ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tamil Nadu Elections: ಮುಂಜಾನೆಯೇ ಮತ ಚಲಾಯಿಸಿದ ಅಜಿತ್, ಸರತಿ ಸಾಲಿನಲ್ಲಿ ನಿಂತು ವೋಟ್‌ ಹಾಕಿದ ಸ್ಟಾರ್‌ಗಳು, ಇಲ್ಲಿವೆ ನೋಡಿ ಫೋಟೋಗಳು

ತಮಿಳುನಾಡು ವಿಧಾನಸಭಾ ಚುನಾವಣೆಯು ಬಿರುಸಿನಿಂದ ನಡೆಯುತ್ತಿದೆ. ಈ ಬಾರಿ ಮತದಾನದ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು, ತಮಿಳು ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮತದಾನ ಮಾಡಿ, ನಾಗರೀಕರಲ್ಲೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಮಿಳು ನಟ ಅಜಿತ್‌ ಅವರು ಮುಂಜಾನೆಯ 7 ಗಂಟೆಗೆ ವೋಟ್‌ ಮಾಡಿತ್ತು ವಿಶೇಷವಾಗಿತ್ತು. ರಜನಿಕಾಂತ್‌, ದಳಪತಿ ವಿಜಯ್, ಅಜಿತ್, ಕಮಲ್‌ ಹಾಸನ್ ಸೇರಿದಂತೆ ಅನೇಕ ಕಾಲಿವುಡ್‌ ತಾರೆಯರು ಮತದಾನ ಮಾಡಿದ್ದಾರೆ. ಇಲ್ಲಿವೆ ನೋಡಿ ಅವರ ಫೋಟೋಗಳು.

1/11

ಪತ್ನಿ ಜ್ಯೋತಿಕಾ ಅವರೊಂದಿಗೆ ಬಂದು ಮತದಾನ ಮಾಡಿದ ನಟ ಸೂರ್ಯ

2/11

ತಮಿಳು ನಟ ಕಾರ್ತಿ ಅವರು ಮತದಾನ ಮಾಡಿದರು

3/11

ಜವಾನ್‌, ಬಿಗಿಲ್‌ ಮುಂತಾದ ಸಿನಿಮಾಗಳ ನಿರ್ದೇಶಕ ಅಟ್ಲೀ ಕುಮಾರ್‌ ಅವರು ಮತದಾನ ಮಾಡಿದರು

4/11

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಅವರು ಚೆನ್ನೈನಲ್ಲಿ ತಮ್ಮ ಮತವನ್ನು ಚಲಾಯಿಸಿದರು

5/11

ನಟ, ನಿರ್ದೇಶಕ ಪ್ರಭುದೇವ ಅವರು ಮತದಾನ ಮಾಡಿದರು.

6/11

ತಮಿಳು ನಟ ಚಿಯಾನ್‌ ವಿಕ್ರಮ್‌ ಅವರು ಮತದಾನ ಕೇಂದ್ರದಲ್ಲಿ ನೀಡಿದ ಪೋಸ್ ಹೀಗಿತ್ತು

7/11

ಪತ್ನಿ ಆರತಿ ಅವರೊಂದಿಗೆ ಮತದಾನ ಕೇಂದ್ರಕ್ಕೆ ಅಗಮಿಸಿ, ಮತದಾನ ಮಾಡಿದ ನಟ ಶಿವಕಾರ್ತಿಕೇಯನ್

8/11

ನಟ. ನಿರ್ದೇಶಕ, ನಿರ್ಮಾಪಕ ಧನುಷ್‌ ಅವರು ಮತದಾನ ಮಾಡಿದರು

9/11

ನಟಿ ತ್ರಿಷಾ ಕೃಷ್ಣನ್ ಅವರು ಚೆನ್ನೈನಲ್ಲಿ ತಮ್ಮ ವೋಟ್‌ ಮಾಡಿದ್ದಾರೆ

10/11

ನಟ ಕಮಲ್‌ ಹಾಸನ್‌ ಮತ್ತು ಅವರ ಪುತ್ರಿ ಶ್ರುತಿ ಹಾಸನ್‌ ಒಟ್ಟಿಗೆ ಬಂದು ಮತದಾನ ಮಾಡಿದರು

11/11

ಮುಂಜಾನೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಬಂದು ವೋಟ್‌ ಮಾಡಿದ ನಟ ಅಜಿತ್‌