ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajnikanth: ನಟ ರಜನಿಕಾಂತ್ ಲಕ್ಷುರಿ ಮನೆ ಹೇಗಿದೆ ಗೊತ್ತಾ? ಈ ಫೋಟೋಗಳನ್ನು ನೋಡಿ

ಸೂಪರ್ ಸ್ಟಾರ್‌ ಎಂದೇ ಖ್ಯಾತಿಗಳಿಸಿರುವ ನಟ ರಜನಿಕಾಂತ್, ನಟಿಸುವ ಸಿನಿಮಾಗಳ ಮೇಲಿನ ಕ್ರೇಜ್​ ಇನ್ನೂ ಕಮ್ಮಿ ಆಗಿಲ್ಲ. ತಮ್ಮ ಸ್ಟೈಲ್ ಮತ್ತು ಮ್ಯಾನರಿಸಂ ಮೂಲಕ ಹೆಚ್ಚು ಆಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ನಟ ರಜನಿಕಾಂತ್ ಅನ್ನು ತಲೈವಾ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಾರೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟ ಇವರೇ ಆಗಿದ್ದು ಅಪಾರ ಆಸ್ತಿಯ ಜೊತೆಗೆ ಭವ್ಯವಾದ ಬಂಗಲೆಯೊಂದನ್ನು ಕೂಡ ನಟ ರಜನಿಕಾಂತ್ ಹೊಂದಿದ್ದಾರೆ.

1/6

ನಟ ರಜನಿಕಾಂತ್ ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೇ, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲೂ ರಜನಿಕಾಂತ್ ಬಣ್ಣ ಹಚ್ಚಿದ್ದು ದಕ್ಷಿಣ ಭಾರತದ ಶ್ರೀಮಂತ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರಳತೆಗೆ ಹೆಸರಾಗಿರುವ ನಟ  ರಜನಿಕಾಂತ್ ಅಪಾರ ಆಸ್ತಿಯ ಜೊತೆಗೆ ಭವ್ಯವಾದ ಬಂಗಲೆಯೊಂದನ್ನು ಕೂಡ ಹೊಂದಿದ್ದಾರೆ...

2/6

ರಜನಿಕಾಂತ್ ಹಲವು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಅವರು 2002ರಲ್ಲಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಐಷಾ ರಾಮಿ ಮನೆಯೊಂದನ್ನು ನಿರ್ಮಿಸಿದ್ದಾರೆ. ಈ ಮನೆಯ ವಿನ್ಯಾಸವು ಅತೀ ಆಕರ್ಷಕವಾಗಿದ್ದು ಲಗ್ಜುರಿಯಸ್ ವಾಸ್ತ ವ್ಯದ ಸೌಂದರ್ಯ, ಮನೆಯ ವಿನ್ಯಾಸ, ವಿಶಾಲ ಕೋಣೆಗಳು ಜನರ ಗಮನ ಸೆಳೆಯುವಂತೆ‌ ಮಾಡಿದೆ.

3/6

ಪುರಾತನ ಕಾಲದ ಮನೆಗಳನ್ನು ಹೋಲುವ ಈ ಭವ್ಯ ಬಂಗಲೆ ಅರಮನೆಯಂತಿದೆ. ಬಂಗಲೆಯ ಒಳಾಂಗಣದಲ್ಲಿ ಆಕರ್ಷಕವಾದ ಗ್ಲಾಸ್ ಡೋರ್‌ಗಳು, ವಿಶಾಲವಾದ ಸಭಾ ಸ್ಥಳ,ಹಚ್ಚ ಹಸಿರಿನ ಗಾರ್ಡನ್, ಸುಂದರ ಈಜುಕೋಳಗಳಿವೆ.

4/6

ಸುಂದರ ಬಿಳಿ ಗೋಡೆಗಳು ಹಾಗೂ ಭವ್ಯ ಕಲಾಕೃತಿಗಳಿಂದ ನಿರ್ಮಿತವಾದ ಮನೆ ನಿಜಕ್ಕೂ ನಯನ‌ ಮನೋಹರವಾಗಿದೆ. ಅದ್ಬುತ ವಾದ ಮರದ ಕೆತ್ತನೆ, ಗ್ರಾನೈಟ್ ಡಿಸೈನ್‌ಗಳು ಮತ್ತು ಆಧುನಿಕ ವಿನ್ಯಾಸದೊಂದಿಗೆ ನಿರ್ಮಿತವಾದ ಈ ಮನೆ ಕಣ್ಮನ ಸೆಳೆಯುತ್ತಿದೆ.

5/6

ಮನೆಯೊಳಗೆ ಎಂಟ್ರಿ ನೀಡುತ್ತಿದ್ದಂತೆ ಬೇಜ್ ಸೋಫಾ, ಮರದ ಪ್ಯಾನಲ್, ಐವೊರಿ ಥೀಮ್, ಮನೆಗೆ ಮತ್ತಷ್ಟು ಮೆರಗು ನೀಡಿದೆ. ಅಂದಾಜು ಪ್ರಕಾರ, ರಜನೀಕಾಂತ್ ಅವರ ಚೆನ್ನೈ ಮನೆ ಮೌಲ್ಯ ಸುಮಾರು ರೂ. 35 ಕೋಟಿ. ಆಗಿದ್ದು ಈ ಲಕ್ಸುರಿ ಬಂಗಲೆ ನಿಜಕ್ಕೂ ನೋಡಲು ಮನೋಹರವಾಗಿದೆ. ಸೂಪರ್‌ಸ್ಟಾರ್ ಚೆನ್ನೈನಲ್ಲಿ ರಾಘವೇಂದ್ರ ಮಂಡಪಮ್ ಎಂಬ ಐಶಾರಾಮಿ ಮದುವೆ ಮಂಟಪವನ್ನು ಸಹ ಹೊಂದಿದ್ದು, ಅದರ ಅಂದಾಜು ಮೌಲ್ಯ 20 ಕೋಟಿ ರೂ.ಎನ್ನಲಾಗಿದೆ.

6/6

ಚಿತ್ರವೊಂದಕ್ಕೆ 50 ಕೋಟಿಗೂ ಅಧಿಕ ಸಂಭಾವನೆ ಪಡೆಯುವ ನಟ ರಜನಿಕಾಂತ್ ಬಳಿ ಐಷಾರಾಮಿ ಬಂಗಲೆಗಳು ಸೇರಿ ದಂತೆ ದುಬಾರಿ ಕಾರುಗಳಿವೆ. ಅಂದಾಜು 400 ಕೋಟಿ ರೂ.ಗೂ ಅಧಿಕ ಆಸ್ತಿ ರಜನಿಕಾಂತ್ ಬಳಿ ಇದೆ ಅನ್ನಲಾಗ್ತಿದೆ. 1975ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ರಜನಿಕಾಂತ್​ ವರ್ಷದಿಂದ ವರ್ಷಕ್ಕೆ ಅವರ ಖ್ಯಾತಿ ಹೆಚ್ಚುತ್ತಲೇ ಬಂದಿದೆ.‌ ‘ಬಾಷಾ’, ‘ತಂಗ ಮಗನ್​’, ‘ಪಡಯಪ್ಪ’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರು ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಕೂಡ ಪಡೆಯುತ್ತಿದ್ದಾರೆ.