ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೆಲೋಡಿಗಿಂತ ಮೊದಲು ಟ್ರೆಂಡ್‌ ಸೆಟ್‌ ಮಾಡಿದ ಚಾಕೊಲೇಟ್‌ಗಳಿವು; 90ರ ದಶಕದಲ್ಲಿ ಮೋಡಿ ಮಾಡಿದ ಈ ಮಿಠಾಯಿ ನೀವೂ ಸವಿದಿದ್ದೀರಾ?

ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟೋಫಿಯನ್ನು ಉಡುಗೊರೆಯಾಗಿ ನೀಡಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಮೆಲೋಡಿ ಟೋಫಿಯದ್ದೇ ಚರ್ಚೆ ಶುರುವಾಗಿದೆ. ಮೆಲೊಡಿಗಿಂತಲೂ ಮೊದಲು ಭಾರತದಲ್ಲಿ ಹಲವು ಐಕಾನಿಕ್ ಕ್ಯಾಂಡಿಗಳಿದ್ದವು. ಅವುಗಳು ಸಿಹಿ ಪ್ರಿಯರ ಮನಸ್ಸು ಗೆದ್ದಿತ್ತು. ಅವುಗಳು ಯಾವುದು ಇಲ್ಲಿವೆ ಮಾಹಿತಿ.

ಸಂಗ್ರಹ ಚಿತ್ರ
1/10

ಮೆಲೋಡಿ ಟೋಫಿಗಿಂತಲೂ ಮೊದಲು ಭಾರತದಲ್ಲಿ ಸಿಹಿ ಪ್ರಿಯರ ಮನಸ್ಸು ಗೆದ್ದ ಹಲವು ಟೋಫಿಗಳಿವೆ. ಅವುಗಳಲ್ಲಿ ಫ್ಯಾಂಟಮ್, ಮಾವಿನ ಬೈಟ್ ಕೂಡ ಸೇರಿತ್ತು. 90ರ ದಶಕದ ಪ್ರತಿಯೊಂದು ಮಗು ಕೂಡ ಸವಿದಿರುವ ಈ 10 ಐಕಾನಿಕ್ ಟೋಫಿಗಳು ಕೇವಲ ಸಿಹಿ ತಿಂಡಿಯಾಗಿರಲಿಲ್ಲ. ಅದು ಸುಂದರ ನೆನಪಿನ ಭಾಗವೂ ಆಗಿತ್ತು.

2/10

ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟೋಫಿಯನ್ನು ಉಡುಗೊರೆಯಾಗಿ ನೀಡಿದ ಬಳಿಕ ಭಾರತದ 90ರ ದಶಕದ ಹಲವು ಟೋಫಿಗಳು ಈಗಲೂ ಮನೆಮಾತಾಗಿವೆ. ಯಾಕೆಂದರೆ ಇವು ಬಾಲ್ಯದ ಹಲವು ನೆನಪುಗಳನ್ನು ಅದರಲ್ಲೂ ಮುಖ್ಯವಾಗಿ ಶಾಲಾ ದಿನಗಳು, ಪಾಕೆಟ್ ಮನಿಯ ಸುಂದರ ಕ್ಷಣಗಳ ಸಿಹಿಯನ್ನು ಮನದಲ್ಲಿ ತುಂಬುತ್ತದೆ.

3/10

90ರ ದಶಕದಲ್ಲಿ ಅತ್ಯಂತ ಜನಪ್ರಿಯ ಕ್ಯಾಂಡಿಗಳಲ್ಲಿ ಆಲ್ಪೆನ್ಲೀಬೆ ಒಂದಾಗಿತ್ತು. ಇದರ ಕೆನೆಭರಿತ ಕ್ಯಾರಮೆಲ್ ರುಚಿ ಮತ್ತು ಮೃದು ಗುಣದಿಂದ ಎಲ್ಲರ ಮನ ಗೆದ್ದಿತ್ತು. ಅನೇಕರಿಗೆ ಇವತ್ತಿಗೂ ಬೆಣ್ಣೆಯ ಸುವಾಸನೆಯು ಈ ಕ್ಯಾಂಡಿಯನ್ನು ನೆನಪಿಸುತ್ತದೆ.

4/10

ಎಲ್ಲರೂ ಮನಸೋತ ಕ್ಯಾಂಡಿ ಕಿಸ್ಮಿ. ಕ್ಯಾರಮೆಲ್ ಮತ್ತು ಏಲಕ್ಕಿಯ ಮಿಶ್ರಣದಿಂದ ಇದನ್ನು ಹೆಚ್ಚಿನವರು ಇಷ್ಟಪಟ್ಟಿದ್ದರು. ಇದರ ಒಂದು ಸಣ್ಣ ಬೈಟ್ ನಾಲಗೆಯಲ್ಲಿ ಕರಗುತ್ತಿದ್ದರೆ ಮನಸ್ಸು ಸಂತೃಪ್ತಗೊಳ್ಳುತ್ತಿತ್ತು. ಇದರ ವಿಶಿಷ್ಟ ಸುವಾಸನೆಯನ್ನು ಇದನ್ನು ಸವಿದವರಾರು ಕೂಡ ಮರೆಯಲಾರರು.

5/10

ಆಕರ್ಷಕ ಬಣ್ಣ, ಸುವಾಸನೆಯಿಂದ ತುಂಬಿದ್ದ ಪಾಪಿನ್‌ ಹಂಚಿಕೊಳ್ಳುವುದೇ ಒಂದು ಸಂಭ್ರಮ. ಇದರ ಪ್ರತಿಯೊಂದು ಬಣ್ಣವು ಸ್ವಲ್ಪ ವಿಭಿನ್ನ ರುಚಿ ಹೊಂದಿದ್ದು, ಊಟದ ವಿರಾಮದ ಸಮಯದಲ್ಲಿ ಹೆಚ್ಚಿನವರು ಇದನ್ನು ಶಾಲೆಯಲ್ಲಿ ಹಂಚಿಕೊಂಡು ಸವಿಯುತ್ತಿದ್ದರು. ಇದು ಬಾಲ್ಯದ ಒಂದು ಸುಂದರ ನೆನಪಾಗಿ ಇಂದಿಗೂ ಉಳಿದುಕೊಂಡಿದೆ.

6/10

ಮ್ಯಾಂಗೋ ಬೈಟ್ ಸಣ್ಣ ಹಳದಿ ಹೊದಿಕೆಯಲ್ಲಿ ಬರುತ್ತಿದ್ದ ಈ ಸಿಹಿ ಮಾವಿನ ಹಣ್ಣಿನ ಫ್ಲೇವರ್ ನಿಂದ ತುಂಬಿದೆ. ದೇಶಾದ್ಯಂತ ಮಕ್ಕಳ ಮನಗೆದ್ದ ಟೋಫಿ ಇದು. ಶಾಲೆಗಳ ಸಮೀಪವಿರುವ ಪ್ರತಿಯೊಂದು ಸಣ್ಣ ಅಂಗಡಿಯಲ್ಲೂ ಕೂಡ ಇದು ದೊರೆಯುತ್ತಿತ್ತು.

7/10

ಕೋಲಾ ರುಚಿ ಹೊಂದಿದ್ದ ರೋಲ್-ಎ-ಕೋಲಾ ಕ್ಯಾಂಡಿ ಸ್ನೇಹಿತರೊಂದಿಗೆ ಹಂಚಿ ತಿನ್ನಲು ಎಲ್ಲರೂ ಇಷ್ಟಪಡುತ್ತಿದ್ದ ಮತ್ತೊಂದು ಟೋಫಿ. ಹೆಚ್ಚಿನ ಕ್ಯಾಂಡಿಗಳು ಒಂದೇ ರೀತಿಯ ರುಚಿ ಹೊಂದಿದ್ದ ಸಮಯದಲ್ಲಿ ಇದು ಮಾತ್ರ ಗಾಢ ಸುವಾಸನೆಯಿಂದ ಭಿನ್ನವಾಗಿ ಕಾಣುತ್ತಿತ್ತು.

8/10

ಫ್ಯಾಂಟಮ್ ಸ್ವೀಟ್ ಸಿಗರೇಟ್‌ 90 ರ ದಶಕದಲ್ಲಿ ಜನಪ್ರಿಯ ಕ್ಯಾಂಡಿಗಳಲ್ಲಿ ಒಂದು. ಸಣ್ಣ ಸಿಗರೇಟುಗಳಂತೆ ಪ್ಯಾಕ್ ಮಾಡಲ್ಪಟ್ಟ ಈ ಸಿಹಿಯು ಮಕ್ಕಳಿಗಿಂತ ಹೆಚ್ಚು ದೊಡ್ಡವರನ್ನು ಕೂಡ ಆಕರ್ಷಿಸಿತ್ತು. ಅಸಾಮಾನ್ಯ ವಿನ್ಯಾಸವೇ ಅದರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

9/10

ಪಂಜೋನ್‌ ಕ್ಯಾಂಡಿ ಕೂಡ ಗಾಢ ಸುವಾಸನೆಯಿಂದ ಎಲ್ಲರ ಮನ ಸೆಳೆದಿತ್ತು. ಕಟುವಾದ ರುಚಿ ಹೊಂದಿದ್ದ ಇದು ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುವ ಆಸೆಯನ್ನು ಹುಟ್ಟುವಂತೆ ಮಾಡಿತ್ತು. ಇದರೊಂದಿಗೆ ಪ್ಯಾನ್ ಪಸಂದ್ ಸಿಹಿ ಸುವಾಸನೆಯೊಂದಿಗೆ ಭಾರತೀಯರ ಅಡುಗೆ ಮನೆಯ ಡಬ್ಬಿಗಳಲ್ಲಿ ಸ್ಥಾನ ಪಡೆದಿತ್ತು.

10/10

ಎಕ್ಲೇರ್‌ಗಳು ಮತ್ತು ಪಲ್ಸ್ ಕ್ಯಾಂಡಿ ಕೂಡ ಎಲ್ಲರ ಹೃದಯ ಗೆದ್ದ ಸಿಹಿ. ಎಕ್ಲೇರ್‌ ಚಾಕೊಲೇಟ್‌ಗಳಲ್ಲಿ ಅಡಗಿರುವ ಕ್ಯಾರಮೆಲ್ ಎಲ್ಲರ ಮನ ಗೆದ್ದಿತ್ತು. ಪಲ್ಸ್ ಕ್ಯಾಂಡಿ ಕಟುವಾದ ಸುವಾಸನೆಯಿಂದ ಜನಪ್ರಿಯತೆ ಗಳಿಸಿತ್ತು. ಒಟ್ಟಿನಲ್ಲಿ ಈ ಎಲ್ಲಾ ಸಿಹಿಗಳು ಇವತ್ತಿಗೂ ಕೂಡ ಮನೆಮಾತಾಗಿದೆ. ಸಿಕ್ಕಿದರೆ ಒಮ್ಮೆ ಸವಿದು ನೋಡಬೇಕು ಎನ್ನುವ ಆಸೆ ಮೂಡಿಸದೆ ಇರಲಾರದು.

ವಿದ್ಯಾ ಇರ್ವತ್ತೂರು

View all posts by this author