ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Summer Fashion 2026: ಶುರುವಾಯ್ತು ಸಮ್ಮರ್ ಫ್ಯಾಷನ್ ಹಂಗಾಮ!

ಈ ಬಾರಿಯ ಸಮ್ಮರ್ ಫ್ಯಾಷನ್‌ಗೆ ರೆಡಿಯಾಗಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು. ಈಗಾಗಲೇ ಲೇಯರ್ ಲುಕ್‌ಗೆ ಇತಿಶ್ರೀ ಸಿಕ್ಕಿದ್ದು, ವೈವಿಧ್ಯಮಯ ಸಮ್ಮರ್ ಲುಕ್ ಫ್ಯಾಷನ್ ಪ್ರಿಯರನ್ನು ಸವಾರಿ ಮಾಡತೊಡಗಿದೆ. ಈ ಬಾರಿಯ ಫ್ಯಾಷನ್‌ನಲ್ಲಿ ಪ್ರಮುಖವಾಗಿ ಏನೇನಿದೆ? ಯಾವುದೆಲ್ಲಾ ಟ್ರೆಂಡ್‌ನಲ್ಲಿದೆ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಸಮ್ಮರ್ ಫ್ಯಾಷನ್ ಈಗಾಗಲೇ ಹಂಗಾಮ ಎಬ್ಬಿಸಿದೆ. ಹೌದು, ಈಗಾಗಲೇ ಲೇಯರ್ ಲುಕ್‌ಗೆ ಇತಿಶ್ರೀ ಸಿಕ್ಕಿದ್ದು, ವೈವಿಧ್ಯಮಯ ಸಮ್ಮರ್ ಲುಕ್ ಫ್ಯಾಷನ್ ಪ್ರಿಯರನ್ನು ಸವಾರಿ ಮಾಡತೊಡಗಿದೆ.

2/5

ಸಮ್ಮರ್ ವೆಸ್ಟರ್ನ್ ಫ್ಯಾಷನ್‌ನಲ್ಲಿ ಏನೇನಿದೆ?

ಎಂದಿನಂತೆ ಈ ಬಾರಿಯ ಸಮ್ಮರ್ ಫ್ಯಾಷನ್ನಲ್ಲೂ ಬಿಗ್ ಬ್ಲಾಸಾಮ್ಸ್, ಬಗೆಬಗೆಯ ಫ್ಲೋರಲ್ಸ್, 90 ಡಿಗ್ರಿ ಕೋಲ್ಡ್ & ಆಫ್ ಶೋಲ್ಡರ್ಸ್, ಗಿಗ್ನಂನ ವೆರೈಟಿ ಡಿಸೈನ್ಸ್, ಹೈ ಶೈನ್ ಮೆಟಾಲಿಕ್ ಶೇಡ್ಸ್ ಪಾರ್ಟಿವೇರ್ಸ್, ಕೊರಿಯನ್ ಡ್ರೆಸ್, ಕೋ ಆರ್ಡ್ಸ್, ಐಸ್ ಬ್ಲ್ಯೂ, ಕರೆಂಟ್ ಬ್ಲ್ಯೂ ಶೇಡ್‌ನ ಪ್ರಯೋಗಾತ್ಮಕ ಡಿಸೈನರ್‌ವೇರ್ಸ್, ಕಟೌಟ್ ಡ್ರೆಸ್‌ಗಳು, ವೈಬ್ರೆಂಟ್ ಸ್ಪೋರ್ಟಿ ಲುಕ್ಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಕಲರ್ಸ್, ಪ್ರಿಂಟ್ಸ್ ಹಾಗೂ ಡಿಸೈನ್ನವು ಪ್ರಮುಖವಾಗಿ ಸಮ್ಮರ್ ಫ್ಯಾಷನ್‌ನ ಜೋಷ್ ಹೆಚ್ಚಿಸಿವೆ.

3/5

ಜೆನ್ ಜಿ ಸಮ್ಮರ್ ಫ್ಯಾಷನ್

ಇನ್ನು, ಜೆನ್ ಜಿ ಫ್ಯಾಷನ್ ಬಗ್ಗೆ ಹೇಳುವುದಾದಲ್ಲಿ ಈ ಬಾರಿ ಎಲ್ಲವೂ ದೊಗಲೆ & ಫಿಟ್ ಕಾನ್ಸೆಪ್ಟ್‌ನಲ್ಲಿ ಎಂಟ್ರಿ ನೀಡಿವೆ. ಅದು ಬ್ಯಾಗಿ ಪ್ಯಾಂಟ್ ಇರಬಹುದು. ಅದಕ್ಕೆ ಧರಿಸುವ ಟೈಟ್ ಶಾರ್ಟ್ ಕ್ರಾಪ್ ಟಾಪ್ ಆಗಬಹುದು. ಒಟ್ಟಿನಲ್ಲಿ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ ಜಾರಿಯಾಗಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ರಿಜ್ವಾನ್.

4/5

ಈ ವರ್ಷದ ಫ್ಯಾಷನ್‌ನ ಪ್ರಯೋಗಾತ್ಮಕ ಕಲರ್ಸ್

ಅಂದಹಾಗೆ, ಈ ವರ್ಷದ ಕಲರ್ಸ್ ಎಂದಾಕ್ಷಣ ಅದು ಇಡೀ ವರ್ಷ ಅದನ್ನೇ ಫಾಲೋ ಮಾಡಬೇಕಂತಲ್ಲ! ಹೆಸರುವಾಸಿಯಾದ ಫ್ಯಾಷನಿಸ್ಟಾಗಳು ಅವನ್ನು ಪ್ರಿಡಿಕ್ಟ್ ಮಾಡುತ್ತಾರಷ್ಟೇ! ನಂತರ ಹೈ ಬ್ರಾಂಡ್‌ಗಳು ಪರಿಗಣಿಸಿ ಅದೇ ವರ್ಣಗಳಲ್ಲಿ, ವರ್ಷದ ಉಡುಗೆಗಳನ್ನು ಬಿಡುಗಡೆ ಮಾಡುತ್ತಾರೆ. ಅವುಗಳಲ್ಲಿ ಐಸ್ ಬ್ಲ್ಯೂ, ಪೀಚ್, ಬಬ್ಬಲ್ಗಮ್ ಪಿಂಕ್, ಲೈಮ್, ಪರ್ಪಲ್, ಟೊಮ್ಯಾಟೋ, ಅರ್ತಿ & ವಾರ್ಮ್ ಟೋನ್ಸ್ ಸೇರಿದಂತೆ ನಾನಾ ಶೇಡ್‌ಗಳು ಈ ಬಾರಿಯ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್.

5/5

ಸಮ್ಮರ್ ಎಥ್ನಿಕ್‌ವೇರ್ಸ್

ಇನ್ನು, ಈ ಬಾರಿಯ ಸಮ್ಮರ್‌ನಲ್ಲಿ ಎಥ್ನಿಕ್‌ವೇರ್ಸ್ ಕೊಂಚ ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಟೀನೇಜ್ ಹುಡುಗಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಧರಿಸಬಹುದಾದಂತಹ ಡಿಸೈನ್‌ಗಳು ಚಾಲ್ತಿಗೆ ಬಂದಿವೆ. ಉದಾಹರಣೆಗೆ, ತ್ರಿ ಪೀಸ್ ಕೋ ಆರ್ಡ್ಸ್, ಲೆನಿನ್, ಕಾಟನ್ ಲಾಂಗ್ ಫ್ರಾಕ್ಸ್, ಲೈಟ್‌ವೇಟ್ ಸೆಲ್ವಾರ್, ಜಾರ್ಜೆಟ್ ಶಿಫಾನ್ ಹಾಲ್ಟರ್ ನೆಕ್ಲೈನ್ ಸೆಲ್ವಾರ್ ಹಾಗೂ ಕುರ್ತಾಗಳು ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೀತ್.

ಇನ್ನುಳಿದಂತೆ, ದಿನಕಳೆದಂತೆ ಮತ್ತೊಂದಿಷ್ಟು ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಒಂದರ ನಂತರ ಒಂದು ಬಿಡುಗಡೆಗೊಳ್ಳಲಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author