ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಮ್ಮರ್‌ನಲ್ಲಿ ಟ್ರೆಂಡಿಯಾದ 3 ಶ್ವೇತ ವರ್ಣದ ಫ್ರಾಕ್‌ಗಳಿವು

ಸಮ್ಮರ್‌ನಲ್ಲಿ ಧರಿಸಿದಾಗ ಆರಾಮ ಎಂದೆನಿಸುವ ವಿನ್ಯಾಸದ ವೈಟ್‌ ಶೇಡ್‌ನ ಫ್ರಾಕ್‌ಗಳು ಟ್ರೆಂಡಿಯಾಗಿವೆ. ಬೇಸಗೆಯ ಬಿಸಿಲಿನಲ್ಲಿ ಧರಿಸಿದವರನ್ನು ಕೂಲಾಗಿ ಬಿಂಬಿಸುವ ಶ್ವೇತ ವರ್ಣದ ಫ್ರಾಕ್‌ಗಳು ಈಗಾಗಲೇ ಫ್ಯಾಷನ್‌ ಲೋಕದಲ್ಲಿ ಕಾಲಿಟ್ಟಿದ್ದು, ವಯಸ್ಸಿನ ಭೇದ-ಭಾವವಿಲ್ಲದೇ ಯುವತಿಯರನ್ನು ಸವಾರಿ ಮಾಡತೊಡಗಿವೆ. ಅವು ಯಾವುವು? ವಿಶೇ‍ಷತೆಯೇನು? ಇಲ್ಲಿದೆ ವಿವರ.

ಚಿತ್ರಗಳು: ಮಲ್ಹಾರ್‌ ರಾಥೋಡ್‌, ನಟಿ
1/5

ವೈಟ್‌ ಶೇಡ್‌ನ ಫ್ರಾಕ್‌

ಈ ಬಾರಿಯ ಸಮ್ಮರ್‌ನಲ್ಲಿ ಮನಸ್ಸಿಗೆ ತಂಪನ್ನೆರೆಯುವ ವೈಟ್‌ ಶೇಡ್‌ನ ಫ್ರಾಕ್‌ಗಳು ಟ್ರೆಂಡಿಯಾಗಿವೆ. ಹೌದು, ಬೇಸಗೆಯ ಬಿಸಿಲಿನಲ್ಲಿ ಧರಿಸಿದವರನ್ನು ಕೂಲಾಗಿ ಬಿಂಬಿಸುವ ಶ್ವೇತ ವರ್ಣದ ಫ್ರಾಕ್‌ಗಳು ಈಗಾಗಲೇ ಫ್ಯಾಷನ್‌ ಲೋಕದಲ್ಲಿ ಕಾಲಿಟ್ಟಿದ್ದು, ವಯಸ್ಸಿನ ಭೇದ-ಭಾವವಿಲ್ಲದೆ ಎಲ್ಲರನ್ನೂ ಆಕರ್ಷಿಸತೊಡಗಿದೆ.

2/5

ವೈಟ್‌ ಫ್ರಾಕ್‌ ಪ್ರಿಯೆ ಮಲ್ಹಾರ್‌ ರಾಥೋಡ್‌

ನಟಿ ಹಾಗೂ ಮಾಡೆಲ್‌ ಮಲ್ಹಾರ್‌ ರಾಥೋಡ್‌ ಮೊದಲಿನಿಂದಲೂ ವೈಟ್‌ ಫ್ರಾಕ್ಸ್ ಪ್ರಿಯೆ. ಇದಕ್ಕೆ ಸಾಕ್ಷಿ ಎಂಬಂತೆ, ಅವರು ಇತ್ತೀಚಿನ ನಾನಾ ಫ್ಯಾಷನ್‌ ಶೂಟ್‌ಗಳಲ್ಲೂ ವೈಟ್‌ ಫ್ರಾಕ್‌ಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿದ್ಧ ಬಹುತೇಕ ಫ್ರಾಕ್‌ಗಳೆಲ್ಲವೂ ಇದೀಗ ಈ ಸೀಸನ್‌ನ ಟಾಪ್‌ ಲಿಸ್ಟ್‌ಗೆ ಸೇರಿವೆ ಎನ್ನುವ ಫ್ಯಾಷನಿಸ್ಟಾಗಳು, ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ 3 ಬಗೆಯ ಫ್ರಾಕ್‌ಗಳ ಬಗ್ಗೆ ವಿವರಿಸಿದ್ದಾರೆ.

3/5

ಫ್ರಿಂಜ್‌ ಕ್ರೊಚೆಟ್‌ ಮಿನಿ ಫ್ರಾಕ್‌

ಈ ಹೆಸರೇ ಹೇಳುವಂತೆ ಫ್ರಿಂಜ್‌ ಡಿಸೈನ್‌ ಹೊಂದಿರುವ ಈ ಕ್ರೊಚೆಟ್‌ ಮಿನಿ ಫ್ರಾಕ್‌ ಹಿಂದಿನಂತೆ ಕೇವಲ ಬೀಚ್‌ಸೈಡ್‌ಗೆ ಸೀಮಿತವಾಗಿಲ್ಲ! ಬದಲಿಗೆ ಸ್ಟ್ರೀಟ್‌ ಫ್ಯಾಷನ್‌ಗೆ ಸೇರಿಕೊಂಡಿದೆ. ಕ್ಯಾಶುವಲ್‌ ಲುಕ್‌ನಲ್ಲಿ ನಾನಾ ವಿನ್ಯಾಸದಲ್ಲಿ ಕಾಣಿಸಿಕೊಂಡಿದೆ. ಹಾರ್ಫ್ ವೈಟ್‌, ಮಿಲ್ಕಿ ವೈಟ್‌ನಲ್ಲೂ ಬಿಡುಗಡೆಗೊಂಡಿವೆ.

4/5

ಜಕಾರ್ಡ್ ಮಿಡಿ ಫ್ರಾಕ್‌

ಇವು ಕೂಡ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಮಿಡಿ ಡ್ರೆಸ್‌ನಂತೆ ಕಾಣಿಸುವ ಇವು ಅಗಲವಾದ ನೆಕ್‌ಲೈನ್‌ ಇಲ್ಲವೇ ಡೀಪ್‌ ನೆಕ್‌ಲೈನ್‌ಗಳಲ್ಲಿ ನಾನಾ ಬಗೆಯ ವೈಟ್‌ ಶೇಡ್‌ಗಳಲ್ಲಿ ಹುಡುಗಿಯರನ್ನು ಸೆಳೆದಿವೆ.

5/5

ಕಾಟನ್‌ ಹಕೋಬಾ ಫ್ರಾಕ್ಸ್

ಎ ಲೈನ್‌, ಮ್ಯಾಕ್ಸಿ ಸ್ಟೈಲ್‌ ಸೇರಿದಂತೆ ನಾನಾ ವಿನ್ಯಾಸದ ಶ್ವೇತ ವರ್ಣದ ಕಾಟನ್‌ನ ಹಕೋಬಾ ಫ್ರಾಕ್ಸ್ ಕೂಡ ಈ ಬಾರಿಯ ಸಮ್ಮರ್‌ ಫ್ರಾಕ್‌ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿದೆ. ಇವು ಕಂಫರ್ಟಬಲ್‌ ಫೀಲ್‌ ನೀಡುವುದರೊಂದಿಗೆ ಟ್ರೆಂಡಿಯಾಗಿಯೂ ಕಾಣಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಶೀಲಾ ಸಿ ಶೆಟ್ಟಿ

View all posts by this author