ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indian Actresses: ಇವರು ಸಿನಿ ತಾರೆಯರು ಮಾತ್ರವಲ್ಲ ವೈದ್ಯರೂ ಹೌದು

ಸಿನಿಮಾ ರಂಗಕ್ಕೆ ಬಂದ ಮೇಲೆ ಓದು ಸಾಧ್ಯವಿಲ್ಲ. ಹೆಚ್ಚು ಓದಿದವರು ಸಿನಿಮಾರಂಗಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಈ ನಟಿಯರು ಸುಳ್ಳು ಮಾಡಿದ್ದಾರೆ. ಯಾಕೆಂದರೆ ಇವರೆಲ್ಲ ಓದಿ ವೈದ್ಯರಾದವರು. ಆದರೂ ಇವತ್ತು ವಿಶ್ವದಾದ್ಯಂತ ಸಿನಿ ತಾರೆಯರಾಗಿ ಹೆಸರುಗಳಿಸಿದ್ದಾರೆ. ವೈದ್ಯರಾಗಿದ್ದುಕೊಂಡು ಸಿನಿಮಾರಂಗದಲ್ಲಿ ಹೆಸರು ಮಾಡಿರುವ 6 ಪ್ರಮುಖ ತಾರೆಯರ ಕುರಿತು ಇಲ್ಲಿದೆ ಮಾಹಿತಿ.

1/7

ಓದಿ ವೈದ್ಯರಾಗಿದ್ದರೂ ಇವರೆಲ್ಲ ಸಿನಿ ರಂಗದಲ್ಲಿ ಹೆಸರು ಮಾಡಿದ್ದಾರೆ. ಸಾಯಿ ಪಲ್ಲವಿ, ಮಾನುಷಿ ಚಿಲ್ಲರ್, ಶ್ರೀಲೀಲಾ ಸೇರಿದಂತೆ ಇನ್ನು ಕೆಲವು ಸಿನಿ ತಾರೆಯರು ವೈದ್ಯಕೀಯ ಕಾಲೇಜುಗಳಿಗೆ ಹೋಗಿ ಓದಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.

2/7

ಪ್ರಸಿದ್ಧ ತಮಿಳು ನಿರ್ದೇಶಕ ಶಂಕರ್ ಅವರ ಪುತ್ರಿ, ʼವಿರುಮನ್ʼ ಮತ್ತು ʼಮಾವೀರನ್ʼನಂತಹ ಚಿತ್ರಗಳಲ್ಲಿ ನಟಿಸಿರುವ ಅದಿತಿ ಶಂಕರ್ ವೈದ್ಯೆಯಾಗಿದ್ದು ರಾಮಚಂದ್ರ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ.

3/7

ದಕ್ಷಿಣ ಚಿತ್ರೋದ್ಯಮದಲ್ಲಿ ಹೆಸರು ಮಾಡಿರುವ ಸಾಯಿ ಪಲ್ಲವಿ ಟಿಬಿಲಿಸಿ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 2016ರಲ್ಲಿ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಿದರು. 2020ರಲ್ಲಿ ಅಂತಾರಾಷ್ಟ್ರೀಯ ಮೆಡಿಕಲ್ ಪದವಿ ಪರೀಕ್ಷೆಯನ್ನೂ ಬರೆದಿದ್ದಾರೆ.

4/7

ʼಸೋಚ್ʼ, ʼಪೆಹೆಲಿʼ, ʼಕೊಯಿ ಜನೇನಾʼ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಅದಿತಿ ಗೋವಿತ್ರಿಕರ್ ಶ್ರೀಮತಿ ವರ್ಲ್ಡ್ ಮುಂಬೈಯ ಗ್ರಾಂಟ್ ವೈದ್ಯಕೀಯ ಕಾಲೇಜಿನಲ್ಲಿ 1997ರಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಎಂಎಸ್ ಪದವಿ ಪಡೆದ ಅನಂತರ ಇವರು ಮಾಡೆಲಿಂಗ್‌ಗೆ ಕಾಲಿಟ್ಟರು.

5/7

ʼಕಿಸ್‌ʼ ಕನ್ನಡ ಚಿತ್ರದ ಮೂಲಕ ಬಣ್ಣದ ಲೀಕಕ್ಕೆ ಕಾಲಿಟ್ಟ ಬೆಂಗಳೂರು ಬೆಡಗಿ ಶ್ರೀಲೀಲಾ ಕಳೆದ ವರ್ಷ ತೆರೆಕಂಡ ತೆಲುಗಿನ ʼಪುಷ್ಪ 2ʼ ಸಿನಿಮಾದ ʼಕಿಸಿಕ್ʼ ಹಾಡಿನಿಂದ ಇನ್ನಷ್ಟು ಖ್ಯಾತಿ ಗಳಿಸಿದ್ದಾರೆ. ಶ್ರೀಲೀಲಾ ಅವರ ತಾಯಿ ಸ್ತ್ರೀರೋಗ ತಜ್ಞೆಯಾಗಿದ್ದಾರೆ. ತಾಯಿಯಿಂದ ಪ್ರೇರಿತರಾಗಿರುವ ಶ್ರೀಲೀಲಾ ಕೂಡ 2021ರಲ್ಲಿ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

6/7

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಯನ್ನು (ನೀಟ್) ಉತ್ತೀರ್ಣರಾಗಿದ್ದಾರೆ. ಇವರು ಸೋನಿಪತ್‌ನ ಭಗತ್ ಫೂಲ್ ಸಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ.

7/7

ತೆಲುಗು, ತಮಿಳು ಚಿತ್ರೋದ್ಯಮದಲ್ಲಿ ಹೆಸರು ಮಾಡಿರುವ ಮೀನಾಕ್ಷಿ ಚೌಧುರಿ ಪಂಜಾಬ್‌ನಲ್ಲಿ ಡೆಂಟಲ್ ಸರ್ಜರಿ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ʼಖಿಲಾಡಿʼ, ʼಲಕ್ಕಿ ಭಾಸ್ಕರ್ʼ, ʼಮಟ್ಕಾʼ ಸೇರಿದಂತೆ ಇವರು ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author