ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Star Fashion 2026: ಟ್ರಾವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಡೈಸಿ ಶಾ ಪಿಂಕ್‌ ಮ್ಯಾಕ್ಸಿ

Daisy Shah: ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ಗೆ ಮ್ಯಾಕ್ಸಿ ಡ್ರೆಸ್‌ಗಳು ಮರಳಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಡೈಸಿ ಶಾ ಧರಿಸಿದ ಪಿಂಕ್‌ ಮ್ಯಾಕ್ಸಿ ಟ್ರೆಂಡಿಯಾಗಿದೆ. ಈ ಡ್ರೆಸ್‌ ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಡೈಸಿ ಶಾ, ಬಾಲಿವುಡ್‌ ನಟಿ
1/5

ಮ್ಯಾಕ್ಸಿ ಡ್ರೆಸ್‌ಗಳು ಈ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ಗೆ ಮರಳಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಸೀಸನ್‌ ಫ್ಯಾಷನ್‌ ಲಿಸ್ಟ್‌ನ ಟಾಪ್‌ನಲ್ಲಿವೆ.

2/5

ಸಮ್ಮರ್‌ ಮ್ಯಾಕ್ಸಿ ಡ್ರೆಸ್‌ ಫ್ಯಾಷನ್‌

ಹೌದು, ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ನಲ್ಲಿ ನಾನಾ ಬಗೆಯ ಡ್ರೆಸ್‌ಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ಬಗೆಬಗೆಯ ಕಲರ್‌ಫುಲ್‌ ಶೇಡ್‌ಗಳ ಮ್ಯಾಕ್ಸಿ ಡ್ರೆಸ್‌ಗಳು ಮರಳಿ, ಹೊಸ ರೂಪದಲ್ಲಿ ಲಗ್ಗೆ ಇಟ್ಟಿವೆ.

3/5

ಟ್ರೆಂಡಿಯಾದ ಡೈಸಿ ಶಾ ಪಿಂಕ್‌ ಮ್ಯಾಕ್ಸಿ ಡ್ರೆಸ್‌

ಇದಕ್ಕೆ ಪೂರಕ ಎಂಬಂತೆ, ನಟಿ ಡೈಸಿ ಶಾ ತಮ್ಮ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ನಲ್ಲಿ ಧರಿಸಿದ ಬಬಲ್‌ ಗಮ್‌ ಪಿಂಕ್‌ ಮ್ಯಾಕ್ಸಿ ಡ್ರೆಸ್‌ ಟ್ರಾವೆಲ್‌ ಪ್ರಿಯರಿಗೆ ಇಷ್ಟವಾಗಿದ್ದು, ಈಗಾಗಲೇ ಸಖತ್‌ ಟ್ರೆಂಡಿಯಾಗಿದೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಸೀಸನ್‌ ಸ್ಟೈಲಿಸ್ಟ್ ಜಿಂಗಮ್‌.

4/5

ಇದ್ಯಾವ ಬಗೆಯ ಮ್ಯಾಕ್ಸಿ ಡ್ರೆಸ್‌?

ಎಂದಿನಂತೆ, ಸಮ್ಮರ್‌ನಲ್ಲಿ ಊಹೆಗೂ ಮೀರಿದ ಮ್ಯಾಕ್ಸಿ ಡ್ರೆಸ್‌ಗಳು ಎಂಟ್ರಿ ನೀಡುತ್ತವೆ. ಅವುಗಳಲ್ಲಿ ಈ ಬಾರಿ ಪಾಸ್ಟೆಲ್‌ ಶೇಡ್‌ನವು, ವೈಬ್ರೆಂಟ್‌ ಕಲರ್‌ನವು ಅತಿ ಹೆಚ್ಚಾಗಿ ಬಂದಿವೆ. ಅಲ್ಲದೇ, ಯುವತಿಯರನ್ನು ಸವಾರಿ ಮಾಡತೊಡಗಿವೆ. ಇನ್ನು, ಡೈಸಿ ಶಾ ಧರಿಸಿರುವ ಈ ವೈಬ್ರೆಂಟ್‌ ಶೆಡ್‌ನ ಮ್ಯಾಕ್ಸಿ ಮಲ್‌ಮಲ್‌ ಕಾಟನ್‌ ಫ್ಯಾಬ್ರಿಕ್‌ನದ್ದಾಗಿದ್ದು, ಸೀಸನ್‌ಗೆ ತಕ್ಕದ್ದಾಗಿದೆ. ಬ್ಯಾಕ್‌ಲೆಸ್‌ ಡಿಸೈನ್‌ ಸ್ಪೆಗೆಟಿ ಸ್ಟ್ರಾಪ್ ಹಾಗೂ ಮಲ್ಟಿ ಟೈಯರ್ಡ್ ಸ್ಕರ್ಟ್ ವಿನ್ಯಾಸ ಹೊಂದಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ವೆಕೇಷನ್‌ ಫೋಟೋಸೂಟ್‌ಗೆ ಪರ್ಫೆಕ್ಟ್ ಡ್ರೆಸ್‌

ತೀರಾ ಗ್ಲಾಮರಸ್‌ ಆಗಿ ಕಾಣಿಸುವುದು ಬೇಡ! ಎಕ್ಸ್‌ಪೋಸ್‌ ಕೂಡ ಹೆಚ್ಚು ಬೇಡ! ಆದರೆ, ವೆಕೇಷನ್‌ ಫೋಟೋಶೂಟ್‌ನಲ್ಲಿ ಚೆನ್ನಾಗಿ ಕಾಣಿಸಬೇಕು. ನೋಡಲು ಅಂದವಾಗಿ ಕಾಣಿಸಬೇಕು ಎನ್ನುವವರು ಈ ಶೈಲಿಯ ಡ್ರೆಸ್‌ ಧರಿಸಬಹುದು. ನೋಡಲು ಪರ್ಫೆಕ್ಟ್ ಆಗಿ ಇದು ಕಾಣಿಸುತ್ತದೆ ಎಂದು ಸಲಹೆ ನೀಡುತ್ತಾರೆ ಫ್ಯಾಷನಿಸ್ಟಾ ರಫಲ್‌ ಹಾಗೂ ಕಾಂತಿ.

ಶೀಲಾ ಸಿ ಶೆಟ್ಟಿ

View all posts by this author