Priyanka Chopra: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ.. ಅವರ ಸೂಪರ್ ಹಿಟ್ ಸಿನಿಮಾಗಳಿವು
ದ ಸ್ಕೈ ಇಸ್ ಪಿಂಕ್ , ಡಾನ್, ಬರ್ಫಿ, ಬಾಜಿರಾವ್ ಮಸ್ತಾನಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ವಿಶೇಷ ಅಭಿನಯದ ಮೂಲಕ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವ ಜೊತೆ ಜೊತೆಗೆ ಕೆಲವು ಬ್ರ್ಯಾಂಡಿನ ಅಂಬಾಸಿಡರ್ ಆಗಿಯೂ ಕೂಡ ಇವರು ಖ್ಯಾತಿ ಪಡೆದು ಭಾರತವನ್ನು ಅಂತಾ ರಾಷ್ಟ್ರೀಯ ಮಟ್ಟದ ವರೆಗೂ ಪ್ರತಿನಿಧಿಸಿದ್ದಾರೆ. ಜಾಗತಿಕ ಮಟ್ಟದ ಐಕಾನಿಕ್ ಸ್ಟಾರ್ ನಟಿಯಾದ ಪ್ರಿಯಾಂಕ ಚೋಪ್ರಾ ಅವರು 43ನೇ ಹುಟ್ಟು ಹಬ್ಬದ ಸಂಭ್ರಮ ದಲ್ಲಿದ್ದಾರೆ. ಅವರ ಅಭಿನಯದ ಕೆಲ ಸಿನಿಮಾಗಳು ಅವರಿಗೆ ಬಿಗ್ ಸಕ್ಸಸ್ ನೀಡಿದ್ದು ಈ ಕುರಿತು ಮಾಹಿತಿ ಇಲ್ಲಿದೆ.
ಐತ್ರಾಜ್: ನಟ ಅಕ್ಷಯ್ ಕಪೂರ್ ಅವರೊಂದಿಗೆ 2004ರಲ್ಲಿ ಐತ್ರಾಜ್ ಹೆಸರಿನ ಸಿನಿಮಾದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಅಭಿನಯಿಸಿ ಹೆಚ್ಚು ಗ್ಲಾಮರಸ್ ಆಗಿ ಕಂಡಿದ್ದಾರೆ. ಕಾರ್ಪೊರೇಟ್ ಮುಖ್ಯಸ್ಥೆ ಸೋನಿಯಾ ರಾಯ್ ಪಾತ್ರದಲ್ಲಿ ನಟಿ ಪ್ರಿಯಾಂಕ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕಾರ್ಪೊರೇಟ್ ಲೈಂಗಿಕ ದೌರ್ಜನ್ಯದ ಕಥೆ ಹೇಳುವ ಈ ಸಿನಿಮಾದಲ್ಲಿ ಮಹಿಳೆಯ ಹಕ್ಕುಗಳ ದುರ್ಬಳಕೆ, ದೌರ್ಜನ್ಯ ಇತ್ಯಾದಿಗಳ ಬಗ್ಗೆ ತಿಳಿಸಲಾಗಿದೆ. ಇದೇ ಸಿನಿಮಾ ದಲ್ಲಿ ಅಕ್ಷಯ್ ಕುಮಾರ್ ಪತ್ನಿ ಪಾತ್ರದಲ್ಲಿ ನಟಿ ಕರೀನಾ ಕಪೂರ್ ಕೂಡ ಮುಖ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಅವರ ಅಹಂಕಾರ ಮತ್ತು ಗರ್ವದ ನಟನೆಯು ಪ್ರೇಕ್ಷಕರ ಗಮನ ಸೆಳೆದಿದೆ.
ಡಾನ್ 1 ಮತ್ತು ಡಾನ್ 2:
ಬಾಲಿವುಡ್‌ನ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಡಾನ್ 1 ಮತ್ತು ಡಾನ್ 2 ಸಿನಿಮಾದಲ್ಲಿ ನಟಿ ಪ್ರಿಯಾಂಕ ಅವರು ಐಕಾನಿಕ್ ಮಹಿಳಾ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಅಂತಾರಾಷ್ಟ್ರೀಯ ಕಳ್ಳಸಾಗಣೆದಾರ ಡಾನ್ ಪಾತ್ರವನ್ನು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ನಿರ್ವಹಿಸಿದ್ದು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಈ ಸಿನಿಮಾದಲ್ಲಿ ಮಿಂಚಿದ್ದಾರೆ.
ಫ್ಯಾಷನ್: 2008ರಲ್ಲಿ ತೆರೆಕಂಡ ಫ್ಯಾಷನ್ ಸಿನಿಮಾ ಪ್ರಿಯಾಂಕ ಅವರ ಅಭಿನಯಕ್ಕೆ ಒಂದೊಳ್ಳೆ ಅವಕಾಶ ಒದಗಿಸಿಕೊಟ್ಟಿತ್ತು. ಸಾಮಾನ್ಯ ಹುಡುಗಿಯೊಬ್ಬಳ ಅಸಾಮಾನ್ಯ ಕನಸು ಹೊತ್ತು ಸಾಗುವ ಕಥೆಗೆ ನಟಿ ಪ್ರಿಯಾಂಕ ಜೀವ ತುಂಬಿದ್ದಾರೆ. ಫ್ಯಾಷನ್ ಜಗತ್ತಿನ ಹಿಂದಿನ ಕರಾಳ ಸತ್ಯತೆ, ಗ್ಲಾಮರ್ ಉದ್ಯಮದ ಜಟಿಲತೆಯನ್ನು ನಿಭಾಯಿಸುವ ಅನೇಕ ವಿಚಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ಸಿನಿಮಾದ ಅವರ ಅಭಿನಯಕ್ಕೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಪಡೆದರು.
ಬರ್ಫಿ: 2012ರಲ್ಲಿ ತೆರೆಕಂಡ ಬರ್ಫಿ ಸಿನಿಮಾದಲ್ಲಿ ನಟಿ ಪ್ರಿಯಾಂಕ ಅವರು ಅದ್ಭುತವಾಗಿ ಅಭಿನ ಯಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಸಿನಿಮಾದ ತನಕ ಗ್ಲಾಮರಸ್ ಆಗಿ ಬೋಲ್ಡ್ ಲುಕ್ ನಲ್ಲೇ ಖ್ಯಾತಿ ಪಡೆದ ಇವರು ಈ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಅಭಿನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಗ್ಲಾಮರ್ ಲುಕ್ ನಿಂದ ಹೊರಬಂದು ವಿಶೇಷ ಚೇತನರ ಪಾತ್ರಕ್ಕೆ ನಟಿ ಪ್ರಿಯಾಂಕ ಜೀವ ತುಂಬಿದ್ದಾರೆ. ಆಟಿಸಂ ಸಮಸ್ಯೆ ಇರುವ ಹುಡುಗಿ ಝಿಲ್ಮಿಲ್ ಪಾತ್ರವನ್ನು ನಟಿ ಪ್ರಿಯಾಂಕ ಅಭಿನಯಿಸಿದ್ದಾರೆ. ಪ್ರಿಯಾಂಕ ಅವರ ಅಭಿನಯದಲ್ಲಿ ಮಗುವಿನಂತಹ ಮುಗ್ಧತೆ ಬಹಳ ಚೆನ್ನಾಗಿ ಮೂಡಿ ಬಂದಿದ್ದು ಈ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿದೆ.
ಇವಿಷ್ಟು ಮಾತ್ರವಲ್ಲದೆ 2014ರಲ್ಲಿ ತೆರೆ ಕಂಡ ಮೇರಿ ಕೊಮ್, 2015ರಲ್ಲಿ ತೆರೆಕಂಡ ಬಾಜಿರಾವ್ ಮಸ್ತಾನಿ ಸಿನಿಮಾ, ದಿ ವೈಟ್ ಟೈಗರ್, ಶೀಲಾ ಇತರ ಸಿನಿಮಾಗಳು ಕೂಡ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿದೆ. ಸದ್ಯ ಅವರು ಕಲ್ಪನಾ ಚಾವ್ಲಾ ಅವರ ಬಯೋಪಿಕ್ ನಲ್ಲಿ ಅಭಿನಯಿಸಲಿದ್ದು ಈ ಸಿನಿಮಾದ ಶೂಟಿಂಗ್ ಕಾರ್ಯಗಳು ನಡೆಯುತ್ತಿದೆ. 2025ರ ಡಿಸೆಂಬರ್ ನಂದು ಈ ಸಿನಿಮಾ ತೆರೆ ಮೇಲೆ ಬರಲಿದೆ.