Summer Wedding Fashion 2026: ಸಮ್ಮರ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡ ಬುಟ್ಟಾ ಅನಾರ್ಕಲಿ ಸೂಟ್
ಈ ಸಮ್ಮರ್ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಗ್ರ್ಯಾಂಡ್ ಪ್ರಿಂಟೆಡ್ ಬುಟ್ಟಾ ಅನಾರ್ಕಲಿ ಸೂಟ್ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಬುಟ್ಟಾ ಪ್ರಿಂಟ್ಸ್‌ನವು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಸೀರೆಯಲ್ಲಿ ಹಿಟ್ ಲಿಸ್ಟ್ ಸೇರಿದ್ದ ಈ ಕಾನ್ಸೆಪ್ಟ್ ಇದೀಗ ಸೆಲ್ವಾರ್ ಸೂಟ್‌ಗಳಿಗೂ ವ್ಯಾಪಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಬೂಟಾ ಕಾನ್ಸೆಪ್ಟ್‌ನ ಗ್ರ್ಯಾಂಡ್ ಬುಟ್ಟಾ ಅನಾರ್ಕಲಿ ಸೂಟ್ ಈ ಸಮ್ಮರ್‌ನ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಹಂಗಾಮ ಎಬ್ಬಿಸಿವೆ.
ವೆಡ್ಡಿಂಗ್ ಫ್ಯಾಷನ್‌ಗೆ ಸೇರಿದ ಡಿಸೈನರ್‌ವೇರ್
ಹೌದು, ಈ ಬಾರಿಯ ಸಮ್ಮರ್ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಗ್ರ್ಯಾಂಡ್ ಪ್ರಿಂಟೆಡ್ ಅನಾರ್ಕಲಿ ಸೂಟ್‌ಗಳು ಆಗಮಿಸಿದ್ದು, ಅವುಗಳಲ್ಲಿ ಬುಟ್ಟಾ ಪ್ರಿಂಟ್ಸ್‌ನವು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಸೀರೆಯಲ್ಲಿ ಹಿಟ್ ಲಿಸ್ಟ್ ಸೇರಿದ್ದ ಈ ಕಾನ್ಸೆಪ್ಟ್ ಇದೀಗ ಸೆಲ್ವಾರ್ ಸೂಟ್‌ಗಳಿಗೂ ವ್ಯಾಪಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಹೀನಾ ಖಾನ್ ಧರಿಸಿದ ಬುಟ್ಟಾ ಅನಾರ್ಕಲಿ
ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್ ನಟಿ ಹೀನಾ ಖಾನ್ ಇವೆಂಟ್‌ವೊಂದರಲ್ಲಿ ಧರಿಸಿದ್ದ ಬುಟ್ಟಾ ಪ್ರಿಂಟ್ಸ್‌ನ ಅನಾರ್ಕಲಿ ಸೂಟ್ ಎಥ್ನಿಕ್ ಡ್ರೆಸ್ ಪ್ರಿಯರನ್ನು ಸೆಳೆದಿದೆ. ಪರಿಣಾಮ, ಈಗಾಗಲೇ ಈ ಡಿಸೈನ್ ಬೇಡಿಕೆ ಕೂಡ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಮಾರಾಟಗಾರರು.
ಸಮ್ಮಿಲನಗೊಂಡ ನಾರ್ತ್-ಸೌತ್ ವಿನ್ಯಾಸ
ಮೂಲತಃ ಅನಾರ್ಕಲಿ ಸೂಟ್ ನಾರ್ತ್ ಇಂಡಿಯಾ ನೆಲದ್ದಾದರೂ ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತು ಇದೀಗ ಸೌತ್ ಶೇಡ್ ಹಾಗೂ ಡಿಸೈನ್ ಮತ್ತು ಪ್ರಿಂಟ್ಸ್‌ಗಳನ್ನು ತನ್ನೊಳಗೆ ಮಿಕ್ಸ್ ಮಾಡಿಕೊಂಡಿದೆ. ಪರಿಣಾಮ, ಇದೀಗ ಬುಟ್ಟಾ ಪ್ರಿಂಟ್ಸ್ ಅಥವಾ ಬುಟ್ಟಾ ವೀವಿಂಗ್ ಈ ಅನಾರ್ಕಲಿ ಸೂಟ್‌ನಲ್ಲೂ ಕಾಣಿಸುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಏನಿದು ಬುಟ್ಟಾ ಅನಾರ್ಕಲಿ ಸೂಟ್?
ಬುಟ್ಟಾ ರೇಷ್ಮೆ ಸೀರೆಗಳ ಬಗ್ಗೆ ಕೇಳಿರುವುದೇನು? ನೋಡಿರುತ್ತೀರಿ? ಅಷ್ಟೇಕೇ? ಎಲ್ಲರ ಬಳಿಯಲ್ಲೂ ಇಂತಹ ಒಂದಾದರೂ ಸೀರೆ ಇದ್ದೇ ಇರುತ್ತದೆ. ಈ ಬುಟ್ಟಾ ವಿನ್ಯಾಸದ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಲಾದ ಅನಾರ್ಕಲಿ ಸೂಟ್ ಇದು ಎನ್ನಬಹುದು. ಇದುವರೆಗೂ ಸೀರೆಯಲ್ಲಿ ಮಾತ್ರ ಕಾಣಬಹುದಾಗಿದ್ದ ಈ ಬುಟ್ಟಾ ಡಿಸೈನ್ ಇದೀಗ ವೆಡ್ಡಿಂಗ್ ಫ್ಯಾಷನ್‌ಗೆ ಸೇರಿರುವ ಅನಾರ್ಕಲಿ ಸೂಟ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ರಜತ್.