ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Saree Fashion 2026: ಸಮ್ಮರ್‌ ಸೀಸನ್‌ನಲ್ಲಿ ಪಾರದರ್ಶಕ ಶೀರ್‌ ಸೀರೆ ಹಂಗಾಮ

Sheer Sarees: ಸಮ್ಮರ್‌ ಸೀಸನ್‌ನಲ್ಲಿ ಮತ್ತೊಮ್ಮೆ ನಾನಾ ಬಗೆಯ ಪಾರದರ್ಶಕ ಶೀರ್‌ ಸೀರೆಗಳು ಮಾನಿನಿಯರನ್ನು ಸೆಳೆದಿವೆ. ಏನಿದು ಶೀರ್‌ ಸೀರೆ? ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಸ್ಟೈಲಿಂಗ್‌ ಹಾಗೂ ಆಯ್ಕೆ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ವಿವರ.

ಚಿತ್ರಗಳು: ವೈದಿ, ನಟಿ
1/5

ಮತ್ತೊಮ್ಮೆ ಹಂಗಾಮ ಎಬ್ಬಿಸಿದ ಸಮ್ಮರ್‌ ಸೀರೆ

ಪಾರದರ್ಶಕ ಶೀರ್‌ ಸೀರೆಗಳು ಸಮ್ಮರ್‌ ಸೀರೆ ಫ್ಯಾಷನ್‌ನಲ್ಲಿ ಮತ್ತೊಮ್ಮೆ ಹಂಗಾಮ ಎಬ್ಬಿಸಿವೆ.

2/5

ಮಾನಿನಿಯರನ್ನು ಸೆಳೆದ ಶೀರ್‌ ಸೀರೆಗಳು

ಹೌದು, ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಮಾತ್ರವಲ್ಲ, ಪಾರ್ಟಿ ಥೀಮ್‌ಗೂ ಮ್ಯಾಚ್‌ ಆಗುವಂತಹ ನಾನಾ ಬಗೆಯ ಪಾರದರ್ಶಕ ಶೀರ್‌ ಸೀರೆಗಳು ಮರಳಿ ಮಾನಿನಿಯರನ್ನು ಸೆಳೆದಿವೆ. ಈಗಾಗಲೇ ಮಹಿಳೆಯರನ್ನು ಸವಾರಿ ಮಾಡತೊಡಗಿವೆ.

3/5

ಜೆನ್‌ ಝಿ ಯುವತಿಯರನ್ನು ಸೆಳೆದ ಶೀರ್‌ ಸೀರೆ

ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ನಟಿ ವೈದಿ ಧರಿಸಿದ್ದ ಶೀರ್‌ ಸೀರೆಯು ಇದೀಗ ನಾನಾ ವರ್ಣಗಳಲ್ಲಿ ಹಾಗೂ ಡಿಸೈನ್‌ಗಳಲ್ಲಿ ಸೀರೆ ಲೋಕದಲ್ಲಿ ಕಾಲಿಟ್ಟಿದೆ. ಅಲ್ಲದೇ, ಜೆನ್‌ ಝಿ ಹುಡುಗಿಯರನ್ನು ಕೂಡ ಸೆಳೆದಿದೆ.

4/5

ಏನಿದು ಶೀರ್‌ ಸೀರೆ?

ಪಾರದರ್ಶಕವಾಗಿರುವ ಸೀರೆಯನ್ನು ಶೀರ್‌ ಸೀರೆ ಎನ್ನಲಾಗುತ್ತದೆ. ನೋಡಲು ಪಾರದರ್ಶಕವಾಗಿರುವ ಸೀರೆಯ ಮೇಲೆ ಸೂಕ್ಷ್ಮ ಡಿಸೈನ್‌ ಮಾಡಲಾಗಿರುತ್ತದೆ. ಫ್ಯಾಬ್ರಿಕ್‌ ಆಧಾರದ ಮೇಲೆ ಆಕರ್ಷಕವಾಗಿ ಕಾಣಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಅವುಗಳಲ್ಲಿ ಇದೀಗ ಅರ್ಗಾನ್ಜಾ, ಟಿಶ್ಯೂ ಸೇರಿದಂತೆ ನಾನಾ ಬಗೆಯವು ಚಾಲ್ತಿಯಲ್ಲಿವೆ. ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇನ್ನು, ಶೀರ್‌ ಸೀರೆಗಳನ್ನು ಇತ್ತೀಚೆಗೆ ಬಹುತೇಕ ಎಲ್ಲಾ ಬಗೆಯ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಉಡುವುದು ಹೆಚ್ಚಾಗಿದೆ. ಯುವತಿಯರು ಹಾಗೂ ಮಹಿಳೆಯರು ಧರಿಸುವುದು ಸಾಮಾನ್ಯವಾಗತೊಡಗಿದೆ.

5/5

ಶೀರ್‌ ಸೀರೆ ಪ್ರಿಯರಿಗೆ ಇಲ್ಲಿವೆ ಟಿಪ್ಸ್

  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಮ್ಯಾಚ್‌ ಆಗುವಂತಹ ಶೀರ್‌ ಸೀರೆ ಆಯ್ಕೆ ಮಾಡಿ.
  • ಸಮ್ಮರ್‌ನಲ್ಲಿ ಪಾಸ್ಟೆಲ್‌ ಶೇಡ್‌ನ ಶೀರ್‌ ಸೀರೆಗಳು ಟ್ರೆಂಡ್‌ನಲ್ಲಿವೆ.
  • ಈ ಸೀರೆಗೆ ಆದಷ್ಟೂ ಜರ್ಕೋನ್‌ ಹಾಗೂ ಡೈಮಂಡ್‌ ಲುಕ್‌ ನೀಡುವಂತಹ ಜ್ಯುವೆಲರಿ ಆಯ್ಕೆ ಮಾಡಿ, ಧರಿಸಿ.
  • ಸಿಂಪಲ್‌ ಮೇಕಪ್‌ ನಿಮಗೆ ಎಲಿಗೆಂಟ್‌ ಲುಕ್‌ ನೀಡಬಹುದು.

ಶೀಲಾ ಸಿ ಶೆಟ್ಟಿ

View all posts by this author