Summer Fashion 2026: ಬೇಸಿಗೆಯಲ್ಲೂ ಕಾಲಿಟ್ಟ ರಫಲ್ ಡ್ರೆಸ್‌ಗಳಿವು!
Ruffle Dresses: ಬೇಸಿಗೆಯಲ್ಲೂ ನಾನಾ ಬಗೆಯ ರಫಲ್ ಡ್ರೆಸ್‌ಗಳು ಕಾಲಿಟ್ಟಿವೆ. ಅವು ಯಾವುವು? ಯಾವ್ಯಾವ ಡಿಸೈನ್‌ನಲ್ಲಿ ಚಾಲ್ತಿಯಲ್ಲಿವೆ? ಸ್ಟೈಲಿಂಗ್ ಹೇಗೆ? ಈ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಬೇಸಿಗೆಯ ಸೀಸನ್‌ಗೆ ಮ್ಯಾಚ್ ಆಗುವಂತಹ ವೈವಿಧ್ಯಮಯ ರಫಲ್ ಡ್ರೆಸ್‌ಗಳು ಲಗ್ಗೆ ಹಾಕಿವೆ.
ವಿಂಟರ್‌ನಲ್ಲಿ ಚಾಲ್ತಿಯಲ್ಲಿದ್ದ ಈ ಡಿಸೈನ್‌ನ ಡ್ರೆಸ್‌ಗಳು ಇದೀಗ ಈ ಸಮ್ಮರ್‌ನಲ್ಲೂ ಕಾಲಿಟ್ಟಿದ್ದು, ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಮಿನಿ, ಮಿಡಿ, ಸ್ಕರ್ಟ್‌ಗಳಲ್ಲಿ ಲೈಟ್ ಕಲರ್‌ನಲ್ಲಿ ಕಾಣಿಸಿಕೊಂಡಿವೆ.
ರಫಲ್ ಡ್ರೆಸ್ ವಿಶೇಷತೆ
ರಫಲ್ ಡ್ರೆಸ್‌ಗಳು ಮಲ್ಟಿ ಲೇಯರ್ ಹೊಂದಿರುತ್ತವೆ. ಇವನ್ನು ಲೇಯರ್ಡ್ ಡ್ರೆಸ್‌ಗಳೆಂದು ಸಿಂಪಲ್ ಆಗಿ ಹೇಳಬಹುದು. ಒಂದು ಉಡುಪಿನ ಮೇಲೆ ರೆಕ್ಕೆ ಪುಕ್ಕದಂತಹ ಫ್ರಿಲ್ ಡಿಸೈನ್‌ಗಳನ್ನು ಹೊಂದಿರುತ್ತವೆ. ಹಾಗೆಂದು ಇವು ನೆರಿಗೆ ಹೊಂದಿರುವುದಿಲ್ಲ, ಬದಲಿಗೆ ರಫಲ್ಸ್ ಹೊಂದಿರುತ್ತವೆ.
ಬೇಸಿಗೆಯಲ್ಲಿ ಟ್ರೆಂಡಿಯಾಗಿರುವ ರಫಲ್ ಡ್ರೆಸ್‌ಗಳು
ಇನ್ನು ಈ ಸೀಸನ್‌ನಲ್ಲಿ ರಫಲ್ ಡ್ರೆಸ್‌ಗಳು ಮಿನಿ-ಮಿಡಿ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ಲೈಟ್‌ವೈಟ್ ಇರುವಂತಹ ಫ್ಯಾಬ್ರಿಕ್‌ನ ಡ್ರೆಸ್‌ಗಳ ಮೇಲೆ ಇವು ಅಸ್ಸೆಮ್ಮಟ್ರಿಕ್ ವಿನ್ಯಾಸದಲ್ಲಿ ಇವು ವಿನ್ಯಾಸಗೊಂಡಿವೆ. ಅದು ಫ್ರಾಕ್ ಆಗಬಹುದು, ಇಲ್ಲವೇ ಮಿನಿ ಅಥವಾ ಮಿಡಿಯೂ ಆಗಬಹುದು. ಒಟ್ಟಿನಲ್ಲಿ, ಜೆನ್ ಜಿ ಹೆಣ್ಣುಮಕ್ಕಳು ಇಷ್ಟಪಡುವಂತಹ ವಿನ್ಯಾಸದ ಶಾರ್ಟ್ ಡ್ರೆಸ್‌ಗಳಲ್ಲಿ ಇವು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ರಫಲ್ ಡ್ರೆಸ್ ಸ್ಟೈಲಿಂಗ್‌ಗೆ 5 ಟಿಪ್ಸ್
- ಬೇಸಿಗೆಗೆ ಹೊಂದುವಂತಹ ಶಾರ್ಟ್ ಡ್ರೆಸ್ ಆಯ್ಕೆ ಮಾಡಿ.
- ರಫಲ್ ಗೌನ್ ಹಾಗೂ ಮ್ಯಾಕ್ಸಿ ಟ್ರೆಂಡ್‌ನಲ್ಲಿಲ್ಲ!
- ಹೆಚ್ಚು ಮೇಕೋವರ್ ಬೇಕಾಗುವುದಿಲ್ಲ.
- ಹಾಲಿಡೇ ಫ್ಯಾಷನ್‌ನಲ್ಲೂ ಧರಿಸಬಹುದು.
- ಸ್ಲಿವ್ ಇಲ್ಲದ ನೆಕ್‌ಲೈನ್‌ನವು ಚಾಲ್ತಿಯಲ್ಲಿವೆ.