ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S.L. Bhyrappa: ʼಗೃಹಭಂಗʼ, ʼದಾಟುʼ: ಅತೀ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಭೈರಪ್ಪ ಕೃತಿಗಳು

ಕನ್ನಡ ಸಾಹಿತ್ಯ ಲೋಕಕ್ಕೆ, ಕಾದಂಬರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್‌.ಎಸ್‌. ಭೈರಪ್ಪ ಇನ್ನಿಲ್ಲ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸೆಪ್ಟೆಂಬರ್‌ 24ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ತಮ್ಮ ವಿಶಿಷ್ಟ ಕೃತಿಗಳ ಮೂಲಕ ಸಾಹಿತ್ಯ ಪ್ರೇಮಿಗಳಗಳ ಗಮನ ಸೆಳೆದ ಅವರ ಹಲವು ಕಾದಂಬರಿಗಳು ಭಾರತದ ವಿವಿಧ ಭಾಷೆಗಳು ಮಾತ್ರವಲ್ಲ ಇಂಗ್ಲಿಷ್‌ಗೂ ಅನುವಾದಗೊಂಡಿವೆ. ಇಲ್ಲಿದೆ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಭೈರಪ್ಪ ಅವರ ಕೃತಿಗಳ ವಿವರ.

1/5

'ಗೃಹಭಂಗ'

ಎಸ್‌.ಎಲ್‌. ಭೈರಪ್ಪ ಅವರ ಜನಪ್ರಿಯ ಕಾದಂಬರಿಗಳಲಿ 'ಗೃಹಭಂಗ' ಮೊದಲ ಸಾಲಿನಲ್ಲಿ ನಿಲ್ಲುತ್ತದೆ. 1970ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ ಇದು ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಇದೂ ಒಂದು. ಹಲವು ಬಾರಿ ಮರುಮುದ್ರಣಗೊಂಡ ಇದರ ಕಥೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುತ್ತದೆ. ಕಥೆ 1920ರ ದಶಕದಲ್ಲಿ ಆರಂಭವಾಗಿ 1960ರಲ್ಲಿ ಮುಕ್ತಾಯವಾಗುತ್ತದೆ. ಈ ಕೃತಿ ಭಾರತದ 14 ಭಾಷೆ, ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಜತೆಗೆ ಟಿವಿ ಸೀರೀಸ್‌ ಆಗಿಯೂ ಪ್ರಸಾರವಾಗಿದೆ.

2/5

ʼದಾಟುʼ

1973ರಲ್ಲಿ ಪ್ರಕಟಗೊಂಡ ʼದಾಟುʼ ಕಾದಂಬರಿ ಕೂಡ ಭೈರಪ್ಪ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಭಾರತೀಯ ಸಂಸ್ಕೃತಿಯಲ್ಲಿ ಬೀಡುಬಿಟ್ಟಿರುವ ಜಾತಿ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಈ ಕೃತಿ ಕೂಡ ಭಾರತದ 14 ಭಾಷೆ, ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಜತೆಗೆ ಹಿಂದಿಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿದೆ.

3/5

ʼವಂಶವೃಕ್ಷʼ

1965ರಲ್ಲಿ ಹೊರಬಂದ ʼವಂಶವೃಕ್ಷʼ ಕಾದಂಬರಿ ಕೂಡ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಇದು ತೆಲುಗು, ಮರಾಠಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಮೂಡಿ ಬಂದಿದೆ. ಜತೆಗೆ ಕನ್ನಡ ಚಿತ್ರವಾಗಿಯೂ ತೆರೆಕಂಡು ಹಲವು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಈ ಕಾದಂಬರಿಗೆ 1966ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ವಂಶವೃಕ್ಷವು ಪ್ರೀತಿ ಮತ್ತು ದುರಂತದ ಸೂಕ್ಷ್ಮ ಪರಿಶೋಧನೆಯಾಗಿದ್ದು, ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟಗಳೊಂದಿಗೆ ಥಳುಕು ಹಾಕಿಕೊಂಡಿದೆ.

4/5

ʼಪರ್ವʼ

ʼಮಹಾಭಾರತʼ ಕೃತಿಯನ್ನು ತಮ್ಮದೇ ದೃಷ್ಟಿಕೋನದಲ್ಲಿ ಭೈರಪ್ಪ ಹೆಣೆದ ಕಾದಂಬರಿಯೇ ʼಪರ್ವʼ. 1979ರಲ್ಲಿ ಬಿಡುಗಡೆಗೊಂಡ ಈ ಕಾದಂಬರಿ 19ಕ್ಕಿಂತ ಹೆಚ್ಚುಬಾರಿ ಮರುಮುದ್ರಣಗೊಂಡಿದೆ. ಭೈರಪ್ಪ ಅವರ ಶ್ರೇಷ್ಠ ಕೃತಿಗಳಲ್ಲಿ ಇದೂ ಒಂದು. ನಾಟಕವಾಗಿಯೂ ಜನಪ್ರಿಯವಾದ ಈ ಕೃತಿ ತೆಲುಗು, ಮರಾಠಿ, ಹಿಂದಿ, ಬೆಂಗಾಳಿ, ತಮಿಳು ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿದೆ.

5/5

ʼಆವರಣʼ

2007ರಲ್ಲಿ ಪ್ರಕಟಗೊಂಡ ʼಆವರಣʼ ಅತೀ ಹೆಚ್ಚು ಚರ್ಚೆಗೆ ಒಳಗಾದ ಭೈರಪ್ಪ ಅವರ ಕೃತಿ. ಪ್ರಕಟಗೊಂಡ 5 ತಿಂಗಳಲ್ಲೇ 10 ಬಾರಿ ಮರುಮುದ್ರಣಗೊಂಡು ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ದಾಖಲೆ ಬರೆದಿದೆ. ಮತಾಂತರ ಕಥಾವಸ್ತು ಹೊಂದಿರುವ ಕಾರಣಕ್ಕೆ ಇದು ಪ್ರಕಟಗೊಂಡ ವೇಳೆ ಭಾರಿ ವಿವಾದ ಹುಟ್ಟು ಹಾಕಿತ್ತು. ಇದು ಹಿಂದಿ, ಸಂಸ್ಕೃತ, ಮಲಯಾಳಂ, ಮರಾಠಿ, ತಮಿಳು, ಇಂಗ್ಲಿಷ್‌, ಗುಜರಾತಿ, ತೆಲುಗಿಗೆ ಅನುವಾದಗೊಂಡಿದೆ.