ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Makeup Tips 2026: ಬೇಸಿಗೆಯಲ್ಲಿ ಮೇಕಪ್‌ ಕಾಪಾಡಿಕೊಳ್ಳಲು ಹೀಗೆ ಮಾಡಿ ನೋಡಿ!

Summer Makeup Tips: ಬೇಸಿಗೆಯಲ್ಲಿ ತ್ವಚೆಯ ಬೆವರಿನಿಂದ ಮೇಕಪ್‌ ಹಾಳಾಗದಂತೆ ಕಾಪಾಡಿಕೊಳ್ಳಲು ಒಂದಿಷ್ಟು ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದರೇ ಸಾಕು! ಎನ್ನುವ ಬ್ಯೂಟಿ ಎಕ್ಸ್‌ಪರ್ಟ್ಸ್ ಒಂದಿಷ್ಟು ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್‌
1/5

ಬೇಸಿಗೆಯಲ್ಲಿ ಮೇಕಪ್‌ ಮಾಡುವುದು ಸುಲಭ! ಆದರೆ, ಮೇಕಪ್‌ ನಂತರ ಕೊಂಚವೂ ಬೆವರದಂತೆ ಮೇಕಪ್‌ ಕಾಪಾಡಿಕೊಳ್ಳುವುದು ತುಸು ಕಷ್ಟವೇ ಸರಿ! ಹಾಗಾಗಿ ಮಾನಿನಿಯರು ಈ ಬೇಸಿಗೆಯಲ್ಲಿ ಮೇಕಪ್‌ ಕಾಪಾಡಿಕೊಳ್ಳುವ ಬಗ್ಗೆ ಒಂದಿಷ್ಟು ಟ್ರಿಕ್ಸ್‌ ತಿಳಿದುಕೊಂಡಲ್ಲಿ ಎಷ್ಟೇ ಬಿಸಿಲಿನ ತಾಪವಿದ್ದರೂ, ಮೇಕಪ್‌ ಹಾಳಾಗದಂತೆ ನೋಡಿಕೊಳ್ಳಬಹುದು. ಸುಂದರವಾಗಿ ಕಾಣಿಸಿಕೊಳ್ಳಬಹುದು ಎನ್ನುವ ಬ್ಯೂಟಿ ಎಕ್ಸ್‌ಪರ್ಟ್ಸ್ ಜೂಲಿ ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

2/5

ಮೇಕಪ್‌ ಮಾಡುವ ಮುನ್ನ

ಮೇಕಪ್‌ ಮಾಡುವ ಮುನ್ನ ಮುಖದ ಸ್ಕಿನ್‌ ಟೈಟಾಗಲು ಐಸ್‌ ಕ್ಯೂಬ್‌ನಿಂದ ಮಸಾಜ್‌ ಅಥವಾ ಕೋಲ್ಡ್‌ ವಾಟರ್‌ನಿಂದ ಮುಖ ತೊಳೆದು ಡ್ರೈ ಕ್ಲಾತ್‌ನಲ್ಲಿ ಒರೆಸಿ, ನಂತರ ಮೇಕಪ್‌ ಮಾಡುವುದರಿಂದ ಮಾಡಿದ ಮೇಕಪ್‌ ಹೆಚ್ಚು ಸಮಯ ಉಳಿಯುವುದು, ಬೆವರು ಕಡಿಮೆಯಾಗುತ್ತದೆ ಫ್ರೆಶ್ನೆಸ್‌ ಹಾಗೇಯೇ ಇರುತ್ತದೆ.

3/5

ಸುಲಭ ಮೇಕಪ್‌ ಟ್ರಿಕ್ಸ್‌

ಮೇಕಪ್‌ ಮಾಡುವಾಗ ಫೌಂಡೇಷನ್‌ ಕ್ರೀಂ ಸ್ವಲ್ಪ ತೆಳುವಾಗಿ ಮುಖಕ್ಕೆ ಹಚ್ಚುವುದರಿಂದ ಸ್ಕಿನ್‌ ಹೆಚ್ಚು ಟೈಟಾಗದು ಬೆವರು ತಡೆಗಟ್ಟಬಹುದು. ಕಾಂಪ್ಯಾಕ್ಟ್ ಪೌಡರ್‌ನ್ನು ಕಡಿಮೆ ಬಳಸುವುದು ಉತ್ತಮ. ಇದರೊಂದಿಗೆ ಸ್ಕಿನ್‌ ಹೋಲ್ಸ್‌ ಮುಚ್ಚದಂತೆ ಎಚ್ಚರಿಕೆ ವಹಿಸುವುದು ಒಳಿತು. ಈ ಸೀಸನ್‌ನಲ್ಲಿ ಸಿಂಪಲ್‌ ಮೇಕಪ್‌, ಲಿಪ್‌ ಲೈನರ್‌ ಗಾಢವಾಗಿ ಹಚ್ಚುವುದರಿಂದ ಬ್ರೈಟಾಗಿ ಮೇಕಪ್‌ ಮಾಡಿದಂತೆ ಕಾಣಿಸುತ್ತದೆ.

4/5

ಮೇಕಪ್‌ ನಂತರ ಬೆವರುವಾಗ ಹೀಗೆ ಮಾಡಿ

ಬೇಸಿಗೆಯಲ್ಲಿ ಮೇಕಪ್‌ ಮಾಡಿದ ನಂತರ ಹೆಚ್ಚು ಬೆವರುವುದು ಸಾಮಾನ್ಯ. ಹಾಗಾಗಿ ಬೆವರನ್ನು ಒರೆಸಲು ಸಾಫ್ಟ್‌ ಟಿಶ್ಯೂ ಪೇಪರ್‌ ಬಳಸಿ. ಇಲ್ಲವೇ, ಸಾಫ್ಟ್‌ ಕ್ಲಾತ್‌ ಬಳಸಿ ಮುಖವನ್ನು ಅಡ್ಡಾದಿಡ್ಡಿ ಒರೆಸದೆ ಒತ್ತಿ ಒರೆಸಿ. ಬೆವರಿನ ಹನಿಯನ್ನು ಮಾತ್ರ ಒರೆಸಿ. ಮೇಕಪ್‌ ಹಾಳಾಗುವುದಿಲ್ಲ!

ಅವಶ್ಯವಿದ್ದಲ್ಲಿ ಸ್ಮಡ್ಜ್‌ ಪ್ರೂಫ್‌ ಮೇಕಪ್‌ ವರ್ಧಕಗಳನ್ನು ಬಳಸಿ

ತೀರಾ ಬೆವರುವಿರಾದಲ್ಲಿ ಮಾತ್ರ ಸ್ಮಡ್ಜ್‌ ಫ್ರೀ ಸೌಂದರ್ಯ ವರ್ಧಕಗಳನ್ನು ಬಳಸಿ. ಕಣ್ಣಿಗೆ ಸ್ಮಡ್ಜ್‌ ಪ್ರೂಫ್‌ ಐ ಲೈನರ್‌ ಹಾಗೂ ಕಾಜಲ್‌ ಬಳಸಿ. ಬೆವರಿನಿಂದ ಕಣ್ಣಿನ ಕಾಜಲ್‌ ಹರಡಿ ಮೇಕಪ್‌ ಹಾಳಾಗದು.

5/5

ಆಯಿಲ್‌ ಕ್ರೀಂ ಅವಾಯ್ಡ್‌ ಮಾಡಿ

ನಿಮ್ಮ ತ್ವಚೆ ಜಿಡ್ಡಿನಾಂಶ ಹೊಂದಿದ್ದಲ್ಲಿ ಆದಷ್ಟೂ ಮೇಕಪ್‌ನಲ್ಲಿ ಅಧಿಕ ಜಿಡ್ಡಿನಾಂಶ ಹೊಂದಿರುವಂತಹ ಆಯಿಲ್‌ ಕ್ರೀಂಗಳನ್ನು ಬಳಸಬೇಡಿ. ಇದು ನಿಮ್ಮ ಮೇಕಪ್ಪನ್ನು ಬೆವರಿನೊಂದಿಗೆ ಬೆರೆಸಿ ಮುಖ ಎಣ್ಣೆಯಾದಂತೆ ಬಿಂಬಿಸಬಹುದು.‌

ಪೌಡರ್‌ ಪಫ್‌ ಬಳಸಿ

ಆದಷ್ಟೂ ಹೆಚ್ಚು ಪೌಡರ್‌ ಬಳಸದೆ ಮೂಗಿನ ಭಾಗ ಗಲ್ಲದ ಮೇಲೆ ಬ್ಲಷ್‌ ಮಾಡಿ. ಹೈಲೈಟಾಗಿ ಕಾಣುವಂತೆ ಮಾಡಿದಲ್ಲಿ ಮುಖವು ಸುಂದರವಾಗಿ ಕಾಣುತ್ತದೆ. ಹಾಗಾಗಿ ನಿಮ್ಮ ಪರ್ಸ್‌ನಲ್ಲಿ ಒಂದು ಪೌಡರ್‌ ಪಫ್‌ ಸದಾ ಇರಿಸಿಕೊಳ್ಳಿ. ಮೇಕಪ್‌ ಡಲ್‌ ಎನಿಸಿದಾಗ ಅಥವಾ ಬೆವರಿದಂತೆ ಅನಿಸಿದಾಗ ಪಫ್‌ನಿಂದ ಟಚ್‌ ಅಪ್‌ ಮಾಡಿಕೊಳ್ಳಬಹುದು.

ಶೀಲಾ ಸಿ ಶೆಟ್ಟಿ

View all posts by this author