ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Actors: ಸಸ್ಯಾಹಾರವನ್ನೇ ಇಷ್ಟಪಡುವ ಬಾಲಿವುಡ್ ಸೆಲೆಬ್ರಿಟಿಗಳು ಇವರು

ಇತ್ತೀಚೆಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಆರೋಗ್ಯ, ನೀತಿಶಾಸ್ತ್ರ ಅಥವಾ ಪ್ರಾಣಿಗಳ ಮೇಲಿನ ಪ್ರೀತಿಯಿಂದ ಪ್ರೇರಿತರಾಗಿ ಸಸ್ಯಾಹಾರಿ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿ ಅಮಿತಾಭ್‌ ಬಚ್ಚನ್, ಜಾನ್ ಅಬ್ರಹಾಂ, ಶಾಹಿದ್ ಕಪೂರ್ ಕೂಡ ಸೇರಿದ್ದಾರೆ. ಇವರು ಸಸ್ಯಾಹಾರವನ್ನು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಿರುವುದಾಗಿ ಅನೇಕ ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

1/8

ಸಸ್ಯಾಹಾರ ಆಯ್ಕೆಗೆ ಪ್ರೇರಣೆ

ಅಮಿತಾಬ್ ಬಚ್ಚನ್, ಶಾಹಿದ್ ಕಪೂರ್, ಜಾನ್ ಅಬ್ರಹಾಂ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರವನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಇವರ ಜೀವನ ಶೈಲಿಯನ್ನು ಅನುಸರಿಸುವ ಅದೆಷ್ಟೋ ಮಂದಿಗೆ ಸಸ್ಯಾಹಾರ ಆಯ್ಕೆಗೆ ಇವರು ಪ್ರೇರಣೆಯೂ ಆಗಿದ್ದಾರೆ.

2/8

ಅನುಷ್ಕಾ ಶರ್ಮಾ

2015ರಿಂದ ಸಸ್ಯಾಹಾರಿಯಾಗಿರುವ ಅನುಷ್ಕಾ ಶರ್ಮಾ ಅವರಿಗೆ ಇದಕ್ಕೆ ಪ್ರಾಣಿಗಳ ಮೇಲಿನ ಪ್ರೀತಿಯೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಸಸ್ಯಾಹಾರಿ ಆಹಾರ ಕ್ರಮಕ್ಕೆ ಬದಲಾಗಿರುವುದರಿಂದ ಆರೋಗ್ಯ ತುಂಬಾ ಸುಧಾರಿಸಿದೆ ಎನ್ನುತ್ತಾರೆ ಅವರು.

3/8

ಆಲಿಯಾ ಭಟ್‌

2020ರಿಂದ ಸಸ್ಯಾಹಾರವನ್ನೇ ನೆಚ್ಚಿಕೊಂಡಿರುವ ಆಲಿಯಾ ಭಟ್ ಇದು ಅವರ ಯೋಗಕ್ಷೇಮದ ಮೇಲೆ ಬೀರಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಮುಕ್ತವಾಗಿ ಹೇಳುತ್ತಾರೆ. ಆಲಿಯಾ ಪ್ರಾಣಿಗಳ ಹಕ್ಕುಗಳ ಬಗ್ಗೆಯೂ ಧ್ವನಿಯನ್ನೂ ಹಲವು ಬಾರಿ ಎತ್ತಿದ್ದಾರೆ.

4/8

ಅಮಿತಾಭ್‌ ಬಚ್ಚನ್

ಬಿಗ್ ಬಿ ಅಮಿತಾಭ್‌ ಬಚ್ಚನ್ ಅನೇಕ ದಶಕಗಳಿಂದ ಸಸ್ಯಾಹಾರಿಯಾಗಿದ್ದಾರೆ. ಇವರು ಆಗಾಗ್ಗೆ ಸಸ್ಯಾಹಾರದ ಪ್ರಯೋಜನಗಳನ್ನು ಹೇಳುತ್ತಿರುತ್ತಾರೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಸ್ಯಾಹಾರವನ್ನು ಅಳವಡಿಸಿಕೊಳ್ಳಿ ಎಂದು ಅವರ ಅಭಿಮಾನಿಗಳಿಗೆ ಆಗಾಗ್ಗೆ ಸಲಹೆ ನೀಡುತ್ತಿರುತ್ತಾರೆ.

5/8

ವಿದ್ಯಾ ಬಾಲನ್

ವಿದ್ಯಾ ಬಾಲನ್ ಸಸ್ಯಾಹಾರವನ್ನೇ ತಮ್ಮ ಆಹಾರ ಕ್ರಮದಲ್ಲಿ ಪಾಲಿಸುತ್ತಿದ್ದಾರೆ. ಇದು ಆರೋಗ್ಯ, ಜೀರ್ಣಕ್ರಿಯೆ ಮತ್ತು ಚೈತನ್ಯವನ್ನು ಸುಧಾರಿಸಲು ಸಹಾಯ ಮಾಡಿದೆ. ಅಲ್ಲದೇ ಇದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಹೆಚ್ಚು ಸುಧಾರಣೆಯಾಗಿದೆ ಎನ್ನುತ್ತಾರೆ.

6/8

ಶಾಹಿದ್‌ ಕಪೂರ್‌

'ಲೈಫ್ ಈಸ್ ಫೇರ್' ಪುಸ್ತಕವನ್ನು ಓದಿದ ಬಳಿಕ ಶಾಹಿದ್ ಕಪೂರ್ ಸಸ್ಯಾಹಾರ ಆಹಾರ ಪದ್ದತಿಯನ್ನು ಪಾಲಿಸುತ್ತಿದ್ದಾರೆ. ಈ ಪುಸ್ತಕ ಅವರ ಆಹಾರ ಮತ್ತು ನೈತಿಕತೆಯ ಬಗ್ಗೆ ಹೆಚ್ಚು ಆಳವಾಗಿ ಯೋಚಿಸುವಂತೆ ಮಾಡಿತು ಎನ್ನುತ್ತಾರೆ ಅವರು.

7/8

ಜಾನ್ ಅಬ್ರಹಾಂ

ಫಿಟ್‌ನೆಸ್‌ ಪ್ರೇಮಿ ಜಾನ್ ಅಬ್ರಹಾಂ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಇವರು ಸಸ್ಯಾಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಪ್ರಾಣಿಗಳ ಹಕ್ಕುಗಳ ಪರವಾಗಿಯೂ ಧ್ವನಿ ಎತ್ತುವ ಇವರು ಇದಕ್ಕಾಗಿ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುತ್ತಾರೆ.

8/8

ಕಂಗನಾ ರಣಾವತ್

ಕಂಗನಾ ರಣಾವತ್ ಉತ್ತಮ ಆರೋಗ್ಯಕ್ಕಾಗಿ ಸಸ್ಯಾಹಾರ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಯೋಗ ಮತ್ತು ಧ್ಯಾನದಿಂದ ಪ್ರೇರಿತರಾದ ಕಂಗನಾ ತಮ್ಮ ಆಹಾರದಿಂದ ಮಾಂಸಹಾರವನ್ನು ತೆಗೆದುಹಾಕಿದ ಬಳಿಕ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸಿದೆ ಎನ್ನುತ್ತಾರೆ.

ವಿದ್ಯಾ ಇರ್ವತ್ತೂರು

View all posts by this author