ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion: ಹೀಗಿರಲಿ ಬೇಸಿಗೆಯ ಜಂಪ್‌ಸೂಟ್‌ ಸೆಲೆಕ್ಷನ್‌

ಬೇಸಿಗೆಯಲ್ಲಿ ಧರಿಸುವ ನಿಮ್ಮ ಜಂಪ್‌ಸೂಟ್‌ ಕಂಫರ್ಟಬಲ್‌ ಆಗಿರಬೇಕು. ಹಾಗಾಗಿ ಇವನ್ನು ಆಯ್ಕೆ ಮಾಡುವಾಗ ಒಂದಿಷ್ಟು ಟಿಪ್ಸ್‌ ಫಾಲೋ ಮಾಡುವುದು ಅಗತ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಒಂದಿಷ್ಟು ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಅಮೈರಾ ದಸ್ತೂರ್‌, ನಟಿ
1/5

ನೀವು ಜಂಪ್‌ಸೂಟ್‌ ಪ್ರಿಯರಾ! ಈ ಸೀಸನ್‌ನಲ್ಲೂ ಜಂಪ್‌ಸೂಟ್‌ ಧರಿಸುತ್ತೀರಾ! ಹೊಸ ಜಂಪ್‌ಸೂಟ್‌ ಖರೀದಿಸಬೇಕೆಂದುಕೊಂಡಿದ್ದೀರಾ! ಹಾಗಾದಲ್ಲಿ, ಇವನ್ನು ಸೆಲೆಕ್ಟ್‌ ಮಾಡುವಾಗ ಒಂದಿಷ್ಟು ಟಿಪ್ಸ್‌ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಟ್ರೆಂಡಿ ಹಾಗೂ ಸೀಸನ್‌ಗೆ ತಕ್ಕಂತೆ ಜಂಪ್‌ಸೂಟ್‌ ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಫಾಲೋ ಮಾಡಿದಲ್ಲಿ, ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ.

2/5

ಬೇಸಿಗೆಗೆ ತಕ್ಕಂತಿರಲಿ ಜಂಪ್‌ಸೂಟ್‌

ಬೇಸಿಗೆಯಲ್ಲಿ ಜಂಪ್‌ಸೂಟ್‌ ಧರಿಸುವವರು ಇವುಗಳನ್ನು ಕೊಳ್ಳುವಾಗ ಈ ಔಟ್‌ಫಿಟ್‌ಗಳು ಈ ಸೀಸನ್‌ಗೆ ಹೊಂದುತ್ತವೆಯೇ ಎಂಬುದನ್ನು ನೋಡಿಕೊಳ್ಳಬೇಕು. ಸಮ್ಮರ್‌ನಲ್ಲಿ ಟ್ರೆಂಡಿಯಾಗಿರುವಂತದ್ದನ್ನು ಮಾತ್ರ ಖರೀದಿಸಬೇಕು. ಇತರೇ ಸೀಸನ್‌ನವನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು.

3/5

ಸೀಸನ್‌ಗೆ ತಕ್ಕಂತೆ ಜಂಪ್‌ಸೂಟ್‌ ಫ್ಯಾಬ್ರಿಕ್‌ ಇರಲಿ

ಜಂಪ್‌ಸೂಟ್‌ಗಳನ್ನು ಎಲ್ಲಾ ಸೀಸನ್‌ನಲ್ಲೂ ಕಾಣಬಹುದು. ಆದರೆ, ಒಂದೊಂದು ಸೀಸನ್‌ನಲ್ಲೂ ಒಂದೊಂದು ಡಿಸೈನ್‌ನಲ್ಲಿ ಹಾಗೂ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಯಾಗುತ್ತವೆ. ಹಾಗಾಗಿ, ಈ ಸೀಸನ್‌ಗೆ ಹೊಂದುವಂತಹ ಫ್ಯಾಬ್ರಿಕ್‌ ಆಯ್ಕೆ ಮಾಡಿ ಖರೀದಿಸುವುದು ಅವಶ್ಯ. ಉದಾಹರಣೆಗೆ, ದಪ್ಪನೆ ಮೆಟಿರೀಯಲ್‌ನ ಫ್ಯಾಬ್ರಿಕ್‌ ಈ ಸೀಸನ್‌ಗೆ ಸೂಟ್‌ ಆಗದು. ನೈಲಾನ್‌, ಪಾಲಿಸ್ಟರ್‌ ಸೇರಿದಂತೆ ನಾನಾ ಬಗೆಯ ಗಾಳಿಯಾಡದಂತಹ ಫ್ಯಾಬ್ರಿಕ್‌ನವಂತವನ್ನು ಆದಷ್ಟೂ ಈ ಸೀಸನ್‌ನಲ್ಲಿ ಅವಾಯ್ಡ್‌ ಮಾಡಬೇಕು.

4/5

ಬೇಸಿಗೆಯಲ್ಲಿ ಪ್ರಿಂಟೆಡ್‌ ಜಂಪ್‌ಸೂಟ್ಸ್‌

ಈ ಬೇಸಿಗೆಯಲ್ಲಿ ನಾನಾ ಬಗೆಯ ಪ್ರಿಂಟೆಡ್‌ ಜಂಪ್‌ ಸೂಟ್ಸ್‌ ಟ್ರೆಂಡಿಯಾಗಿವೆ. ಉದಾಹರಣೆಗೆ., ಟ್ರಾಪಿಕಲ್‌ ಪ್ರಿಂಟ್ಸ್‌, ಫ್ಲೋರಲ್‌, ಜೆಮೆಟ್ರಿಕಲ್‌, ಅಬ್‌ಸ್ಟ್ರಾಕ್ಟ್‌ ಹೀಗೆ ಕಲರ್‌ಫುಲ್‌ ಪ್ರಿಂಟ್ಸ್‌ನವು ಪ್ರಚಲಿತದಲ್ಲಿವೆ. ಇಂತವನ್ನೇ ಆಯ್ಕೆ ಮಾಡಿ ಧರಿಸಿ. ಆಗ ಟ್ರೆಂಡಿಯಾಗಿ ಕಾಣಿಸುವಿರಿ.

ಜಂಪ್‌ಸೂಟ್‌ ನೆಕ್‌ಲೈನ್‌ ಸೀಸನ್‌ಗೆ ಹೊಂದುವಂತಿರಲಿ

ಬೇಸಿಗೆಯಲ್ಲಿ ಸ್ಟ್ರಾಪ್‌ಲೆಸ್‌, ಸ್ಟ್ರಾಪ್‌, ನೂಡಲ್‌ ಸ್ಟ್ರಾಪ್‌, ಸ್ಪೆಗೆಟಿ ಹಾಲ್ಟರ್‌ ನೆಕ್‌ಲೈನ್‌ ಹೀಗೆ ನಾನಾ ಬಗೆಯ ನೆಕ್‌ಲೈನ್‌ ಇರುವಂತವು ಇಲ್ಲದಿರುವಂತಹ ಜಂಪ್‌ಸೂಟ್‌ಗಳು ಚಾಲ್ತಿಯಲ್ಲಿವೆ. ಈ ಡಿಸೈನ್‌ನವನ್ನು ಧರಿಸಿದಾಗ ಆರಾಮ ಎಂದೆನಿಸುತ್ತವೆ. ಅಂತವನ್ನೇ ಪ್ರಿಫರ್‌ ಮಾಡಿ.

5/5

ಜಂಪ್‌ಸೂಟ್‌ ಗೈಡ್‌ಲೈನ್ಸ್‌

ಇನ್ನು, ಔಟಿಂಗ್‌, ಟ್ರಾವೆಲ್‌ ಟೈಮ್‌ನಲ್ಲಿ ಧರಿಸುವಂತಹ ಜಂಪ್‌ಸೂಟ್‌ಗಳು ಸಾಕಷ್ಟು ಡಿಸೈನ್‌ನಲ್ಲಿ ದೊರೆಯುತ್ತಿವೆ. ಆದರೆ, ಅವು ಸಿಂಗಲ್‌ ಪೀಸ್‌ ಡ್ರೆಸ್‌ ಎಂಬುದು ನೆನಪಿರಲಿ. ಯಾಕೆಂದರೇ ನೀವು ಅವನ್ನು ಧರಿಸಿದಾಗ ಟಾಯ್ಲೆಟ್‌ಗೂ ಆರಾಮವಾಗಿ ಹೋಗಲು ಸಾಧ್ಯವಿಲ್ಲ! ಹಾಗಾಗಿ ನಿಮ್ಮ ಕಂಫರ್ಟಬಲ್‌ಗೆ ಅವು ಹೊಂದುತ್ತವೆಯೇ ಎಂಬುದನ್ನು ನೋಡಿಕೊಂಡು ಆಯ್ಕೆ ಮಾಡಿ, ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author