಪ್ತಾ ಧರಿಸಿದ್ಧ ಸ್ಟ್ರೈಪ್ಸ್ ಇರುವಂತಹ ಕೌಲ್‌ ನೆಕ್‌ಲೈನ್‌ ಇದ್ದ ಸ್ಟ್ರೈಪ್ಡ್ ಮಿನಿ ಲೇಸ್‌ ಡ್ರೆಸ್‌ ಫ್ಯಾಷನ್‌ಲೋಕದಲ್ಲಿ ಸಖತ್‌ ಟ್ರೆಂಡಿಯಾಗಿತ್ತು. ಆನ್‌ಲೈನ್‌ನಲ್ಲಂತೂ ಇವುಗಳ ಮಾರಾಟ ಹೆಚ್ಚಾಗಿಯೇ ಇತ್ತು ಎನ್ನುವ ಸ್ಟೈಲಿಸ್ಟ್‌ಗಳ ಪ್ರಕಾರ, ಹುಡುಗಿಯರ ಡಿಫರೆಂಟ್‌ ಲುಕ್‌ಗೆ ಇವು ಸಾಥ್‌ ನೀಡುವುದರೊಂದಿಗೆ ವಿಭಿನ್ನವಾಗಿ ಬಿಂಬಿಸುತ್ತವೆ ಎನ್ನುತ್ತಾರೆ.

5/5

ಸ್ಟ್ರೈಪ್ಡ್ ಮಿನಿ ಡ್ರೆಸ್‌ ಸ್ಟೈಲಿಂಗ್‌ ಹೀಗಿರಲಿ

  • ಡ್ರೆಸ್‌ ಡಿಸೈನ್‌ ಆಧಾರದ ಮೇಲೆ ಸ್ಟೈಲಿಂಗ್‌ ಮಾಡಿಕೊಳ್ಳಿ.
  • ಮಾಡರ್ನ್‌ ಲುಕ್‌ ಬಯಸುವವರಿಗೆ ಬೆಸ್ಟ್ ಡ್ರೆಸ್‌ ಎನ್ನಬಹುದು.
  • ಸಮ್ಮರ್‌ ಲುಕ್‌ಗೆ ಚೆನ್ನಾಗಿ ಕಾಣೀಸುತ್ತದೆ.
  • ಹುಡುಗಿಯರನ್ನು ಅಂದವಾಗಿ ಬಿಂಬಿಸುತ್ತದೆ.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author