ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion Tips 2026: ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ ಪ್ರಿಯರಿಗೆ 5 ಸ್ಟೈಲಿಂಗ್‌ ಟಿಪ್ಸ್

Denim Strap Dress: ಬೇಸಿಗೆಯಲ್ಲಿ ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳು ಸಖತ್‌ ಟ್ರೆಂಡಿಯಾಗಿವೆ. ಈ ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳನ್ನು ಧರಿಸುವವರಿಗೆ ಫ್ಯಾಷನಿಸ್ಟಾಗಳು ಸ್ಟೈಲಿಂಗ್‌ ಕುರಿತಂತೆ ಒಂದಿಷ್ಟು ಸಿಂಪಲ್‌ ಐಡಿಯಾ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಅಹನಾ ಕುಮ್ರಾ, ನಟಿ
1/5

ಬೇಸಿಗೆಯಲ್ಲಿ ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳು ಸಖತ್‌ ಟ್ರೆಂಡಿಯಾಗಿವೆ. ಈ ಔಟ್‌ಫಿಟ್‌ ಪ್ರಿಯರಿಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಸಿಂಪಲ್‌ ಸ್ಟೈಲಿಂಗ್‌ ಐಡಿಯಾ ನೀಡಿದ್ದಾರೆ.

ಲೈಟ್‌ವೈಟ್‌ ಡೆನಿಮ್‌ ಆಯ್ಕೆ ಮಾಡಿ

ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ ಆಯ್ಕೆ ಮಾಡುವಾಗ ಆದಷ್ಟೂ ಲೈಟ್‌ವೈಟ್‌ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೇ ಕೆಲವು ಫ್ಯಾಬ್ರಿಕ್‌ ದಪ್ಪನಾಗಿರುತ್ತವೆ. ಬೇಸಿಗೆಗೆ ಉಸಿರುಗಟ್ಟಿಸುತ್ತವೆ. ಹಾಗಾಗಿ ಫ್ಯಾಬ್ರಿಕ್‌ ಆಧಾರದ ಮೇಲೆ ಡ್ರೆಸ್‌ ಆಯ್ಕೆ ಮಾಡಿ.

2/5

ಟ್ರೆಂಡಿ ಬ್ಲ್ಯೂ ಶೇಡ್‌ ಚೂಸ್‌ ಮಾಡಿ

ಈ ಸೀಸನ್‌ನಲ್ಲಿ ಮತ್ತೊಮ್ಮೆ ಬ್ಲ್ಯೂ ಶೇಡ್‌ ಡೆನಿಮ್‌ ಟ್ರೆಂಡಿಯಾಗಿದೆ. ಬ್ಲ್ಯಾಕ್‌ ಟ್ರೆಂಡ್‌ ಲಿಸ್ಟ್‌ನಲ್ಲಿ ಇಲ್ಲ! ಹಾಗಾಗಿ ಬ್ಲ್ಯೂ ನ ನಾನಾ ಶೇಡ್‌ಗಳನ್ನು ಚೂಸ್‌ ಮಾಡಿ ಧರಿಸಬಹುದು.

3/5

ಬಟನ್‌ ಡೆನಿಮ್‌ ಸ್ಟ್ರಾಪ್‌ ಡ್ರೆಸ್

ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳಲ್ಲಿ ಇತ್ತೀಚೆಗೆ ಬಟನ್‌ಗಳಿಂದ ಡಿಸೈನ್‌ ಮಾಡಿರುವ ಸ್ಟ್ರಾಪ್‌ ಡ್ರೆಸ್‌ಗಳು ಟ್ರೆಂಡಿಯಾಗಿವೆ. ಇವು ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಈ ಶೈಲಿಯ ಡ್ರೆಸ್‌ಗಳು ಯಂಗ್‌ ಲುಕ್‌ ನೀಡುತ್ತವೆ.

4/5

ಮೇಕೋವರ್‌ ಸಿಂಪಲ್ಲಾಗಿರಲಿ

ಯಾವುದೇ ಕಾರಣಕ್ಕೂ ಕ್ಯಾಶುವಲ್‌ ಲುಕ್‌ ನೀಡುವ ಡೆನಿಮ್‌ ಸ್ಟ್ರಾಪ್‌ ಡ್ರೆಸ್‌ಗಳಿಗೆ ಹೆವ್ವಿ ಮೇಕಪ್‌ ಆಗಲಿ ಡ್ರೆಸ್ಸಿಂಗ್‌ ಆಗಲಿ ಮಾಡಕೂಡದು. ತೀರಾ ಸಿಂಪಲ್‌ ಮೇಕೋವರ್‌ ಮಾಡಿದರೇ ಸಾಕು!

5/5

ಜಂಕ್‌/ಫಂಕಿ ಜ್ಯುವೆಲರಿ ಮ್ಯಾಚಿಂಗ್‌

ಡೆನಿಮ್‌ ಸ್ಟ್ರಾಪ್‌ ಡ್ರೆಸ್ ಧರಿಸಿದಾಗ ಆದಷ್ಟೂ ಮಿನಿಮಮ್‌ ಜ್ಯುವೆಲರಿ ಧರಿಸಬೇಕು. ಅದರಲ್ಲೂ ಜಂಕ್‌ ಅಥವಾ ಫಂಕಿ ಜ್ಯುವೆಲರಿ ಧರಿಸಿದರೇ ಉತ್ತಮ. ಇವು ನೋಡಲು ಅಂದವಾಗಿ ಬಿಂಬಿಸುತ್ತವೆ.

ಶೀಲಾ ಸಿ ಶೆಟ್ಟಿ

View all posts by this author