Summer Fashion 2026: ಸಮ್ಮರ್‌ಗೆ ಹೊಸ ರೂಪದಲ್ಲಿ ಮರಳಿದ ವೆರೈಟಿ ಕಾಟನ್ ಸೀರೆಗಳಿವು!
Cotton Sarees: ಎಂದಿನಂತೆ ಈ ಬಾರಿಯೂ ಸಮ್ಮರ್ ಸೀಸನ್‌ನಲ್ಲಿ ವೆರೈಟಿ ಕಲರ್‌ಫುಲ್ ಕಾಟನ್ ಸೀರೆಗಳು ಹೊಸ ರೂಪದಲ್ಲಿ ಮರಳಿವೆ. ಒಂದಿಷ್ಟು ಸಾದಾ ಡಿಸೈನ್‌ನಲ್ಲಿ ಆಗಮಿಸಿದ್ದರೇ, ಇನ್ನೊಂದಿಷ್ಟು ಪ್ರಿಂಟೆಡ್ ವಿನ್ಯಾಸದಲ್ಲಿ ಬಂದಿವೆ. ಮತ್ತೊಂದಿಷ್ಟು ಬಾರ್ಡರ್ ಲೆಸ್ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಮ್ಮರ್ ಸೀಸನ್‌ಗೆ ವೆರೈಟಿ ಕಲರ್‌ಫುಲ್ ಕಾಟನ್ ಸೀರೆಗಳು ಮರಳಿವೆ. ಒಂದಿಷ್ಟು ಸಾದಾ ಡಿಸೈನ್‌ನಲ್ಲಿ ಆಗಮಿಸಿದ್ದರೇ, ಇನ್ನೊಂದಿಷ್ಟು ಪ್ರಿಂಟೆಡ್ ವಿನ್ಯಾಸದಲ್ಲಿ ಬಂದಿವೆ. ಮತ್ತೊಂದಿಷ್ಟು ಬಾರ್ಡರ್ ಲೆಸ್ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.
ಸಾದಾ ಕಾಟನ್ ಸೀರೆಗಳ ಲೋಕ
ಅಂದಹಾಗೆ, ಸಾದಾ ಕಾಟನ್ ಸೀರೆಗಳು ಈ ಬಾರಿ ಒಂದಿಷ್ಟು ಕಲರ್‌ಫುಲ್ ರೆಡಿ ಟಾಸೆಲ್ಸ್‌ನೊಂದಿಗೆ ಬಂದಿವೆ. ಕಾಂಟ್ರಾಸ್ಟ್ ಟಾಸೆಲ್ಸ್ ಹಾಗೂ ಸೆರಗಿನೊಂದಿಗೆ ಆಗಮಿಸಿವೆ. ಇವು ಯಾವುದೇ ಕಾಂಟ್ರಾಸ್ಟ್ ಬ್ಲೌಸ್‌ನೊಂದಿಗೆ ಮ್ಯಾಚ್ ಮಾಡಬಹುದಾಗಿದ್ದು. ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿವೆ.
ಪ್ರಿಂಟೆಡ್ ಕಾನ್ ಸೀರೆಗಳು
ನಾನಾ ವರ್ಣಗಳಲ್ಲಿ ಹಾಗೂ ವಿನ್ಯಾಸದಲ್ಲಿ ಪ್ರಿಂಟೆಡ್ ಕಾಟನ್ ಸೀರೆಗಳು ಬಂದಿವೆ. ಅವುಗಳಲ್ಲಿ ಜೆಮೆಟ್ರಿಕ್ ಡಿಸೈನ್ಸ್, ವರ್ಲಿ, ಫ್ಲೋರಲ್ ಚಿತ್ತಾರ, ರಂಗೋಲಿ ಚಿತ್ತಾರ, ಪೋಲ್ಕಾ ಡಾಟ್ಸ್‌ನಲ್ಲಿ ಪ್ರಚಲಿತದಲ್ಲಿವೆ. ಇವು ಕೂಡ ಮಿಕ್ಸ್ ಮ್ಯಾಚ್ ಬ್ಲೌಸ್‌ನೊಂದಿಗೆ ಧರಿಸುವ ಕಾನ್ಸೆಪ್ಟ್‌ಗೆ ಸೈ ಎಂದಿವೆ.
ಬಾರ್ಡರ್‌ಲೆೆಸ್ ಕಾಟನ್ ಸೀರೆಗಳು
ಇತ್ತೀಚೆಗೆ ಬಾರ್ಡರ್‌ಲೆಸ್ ಕಾಟನ್ ಸೀರೆಗಳು ಸಖತ್ ಟ್ರೆಂಡಿಯಾಗಿವೆ. ಇವು ಇಂಡೋ-ವೆಸ್ಟರ್ನ್ ಸೀರೆ ಲುಕ್‌ಗೆ ಸಾಥ್ ನೀಡುತ್ತಿವೆ. ಇವನ್ನು ಹೇಗೆ ಬೇಕಾದರೂ ಡ್ರೇಪಿಂಗ್ ಮಾಡಬಹುದಾಗಿರುವುದರಿಂದ ಈ ಶೈಲಿಯ ಸೀರೆಗಳನ್ನು ಟೀನೇಜ್ ಹುಡುಗಿಯರಿಂದಿಡಿದು ಕಾರ್ಪೋರೇಟ್ ಯುವತಿಯರು ಕೂಡ ಪ್ರಿಫರ್ ಮಾಡುತ್ತಿದ್ದಾರೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.
ಬಗೆಬಗೆಯ ಕಾಟನ್ ಸೀರೆಗಳ ಮಹಾಪೂರ
ನಮ್ಮ ನೆಲದ ಇಳಕಲ್, ಉಡುಪಿ, ಗುಳೇದಗುಡ್ಡ ಖಾನಾ ಸೀರೆ, ಪಟ್ಟದ ಅಂಚುವಿನಿಂದಿಡಿದು ಇಕ್ಕಟ್, ಸಾಂಬಲ್ಪುರಿ, ವೆಂಕಟಗಿರಿ, ಚೆಟ್ಟಿನಾಡು, ಮಂಗಲಗಿರಿ, ಕಂಚಿ ಕಾಟನ್, ಜಮ್ದಾನಿಯ ಕಾಟನ್ ಸೀರೆಗಳು ಈ ಸೀಸನ್‌ನಲ್ಲಿ ಸೀರೆ ಲೋಕಕ್ಕೆ ಕಾಲಿಟ್ಟಿವೆ. ಟ್ರೆಂಡಿ ಕಲರ್‌ಗಳಲ್ಲಿ ಅವುಗಳಲ್ಲಿ ಪೀಚ್, ಪಿಸ್ತಾ, ಪಿಂಕ್, ವೈನ್, ಮಜೆಂತಾ, ಗ್ರೀನ್, ಆರೆಂಜ್ ಹೀಗೆ ನಾನಾ ಬಣ್ಣಗಳಲ್ಲಿ ಚಾಲ್ತಿಯಲ್ಲಿವೆ ಎನ್ನುತ್ತಾರೆ ಮಾರಾಟಗಾರರು.
ಕಾಟನ್ ಸೀರೆ ಪ್ರಿಯರಿಗೆ ಟಿಪ್ಸ್
- ಆಯಾ ಕಾಟನ್ ಸೀರೆಗಳ ನಿರ್ವಹಣೆ ತಿಳಿದುಕೊಳ್ಳಿ.
- ಕಲರ್ ಕಾಟನ್ ಸೀರೆ ನ್ಯಾಚುರಲ್ ಕಲರ್‌ನದ್ದೋ ಅಥವಾ ಯಾವುದು ಎಂಬುದು ತಿಳಿದಿರಲಿ.
- ಸಾಫ್ಟ್ ಕಾಟನ್ ಸೀರೆಗಳು ಅಗಲವಾಗಿ ಹರಡಿಕೊಳ್ಳುವುದಿಲ್ಲ.