ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ugadi Fashion 2026: ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಯುಗಾದಿ ಹಬ್ಬಕ್ಕೆ ಲಂಗ-ದಾವಣಿ ಧರಿಸಬೇಕೆಂದುಕೊಂಡಿದ್ದೀರಾ? ಹಾಗಾದಲ್ಲಿ ಈ ಸೀಸನ್‌ನಲ್ಲಿ ಯಾವ ಬಗೆಯವು ಟ್ರೆಂಡಿಯಾಗಿವೆ. ಲಂಗ-ದಾವಣಿ ಧರಿಸುವವರು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ ನಿಶಾ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರಗಳು: ಡಾ. ನಿಶಾ ಮೈಸೂರು, ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ 2025
1/5

ಯುಗಾದಿಗೆ ನೀವು ಲಂಗ-ದಾವಣಿ ಧರಿಸಬೇಕೆಂದು ಕೊಂಡಿದ್ದೀರಾ! ಹಾಗಾದಲ್ಲಿ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಲಂಗ-ದಾವಣಿ ಔಟ್‌ಫಿಟ್‌ ಬಗ್ಗೆ ತಿಳಿದುಕೊಳ್ಳಿ ಹಾಗೂ ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದನ್ನು ಅರಿತುಕೊಳ್ಳಿ ಎನ್ನುತ್ತಾರೆ 2025 ರ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ ಡಾ. ನಿಶಾ.

2/5

2025 ರ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ ಡಾ. ನಿಶಾ ಅವರ ಪ್ರಕಾರ, ಒಂದಿಷ್ಟು ಅಂಶಗಳನ್ನು ಅಳವಡಿಸಿಕೊಂಡರೇ ಆಯಾ ಲಂಗ-ದಾವಣಿ ಡಿಸೈನ್‌ಗೆ ತಕ್ಕಂತೆ ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ.

3/5

ಯುಗಾದಿಯಲ್ಲಿ ಮರಳಿದ ಲಂಗ-ದಾವಣಿ

ಎಂದಿನಂತೆ ಹಬ್ಬಗಳು ಬಂದಾಗ ಲಂಗ-ದಾವಣಿ ನಾನಾ ಡಿಸೈನ್‌ನಲ್ಲಿ ಮರಳುತ್ತವೆ. ಈ ಬಾರಿ ಯುಗಾದಿಗೆ ಒಂದು ಡಿಸೈನ್‌ನದ್ದಲ್ಲ! ನಾನಾ ಡಿಸೈನ್‌ನ ಲಂಗ-ದಾವಣಿಗಳು ಬಂದಿವೆ. ಟ್ರೆಡಿಷನಲ್‌ ಬ್ರೋಕೆಡ್‌, ಬನಾರಸಿ ಲಂಗ-ದಾವಣಿ, ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಲೆಹೆಂಗಾ ಸೈಲಿಯವು, ದೇಸಿ ಲುಕ್‌ ನೀಡುವ ರೇಷ್ಮೆ ಲಂಗ-ದಾವಣಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ನಿಶಾ.

4/5

ಟ್ರೆಡಿಷನಲ್‌ ಲಂಗ-ದಾವಣಿ ಲುಕ್

ಇನ್ನು, ಟ್ರೆಡಿಷನಲ್‌ ಲುಕ್‌ ನೀಡುವ ಬನಾರಸಿ, ಬ್ರೋಕೆಡ್‌ ಹಾಗೂ ರೇಷ್ಮೆಯ ಲಂಗ-ದಾವಣಿಯನ್ನು ಧರಿಸುವವರು ಆದಷ್ಟೂ ಟ್ರೆಡಿಷನಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ ಮಾಡಬೇಕು. ಮೇಕೋವರ್‌ ಮಾಡರ್ನ್‌ ಲುಕ್‌ ನೀಡಬಾರದು. ನೋಡಲು ಹಬ್ಬದ ಲುಕ್‌ ನೀಡಬೇಕು. ಹಾಗಾಗಿ ಜ್ಯುವೆಲರಿಗಳನ್ನು ಕೂಡ ಟೆಂಪಲ್‌ ಹಾಗೂ ಆಂಟಿಕ್‌ ಜ್ಯುವೆಲರಿಗಳನ್ನು ಧರಿಸಬೇಕು. ಹಣೆಗೆ ಬಿಂದಿ ವದನದ ಕಳೆ ಹೆಚ್ಚಿಸಬಹುದು.

5/5

ಲೆಹೆಂಗಾ ಶೈಲಿಯ ಲಂಗ-ದಾವಣಿ ಲುಕ್‌

ಇತ್ತೀಚೆಗೆ ಟೀನೇಜ್‌ ಹುಡುಗಿಯರು ಗ್ಲಾಮರಸ್‌ ಆಗಿ ಕಾಣಿಸುವ ಇಂಡೋ-ವೆಸ್ಟರ್ನ್‌ ಲಂಗ-ದಾವಣಿಯನ್ನು ಆಯ್ಕೆ ಮಾಡಿ ಧರಿಸತೊಡಗಿದ್ದಾರೆ. ಈ ಡಿಸೈನರ್‌ವೇರ್‌ಗೆ ಟ್ರೆಡಿಷನಲ್‌ ಲುಕ್‌ ಬೇಕಾಗದು. ಕೊಂಚ ಮಾಡರ್ನ್‌ ಲುಕ್‌ ನೀಡುವ ಈ ಔಟ್‌ಫಿಟ್‌ಗೆ ಫ್ರೀ ಹೇರ್‌ಸ್ಟೈಲ್‌, ಸ್ಮೋಕಿ ಐ ಮೇಕಪ್‌ ಹಾಗೂ ಆಕ್ಸಿಡೈಸ್ಡ್ ಜ್ಯುವೆಲರಿಗಳನ್ನು ಧರಿಸಬಹುದು. ಲುಕ್‌ ಮತ್ತಷ್ಟು ಅತ್ಯಾಕರ್ಷಕವಾಗುವುದು.

ಶೀಲಾ ಸಿ ಶೆಟ್ಟಿ

View all posts by this author