Summer Travel Fashion Tips 2026: ಸಮ್ಮರ್ ಟ್ರಾವೆಲ್ ಫ್ಯಾಷನ್ ಪ್ರಿಯರಿಗೆ ಇಲ್ಲಿವೆ 5 ಸ್ಟೈಲಿಂಗ್ ಟಿಪ್ಸ್
Summer Travel Fashion Tips 2026: ಬೇಸಿಗೆಯಲ್ಲಿ ಪ್ರಯಾಣ ಮಾಡುವಾಗಲು ಫ್ಯಾಷನೆಬಲ್ ಆಗಿ ಕಣಿಸಲು ಬಯಸುವವರು ಈ ಕೆಳಗಿನ ಸಿಂಪಲ್ ಅಂಶಗಳನ್ನು ಪಾಲಿಸಬಹುದು ಎನ್ನುವ ಸ್ಟೈಲಿಸ್ಟ್ಸ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಬೇಸಿಗೆಯ ಪ್ರಯಾಣ ಆರಾಮದಾಯಕವಾಗಿರಲು ಫ್ಯಾಷನ್ ಪ್ರಿಯರು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಸ್ಟೈಲಿಸ್ಟ್ ಜೆನ್ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಧರಿಸುವ ಉಡುಪುಗಳು ಟ್ರೆಂಡಿಯಾಗಿರಲಿ
ನೀವು ಧರಿಸುವ ಉಡುಪು ಸಮ್ಮರ್‌ಗೆ ಹೊಂದುವಂತಿರಲಿ, ಟ್ರೆಂಡಿಯಾಗಿರಲಿ. ಆದರೆ, ಬೇಸಿಗೆಯ ಬಿರು ಬಿಸಿಲಿಗೆ ಮೈಗೆ ಅಂಟುವಂತಿರಬಾರದು. ಹಾಗಾಗಿ ಆದಷ್ಟೂ ಹಗುರವಾದ, ಆರಾಮ ಎನಿಸುವ ಉಡುಪುಗಳನ್ನು ಮಾತ್ರ ಪ್ರಿಫರ್ ಮಾಡಿ. ಪ್ರಯಾಣಿಸುವಾಗ ಆದಷ್ಟೂ ರಿಫ್ರೆಶ್ಮೆಂಟ್ ಅನಿಸುವ ಕಲರ್ಸ್ ಚೂಸ್ ಮಾಡಿ.
ಕಂಫರ್ಟಬಲ್ ಆಗಿರಲಿ
ಕಾಲರ್ ನೆಕ್, ಟೈಟ್ ಫಿಟ್ಟಿಂಗ್, ಮೈಗೆ ಅಂಟಿಕೊಳ್ಳುವಂತಹ ಹಗ್ಗಿಂಗ್ ಡ್ರೆಸ್ ಸೇರಿದಂತೆ ಅಡಿಯಿಂದ ಮುಡಿಯವರೆಗೆ ಗಾಳಿಯಾಡದಂತೆ ಕ್ಲೋಸ್ ಆಗಿರುವಂತಹ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಇವು ನಿಮ್ಮನ್ನು ನಿತ್ರಾಣರಾಗಿಸುತ್ತವೆ. ಯಾವುದೇ ಕಾರಣಕ್ಕೂ ಭಾರಿ ಆಭರಣಗಳನ್ನು ಧರಿಸಬೇಡಿ.
ಟ್ರಾವೆಲ್ ಫುಟ್‌ವೇರ್ ಆಯ್ಕೆ
ಯಾವುದೇ ಕಾರಣಕ್ಕೂ ಫುಲ್ ಬೂಟ್ಸ್ ಆವಾಯ್ಡ್ ಮಾಡಿ. ಇವು ಪಾದವನ್ನು ಕವರ್ ಮಾಡುವುದರಿಂದ ಗಾಳಿಯಾಡಲು ಅವಕಾಶ ಸಿಗದೇ ಪಾದಗಳು ಜಡ್ಡು ಹಿಡಿದಂತೆ ಆಗಬಹುದು. ಫ್ಲಿಪ್ ಫ್ಲಾಪ್ ಚಪ್ಪಲಿಗಳು, ಒಪನ್ ಸ್ಟ್ರಾಪ್ ಸ್ಯಾಂಡಲ್ ಇಲ್ಲವೇ ಫ್ಲ್ಯಾಟ್ ಓಪನ್ ಅಥವಾ ಆಫ್ ಶೂಗಳನ್ನು ಧರಿಸಬಹುದು.
ಟ್ರಾವೆಲ್ ಮಾಡುವಾಗ ಸೀಸನ್ ಕೇರ್
ಬೇಸಿಗೆಯಲ್ಲಿ ಟ್ರಾವೆಲ್ ಮಾಡುವಾಗ ಸ್ವೆಟ್ ಟಿಶ್ಯೂ ಜತೆಯಲ್ಲಿಟ್ಟುಕೊಳ್ಳಿ. ಹಾಗೆಂದು ಕಂಡ ಕಂಡ ಕಡೆಯೆಲ್ಲಾ ಮುಖ ತೊಳೆಯುವುದನ್ನು ರೂಢಿಸಿಕೊಳ್ಳಬೇಡಿ. ಕೆಲವೊಮ್ಮೆ ನೀರಿನಿಂದ ಮುಖ ತೀರಾ ಡ್ರೈ ಆಗುವ ಸಂದರ್ಭವಿರುತ್ತದೆ. ಸನ್ ಟ್ಯಾನ್ ಆಗದಂತೆ ನೋಡಿಕೊಳ್ಳಿ. ಮಾಯಿಶ್ಚರೈಸರ್ ಜತೆಗಿರಲಿ.
ಆಕ್ಸೆಸರೀಸ್ ಸೀಸನ್‌ಗೆ ಹೊಂದುವಂತಿರಲಿ
ಔಟಿಂಗ್‌ಗೆ ಹೊರ ಹೋಗುವಾಗ ಆದಷ್ಟೂ ಕ್ಯಾಪ್, ಹ್ಯಾಟ್ಸ್ ಹಾಗೂ ಸನ್‌ಗ್ಲಾಸ್ ಧರಿಸುವ ಅಭ್ಯಾಸ ಮಾಡಿಕೊಳ್ಳಿ. ಸನ್‌ಬರ್ನ್ ಆಗದಂತೆ ಕಾಳಜಿವಹಿಸಿ.