ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Shopping 2026: ಯುವತಿಯರ ಸಮ್ಮರ್‌ ಫ್ಯಾಷನ್‌ವೇರ್ಸ್ ಶಾಪಿಂಗ್‌ಗೆ ಇಲ್ಲಿವೆ ಸಿಂಪಲ್‌ ಟಿಪ್ಸ್

ಯುವತಿಯರೇ 2026ರ ಸಮ್ಮರ್‌ ಫ್ಯಾಷನ್‌ವೇರ್ಸ್ ಶಾಪಿಂಗ್‌ ಮಾಡುತ್ತಿದ್ದೀರಾ! ಹಾಗಾದಲ್ಲಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪರ್ಟ್ಸ್. ಅಂದಹಾಗೆ, ಈಗಾಗಲೇ 2026 ರ ವೈವಿಧ್ಯಮಯ ಸಮ್ಮರ್‌ ಫ್ಯಾಷನ್‌ವೇರ್ಸ್ ಕಾಲಿಟ್ಟಿವೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಮಿಂಚು
1/5

ಸಮ್ಮರ್‌ ಸೀಸನ್‌ನಲ್ಲಿ ಈಗಾಗಲೇ ಮಾನಿನಿಯರು ಶಾಪಿಂಗ್‌ ಮಾಡುವುದು ಹೆಚ್ಚಾಗಿದೆ. ಹೌದು, ಈ ವರ್ಷದ ಸಮ್ಮರ್‌ ಫ್ಯಾಷನ್‌ವೇರ್ಸ್ ಶಾಪಿಂಗ್‌ ಮಾಡುವ ಯುವತಿಯರಿಗೆ ಶಾಪಿಂಗ್‌ ಎಕ್ಸ್‌ಪರ್ಟ್ಸ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

2/5

2026 ರ ಟ್ರೆಂಡ್‌ಗೆ ಮಾನ್ಯತೆ ನೀಡಿ

ಅಂದಹಾಗೆ, ಈಗಾಗಲೇ 2026 ರ ವೈವಿಧ್ಯಮಯ ಸಮ್ಮರ್‌ ಫ್ಯಾಷನ್‌ವೇರ್ಸ್ ಕಾಲಿಟ್ಟಿವೆ. ಅವುಗಳನ್ನೇ ಖರೀದಿಸಲು ಆದ್ಯತೆ ನೀಡಿ. ಆಗಷ್ಟೇ ನೀವು ಟ್ರೆಂಡ್‌ ಫಾಲೋವರ್‌ ಆಗಲು ಸಾಧ್ಯವಾಗುವುದು.

ಸಮ್ಮರ್‌ ಸೀಸನ್‌ಗೆ ಹೊಂದುವ ಉಡುಗೆಗೆ ಆದ್ಯತೆ ನೀಡಿ

ಈ ಸೀಸನ್‌ಗೆ ಹೊಂದುವಂತಹ ಸೀಸನ್‌ವೇರ್‌ಗಳಿಗೆ ಆದ್ಯತೆ ನೀಡಿ. ಯಾವುದೇ ಕಾರಣಕ್ಕೂ ಲೇಯರ್‌ ಲುಕ್‌ಗೆ ಮೊರೆ ಹೋಗಬೇಡಿ. ಆದಷ್ಟೂ ಈ ಸೀಸನ್‌ನಲ್ಲಿ ಆಗಮಿಸಿರುವ ಮ್ಯಾಚ್‌ ಆಗುವಂತಹ ಉಡುಗೆಗಳನ್ನೇ ಖರೀದಿಸಿ.

3/5

ಸೀಸನ್‌ಗೆ ಸೂಕ್ತ ಫ್ಯಾಬ್ರಿಕ್‌ ಆಯ್ಕೆ

ಈ ಸಮ್ಮರ್‌ನಲ್ಲಿ ರೇಷ್ಮೆ ಅಥವಾ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳನ್ನು ಧರಿಸಲು ಸಾರ್ಧಯವಾಗದು. ಸೆಕೆಯಾಗಬಹುದು. ಉಸಿರುಗಟ್ಟಿಸಬಹುದು. ಹಾಗಾಗಿ ಈ ಸೀಸನ್‌ಗೆ ಹೊಂದುವಂತಹ ಕಾಟನ್‌, ಲೆನಿನ್‌ ಹಾಗೂ ಹ್ಯಾಂಡ್‌ಲೂಮ್ ಫ್ಯಾಬ್ರಿಕ್‌ಗೆ ಪ್ರಾಮುಖ್ಯತೆ ನೀಡಿ.

4/5

ಕಲರ್ಸ್ ಆಯ್ಕೆ ಉಲ್ಲಾಸ ನೀಡುವಂತಿರಲಿ‌

ಡಾರ್ಕ್‌ ಶೇಡ್‌ ಆವಾಯ್ಡ್ ಮಾಡಿ. ಆದಷ್ಟೂ ಪಾಸ್ಟೆಲ್‌ ಕಲರ್ಸ್ ಹಾಗೂ ತಿಳಿ ವರ್ಣಗಳನ್ನು ಆಯ್ಕೆ ಮಾಡಿ. ಇವು ಈ ಸೀಸನ್‌ನಲ್ಲಿ ಮೂಡ್‌ ಡಲ್‌ ಆಗುವುದನ್ನು ತಪ್ಪಿಸುತ್ತವೆ. ಬದಲಿಗೆ ಉಲ್ಲಾಸ ನೀಡುತ್ತವೆ.

ಹೆವಿ ವಿನ್ಯಾಸದ ಉಡುಗೆ ಬೇಡವೇ ಬೇಡ!

ಬೇಸಿಗೆಯಲ್ಲಿ ಸೆಕೆ ಹೆಚ್ಚಿರುವುದರಿಂದ ಹೆವಿ ಡಿಸೈನ್‌ನ ಉಡುಗೆಗಳನ್ನು ಕೊಳ್ಳುವುದ ಬೇಡ! ಆದಷ್ಟೂ ಲೈಟ್‌ವೈಟ್‌ ಇರುವಂತಹ ಉಡುಪುಗಳನ್ನು ಕೊಳ್ಳಿ.

5/5

ಮನೋಲ್ಲಾಸ ಹೆಚ್ಚಿಸುವ ಫ್ಲೋರಲ್‌ ಪ್ರಿಂಟ್ಸ್

ಈ ಸೀಸನ್‌ನಲ್ಲಿ ನಾನಾ ಬಗೆಯ ಫ್ಲೋರಲ್‌ ಪ್ರಿಂಟ್ಸ್ ಔಟ್‌ಫಿಟ್‌ಗಳು ಬಂದಿವೆ. ಇವುಗಳನ್ನು ಚೂಸ್‌ ಮಾಡಬಹುದು. ಇವು ಮನೋಲ್ಲಾಸ ನೀಡುತ್ತವೆ.

ಶೀಲಾ ಸಿ ಶೆಟ್ಟಿ

View all posts by this author