ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಬದಲಾಯ್ತು ಜೆನ್‌ ಜಿ ಯುವತಿಯರ ಬಾರ್ಬಿ ಲುಕ್‌

Barbie Look: ಜೆನ್‌ ಜಿ ಹುಡುಗಿಯರ ಬಾರ್ಬಿ ಲುಕ್‌ ಬದಲಾಗಿದೆ. ರೆಟ್ರೊ ಲುಕ್‌ನಲ್ಲಿದ್ದ ಈ ಲುಕ್‌ಗೆ ಮಾಡರ್ನ್‌ ಟಚ್‌ ಸಿಕ್ಕಿದೆ. ಹಳೇ ಫ್ಯಾಷನ್‌ ಥೀಮ್‌ಗೆ ಇದೀಗ ಹೊಸ ಕಾನ್ಸೆಪ್ಟ್‌ ಜತೆಯಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ನಟಿ, ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ಪ್ರತಿಭಾ ರತ್ನಾ
1/5

ಜೆನ್‌ ಜಿ ಯುವತಿಯರ ಬಾರ್ಬಿ ಲುಕ್‌ ಬದಲಾಗಿದೆ. ಹೌದು. ಮಾಡರ್ನ್‌ ಹುಡುಗಿಯರ ಸ್ಟೈಲಿಂಗ್‌ಗೆ ತಕ್ಕಂತೆ ರೀಕ್ರಿಯೇಟ್‌ ಆಗಿದೆ.

2/5

ಟ್ರೆಂಡಿಯಾಗಿದ್ದ ಬಾರ್ಬಿ ಲುಕ್‌

ಒಂದೆರೆಡು ದಶಕಗಳ ಹಿಂದೆ ಬಾರ್ಬಿ ಲುಕ್‌ ಟ್ರೆಂಡಿಯಾಗಿತ್ತು. ತದನಂತರ ರೆಟ್ರೋ ಫ್ಯಾಷನ್‌ಗೆ ಸೇರ್ಪಡೆಗೊಂಡಿತು. ಕಾಲಕಳೆದಂತೆ ಬರಬರುತ್ತಾ ಈ ಫ್ಯಾಷನ್‌ ಕೊಂಚ ಸೈಡಿಗೆ ಸರಿಯುವುದರ ಜತೆಗೆ ಇತರೇ ಫ್ಯಾಷನ್‌ ಕಾನ್ಸೆಪ್ಟ್‌ನಲ್ಲಿ ಒಂದಾಗಿತ್ತು. ಆಗಾಗ್ಗೆ ಕಾಲೇಜು ಹಾಗೂ ಫ್ಯಾಷನ್‌ ಶೋಗಳಲ್ಲಿ ಥೀಮ್‌ ಹಾಗೂ ಕಾನ್ಸೆಪ್ಟ್‌ಗೆ ತಕ್ಕಂತೆ ಕಾಣಿಸಿಕೊಳ್ಳುತ್ತಿತ್ತು ಎನ್ನುತ್ತಾರೆ ಫ್ಯಾಷನಿಸ್ಟಾ ರಿಮಾ.

3/5

ಜೆನ್‌ ನೆಕ್ಸ್ಟ್‌ ಸ್ಟಾರ್‌ ಪ್ರತಿಭಾ ರತ್ನಾ ಬಾರ್ಬಿ ಲುಕ್‌

ಇನ್ನು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಜೆನ್‌ ನೆಕ್ಸ್ಟ್‌ ಸ್ಟಾರ್‌ ಎಂದೇ ಖ್ಯಾತಿ ಗಳಿಸಿರುವ ಯುವ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ಹಾಗೂ ನಟಿ ಪ್ರತಿಭಾ ರತ್ನಾ ಕಾಣಿಸಿಕೊಂಡ ಬಾರ್ಬಿ ಲುಕ್‌ ಮತ್ತೊಮ್ಮೆ ಈ ರೆಟ್ರೋ ಲುಕ್ಕನ್ನು ಮರುಕಳಿಸಲು ಕಾರಣವಾಯಿತು. ಅವರ ಬಾರ್ಬಿ ಇನ್ಸ್ಪೈರ್ಡ್‌ ಲುಕ್‌ ಯಾವ ಮಟ್ಟಿಗೆ ಮತ್ತೊಮ್ಮೆ ಟ್ರೆಂಡ್‌ ಹುಟ್ಟು ಹಾಕಿತೆಂದರೇ, ರೆಟ್ರೋ ಕೆಟಗರಿಯಲ್ಲಿದ್ದ ಈ ಫ್ಯಾಷನ್‌ ಅನ್ನು ಮರುಕಳಿಸುವಲ್ಲಿ ಯಶಸ್ವಿಯಾಯಿತು. ಜೆನ್‌ ಜಿ ಹುಡುಗಿಯರನ್ನು ಹೊಸ ಲುಕ್‌ ಮೂಲಕ ಸೆಳೆಯಿತು. ಜೆನ್‌ ಜಿ ಹುಡುಗಿಯರ ಅಮ್ಮನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಈ ಟ್ರೆಂಡ್‌ ಮತ್ತೊಮ್ಮೆ ಹೊಸ ರೂಪದಲ್ಲಿ ಮರಳಿ ಕಾಣಿಸಿಕೊಂಡಿತು ಎಂದು ವಿವರಿಸುತ್ತಾರೆ ಸ್ಟೈಲಿಸ್ಟ್‌ ರಿಚಾ.

4/5

ಬದಲಾದ ಬಾರ್ಬಿ ಲುಕ್‌

ಮೊದಲೆಲ್ಲಾ ಬಾರ್ಬಿ ಲುಕ್‌ ಎಂದರೇ ಕ್ಯೂಟ್‌ ಲುಕ್‌ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈ ಜನರೇಷನ್‌ ಹುಡುಗಿಯರು ಮಾತ್ರ ಈ ಲುಕ್‌ ಜತೆ ಜತೆಗೆ ಒಂದಿಷ್ಟು ಅಲ್ಟ್ರಾ ಮಾಡರ್ನ್‌ ಲುಕ್‌ಗೆ ಸಾಥ್‌ ನೀಡುವಂತಹ ಸ್ಟೈಲಿಂಗ್‌ ಕಾನ್ಸೆಪ್ಟನ್ನು ಸೇರಿಸಿದ್ದಾರೆ. ಉದಾಹರಣೆಗೆ., ಮಿನಿ ಫ್ರಾಕ್‌ನ ಸಾಫ್ಟ್‌ ಫ್ಯಾಬ್ರಿಕ್‌ ಬದಲಿಗೆ ಮಿನಿ ಶಾರ್ಟ್ಸ್‌, ಮಿನಿ ಡ್ರೆಸ್‌ಗಳಲ್ಲಿ ಇದೀಗ ನಾನಾ ಬಗೆಯ ಶಿಮ್ಮರ್‌ ಹಾಗೂ ಶೈನಿಂಗ್‌ ನೀಡುವಂತಹ ಅರ್ಗಾನ್ಜಾ, ಟಿಶ್ಯೂ ಹಾಗೂ ಸಿಲ್ಕ್‌ ಫ್ಯಾಬ್ರಿಕ್‌ ಸೇರಿಕೊಂಡಿರುವುದು ಹಾಗೂ ನೆಕ್‌ಲೈನ್‌ ಹಾಗೂ ಡಿಸೈನ್‌ಗಳು ಬದಲಾಗಿರುವುದು ಎನ್ನುತ್ತಾರೆ ಜೆನ್‌ ಜಿ ಹುಡುಗಿಯರಾದ ರಾಗ ಹಾಗೂ ಜೀನತ್‌.

ಜೆನ್‌ ಜಿ ಹುಡುಗಿಯರ ಬಾರ್ಬಿ ಲುಕ್‌ಗೆ ಸಾಥ್‌ ನೀಡುವ ಫ್ಯಾಷನ್‌ವೇರ್‌ಗಳಿವು

ಇನ್ನು, ಎವರ್‌ಗ್ರೀನ್‌ ಬಾರ್ಬಿ ಲುಕ್‌ ಫ್ಯಾಷನ್‌ವೇರ್ಸ್‌ ಎನ್ನಬಹುದಾದ ಪಿಂಕ್‌ ಶೇಡ್‌ನ ಮಿನಿ ಡ್ರೆಸ್‌ಗಳು, ಹಾಲ್ಟರ್‌ ನೆಕ್‌ಲೈನ್‌ ಇರುವಂತಹ ಮಿನಿ ಉಡುಗೆಗಳು, ಈ ಜನರೇಷನ್‌ನ ಜೆನ್‌ ಜಿ ಹುಡುಗಿಯರ ಬಾರ್ಬಿ ಲುಕ್‌ಗೆ ಸಾಥ್‌ ನೀಡುವ ಫ್ಯಾಷನ್‌ವೇರ್‌ಗಳಾಗಿವೆ ಎನ್ನುವ ಸ್ಟೈಲಿಸ್ಟ್‌ ಇವು ಈ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ ಎನ್ನುತ್ತಾರೆ.

5/5

ಬಾರ್ಬಿ ಲುಕ್‌ ಬಯಸುವ ಹುಡುಗಿಯರಿಗೆ ಸ್ಟೈಲಿಂಗ್‌ ಟಿಪ್ಸ್‌

  • ಆದಷ್ಟೂ ಪಿಂಕ್‌ ಶೇಡ್‌ನ ಡ್ರೆಸ್‌ ಆಯ್ಕೆ ಮಾಡಬೇಕು.
  • ಮಿನಿ ಡ್ರೆಸ್‌ ಬಾರ್ಬಿಯ ಲುಕ್‌ಗೆ ಸಾಥ್‌ ನೀಡುತ್ತವೆ.
  • ಫಂಕಿ ಲುಕ್‌ ಫ್ರೆಶ್‌ ಲುಕ್‌ ನೀಡುತ್ತದೆ.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಬೆಸ್ಟ್.‌
  • ಈ ಲುಕ್‌ ಮಾಡರ್ನ್‌ ಆಗಿರಲೇಬೇಕು.

ಶೀಲಾ ಸಿ ಶೆಟ್ಟಿ

View all posts by this author