ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಬೇಸಿಗೆಯಲ್ಲಿ ಉಲ್ಲಾಸ ಹೆಚ್ಚಿಸುವ ಮ್ಯಾಕ್ಸಿ ಗೌನ್‌ ಸ್ಟೈಲಿಂಗ್‌

Maxi Gowns: ಸಮ್ಮರ್‌ನಲ್ಲಿ ಸ್ಟೈಲಿಶ್‌ ಮ್ಯಾಕ್ಸಿ ಗೌನ್‌ಗಳು ಪ್ರಚಲಿತಕ್ಕೆ ಬರುತ್ತವೆ. ಯಾವ ಬಗೆಯ ಮ್ಯಾಕ್ಸಿ ಗೌನ್‌ ಈ ಸೀಸನ್‌ಗೆ ಸೂಕ್ತ? ಆಯ್ಕೆ ಹಾಗೂ ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಇಲ್ಲಿ ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಪಿಕ್ಸೆಲ್‌
1/5

ಸಮ್ಮರ್‌ನಲ್ಲಿ ಟ್ರೆಂಡಿಯಾಗಿರುವ ಸ್ಟೈಲಿಶ್‌ ಮ್ಯಾಕ್ಸಿ ಗೌನ್‌ಗಳು ಈ ಬಾರಿಯ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಈ ಸೀಸನ್‌ನಲ್ಲಿ ಈ ಶೈಲಿಯ ಔಟ್‌ಫಿಟ್‌ಗಳನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಖರೀದಿಸುವಾಗ ಆಯ್ಕೆ ಮಾಡುವುದು ಹೇಗೆ? ಈ ಎಲ್ಲದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

2/5

ಬೇಸಿಗೆಗೆ ತಕ್ಕ ಮ್ಯಾಕ್ಸಿ ಖರೀದಿ

ಈ ಸೀಸನ್‌ನಲ್ಲಿ ಆದಷ್ಟೂ ಮ್ಯಾಕ್ಸಿ ಖರೀದಿಸುವಾಗ ಅವು ಈ ಸೀಸನ್‌ಗೆ ಸೂಕ್ತವೇ! ಧರಿಸಿದಾಗ ಆರಾಮ ಎಂದೆನಿಸುತ್ತದೆಯೇ? ವಿನ್ಯಾಸ ಟ್ರೆಂಡಿಯಾಗಿದೆಯೇ? ಎಲ್ಲವನ್ನೂ ಗಮನಿಸಿ. ಸಾಧ್ಯವಾದಲ್ಲಿ ಟ್ರಯಲ್‌ ನೋಡಿ ಕೊಳ್ಳಿ.

ಕಟೌಟ್‌ / ಸ್ಲಿಟ್‌ ಮ್ಯಾಕ್ಸಿ ಪ್ರಿಫರ್‌ ಮಾಡಿ

ನಿಮ್ಮ ವೆಕೇಷನ್‌ಗೆ ಸಾಥ್‌ ನೀಡುವಂತಹ ಕಟೌಟ್‌ ಅಥವಾ ಲಾಂಗ್‌ ಸ್ಲಿಟ್‌ ಮ್ಯಾಕ್ಸಿಗಳನ್ನು ಆಯ್ಕೆ ಮಾಡಿ, ಧರಿಸಿ. ಇವು ಗಾಳಿಯಾಡುವಂತಹ ಡಿಸೈನ್‌ ಹೊಂದಿರುವುದರಿಂದ ಸೆಕೆಯಲ್ಲೂ ಕಂಫರ್ಟಬಲ್‌ ಎಂದೆನಿಸುವುದು.

3/5

ಮ್ಯಾಕ್ಸಿ ಫ್ಯಾಬ್ರಿಕ್‌ ಆಯ್ಕೆ ಹೀಗಿರಲಿ

ನಿಮ್ಮ ಆಯ್ಕೆಯ ಮ್ಯಾಕ್ಸಿ ಈ ಸೀಸನ್‌ಗೆ ಧರಿಸುವುದಾದಲ್ಲಿ ಆದಷ್ಟೂ ಲೈಟ್‌ವೈಟ್‌ ಇರಬೇಕು. ಜೊತೆಗೆ ಫ್ಯಾಬ್ರಿಕ್‌ ಸಾಫ್ಟಾಗಿರಬೇಕು. ಜೊತೆಗೆ ಉಸಿರಾಡುವಂತಿರಬೇಕು.

4/5

ಟ್ರೆಂಡಿಯಾಗಿರುವ ಪ್ರಿಂಟೆಡ್‌ ಮ್ಯಾಕ್ಸಿ

ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟೂ ಬಗೆಯ ಪ್ರಿಂಟೆಡ್‌ ಮ್ಯಾಕ್ಸಿಗಳು ಟ್ರೆಂಡ್‌ನಲ್ಲಿವೆ. ಅಂತಹ ಮ್ಯಾಕ್ಸಿಗಳನ್ನೇ ಹುಡುಕಿ ಆಯ್ಕೆ ಮಾಡಿ. ಹೂಗಳ ಚಿತ್ತಾರವಿರುವ ಮ್ಯಾಕ್ಸಿಗಳು ನಿಮ್ಮನ್ನು ಇಡೀ ದಿನ ಉಲ್ಲಾಸದಿಂದ ಇರಿಸಬಹುದು.

5/5

ಮ್ಯಾಕ್ಸಿ ಮೇಕೋವರ್‌ ಸಿಂಪಲ್ಲಾಗಿರಲಿ

ಮ್ಯಾಕ್ಸಿ ಧರಿಸುವುದು ಮಾತ್ರವಲ್ಲ, ಆ ಮ್ಯಾಕ್ಸಿಗೆ ಧರಿಸುವ ಆಕ್ಸೆಸರೀಸ್‌ ಸಿಂಪಲ್ಲಾಗಿರಬೇಕು. ಹೇರ್‌ಸ್ಟೈಲ್‌ ಕೂಡ ಮ್ಯಾಚ್‌ ಆಗುವಂತಿರಲಿ. ಮೇಕಪ್‌ ತಿಳಿಯಾಗಿರಲಿ.

ಶೀಲಾ ಸಿ ಶೆಟ್ಟಿ

View all posts by this author