ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Republic Day Tableau: ಗಣರಾಜ್ಯೋತ್ಸವಕ್ಕೆ ಮೆರಗು ತಂದ ಸ್ತಬ್ಧಚಿತ್ರಗಳು; ಇಲ್ಲಿದೆ ನೋಡಿ ಫೋಟೊ ಗ್ಯಾಲರಿ

ದೇಶಾದ್ಯಂತ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಿಸಲಾಗಿದೆ. ಅದರಲ್ಲಿಯೂ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪಥ ಸಂಚಲನ ಗಮನ ಸೆಳೆದಿದೆ. ಇಲ್ಲಿ ಪ್ರದರ್ಶಿಸಲಾದ ವೈವಿಧ್ಯಪೂರ್ಣ ಸ್ತಬ್ಧ ಚಿತ್ರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿವೆ. ಈ ಬಾರಿ 30 ಸ್ತಬ್ಧಚಿತ್ರಗಳು ಭಾಗವಹಿಸಿದರೆ, ಸುಮಾರು 2,500 ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಸುಮಾರು 10,000 ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌
1/8

ಆಪರೇಷನ್‌ ಸಿಂದೂರ್‌

ಪಾಕಿಸ್ತಾನದ ವಿರುದ್ಧ ಭಾರತ ಕಳೆದ ವರ್ಷ ಮೇಯಲ್ಲಿ ನಡೆಸಿದ ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಲ್ಲಿ ನಮ್ಮ ಸೇನೆ ಬಳಸಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವು ಈ ಬಾರಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.

2/8

ಶಿಸ್ತುಬದ್ಧ ಪರೇಡ್‌

77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ಆಯೋಜಿಸಿದ್ದ ಪರೇಡ್‌ ಎಂದಿನಂತೆ ಗಮನ ಸೆಳೆಯಿತು.

3/8

ಪಂಜಾಬ್‌

ಪಂಜಾಬ್‌ನ ಸ್ತಬ್ಧ ಚಿತ್ರವು 9ನೇ ಸಿಖ್ ಗುರು, ಹಿಂದ್ ದಿ ಚಾದರ್ ಎಂದು ಪೂಜಿಸಲ್ಪಡುವ - ಮಾನವ ಆತ್ಮಸಾಕ್ಷಿ, ನಂಬಿಕೆ ಮತ್ತು ಸ್ವಾತಂತ್ರ್ಯದ ರಕ್ಷಕ ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಜಿ ಅವರ 350ನೇ ಹುತಾತ್ಮ ವರ್ಷಕ್ಕೆ ಗಂಭೀರ ಗೌರವ ಸಲ್ಲಿಸಿದೆ.

4/8

ಒಡಿಶಾ

ಮಣ್ಣಿನಿಂದ ಸಿಲಿಕಾನ್ ಎಂಬ ಥೀಮ್‌ನೊಂದಿಗೆ ಒಡಿಶಾದ ಸ್ತಬ್ಧ ಚಿತ್ರ ಕೃಷಿಯಿಂದ ಹೈಟೆಕ್ ನಾವೀನ್ಯತೆ ಬೆಳವಣಿಗೆಯವರೆಗಿನ ರಾಜ್ಯದ ಪ್ರಯಾಣದ ಮೇಲೆ ಬೆಳಕು ಚೆಲ್ಲಿದೆ.

5/8

ಮಧ್ಯ ಪ್ರದೇಶ

ಮಧ್ಯ ಪ್ರದೇಶವು ಟ್ಯಾಬ್ಲೋದಲ್ಲಿ ಇಂದೋರ್‌ನ ರಾಣಿ ಅಹಲ್ಯಾ ಬಾಯಿ ಹೋಳ್ಕರ್‌ ಅವರನ್ನು ಚಿತ್ರಿಸಿದೆ.

6/8

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ "ಸ್ವತಂತ್ರತ ಕಾ ಮಂತ್ರ - ವಂದೇ ಮಾತರಂ" ಸ್ತಬ್ಧ ಚಿತ್ರ ಹಾಡಿನ 150ನೇ ವಾರ್ಷಿಕೋತ್ಸವವನ್ನು ನೆನೆಪಿಸಿದೆ. ಜತೆಗೆ ಹಾಡು ಬರೆದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರನ್ನು ಗೌರವಿಸಿದೆ.

7/8

ಅಸ್ಸಾಂ

ಅಸ್ಸಾಂ ತನ್ನ ಸ್ತಬದ್ಧ ಚಿತ್ರದಲ್ಲಿ ಆಶಾರಿಕಂಡಿ - ಟೆರಾಕೋಟಾ ಕರಕುಶಲ ಗ್ರಾಮವನ್ನು ಪ್ರದರ್ಶಿಸಿದೆ.

8/8

ಕೇರಳ

ಕೊಚ್ಚಿಯ ವಾಟರ್‌ ಮೆಟ್ರೋ ಮತ್ತು ಶೇಕಡಾ 100ರಷ್ಟು ಡಿಜಿಟಲ್‌ ಸಾಕ್ಷರತೆ. ಆತ್ಮನಿರ್ಭರ ಭಾರತಕ್ಕಾಗಿ ಆತ್ಮನಿರ್ಭರ ಕೇರಳ.