ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ugadi-Ramzan Shopping 2026: ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ

Ugadi-Ramzan Shopping: ವೀಕೆಂಡ್ ಆರಂಭವಾಗಿಲ್ಲ! ಆಗಲೇ ಮುಂಬರುವ ಯುಗಾದಿ- ರಂಜಾನ್ ಹಬ್ಬಗಳ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಯಾವ್ಯಾವ ಬಗೆಯವು ಈ ಹಬ್ಬದ ಸೀಸನ್‌ನಲ್ಲಿ ಬಂದಿವೆ? ಯಾವುದಕ್ಕೆ ಬೇಡಿಕೆ ಹೆಚ್ಚಿದೆ? ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಗಳು: ಮಿಂಚು
1/5

ವೀಕೆಂಡ್ ಶುರುವಾಗಿಲ್ಲ! ಆಗಲೇ ಎಲ್ಲೆಡೆ ಯುಗಾದಿ-ರಂಜಾನ್ ಹಬ್ಬಗಳ ಶಾಪಿಂಗ್ ಆರಂಭವಾಗಿದೆ. ಕೇವಲ, ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಮಾತ್ರವಲ್ಲ, ಚಿಕ್ಕಪುಟ್ಟ ಸ್ಟ್ರೀಟ್ ಶಾಪ್‌ಗಳಲ್ಲಿ, ಕಮರ್ಷಿಯಲ್ ಶಾಪಿಂಗ್ ಏರಿಯಾಗಳಲ್ಲಿ ಈಗಾಗಲೇ ಶಾಪಿಂಗ್ ಮೇನಿಯಾ ಕಾಣತೊಡಗಿದೆ.

2/5

ಯುಗಾದಿ-ರಂಜಾನ್ ಶಾಪಿಂಗ್ ಅಬ್ಬರ

ಮುಂದಿನ ವಾರ ಕೇವಲ ಒಂದೆರೆಡು ದಿನಗಳ ಅಂತರದಲ್ಲಿ ಆಗಮಿಸುವ ಯುಗಾದಿ ಹಾಗೂ ರಂಜಾನ್ ಹಬ್ಬಗಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಸೇರಿದಂತೆ ಎರಡು ಮಾರುಕಟ್ಟೆಗಳು ಸಜ್ಜಾಗಿವೆ.

ಯುಗಾದಿ-ರಂಜಾನ್‌ಗೆ ಎಥ್ನಿಕ್ ಡಿಸೈನರ್‌ವೇರ್ಸ್

ಈ ಎರಡು ಹಬ್ಬಗಳಿಗೆ ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಗ್ರ್ಯಾಂಡ್ ಎಥ್ನಿಕ್ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ.

3/5

ಮಾನಿನಿಯರಿಗೆ ಗ್ರ್ಯಾಂಡ್ ಉಡುಗೆಗಳು

ಎಂದಿನಂತೆ, ಲೇಡಿಸ್ ಕೆಟಗರಿಯಲ್ಲಿ, ಗೋಲ್ಡನ್ ಹಾಗೂ ಸಿಲ್ವರ್ ಶೇಡ್‌ನ ಬಗೆಬಗೆಯ ಸೀರೆಗಳು, ಲೆಹೆಂಗಾ, ಅನಾರ್ಕಲಿ, ಗಾಗ್ರಾ, ಗರಾರ, ಶರಾರ, ಲೆಹೆಂಗಾ, ಸಲ್ವಾರ್ ಸೂಟ್‌ಗಳು ಲಗ್ಗೆ ನೀಡಿವೆ. ಇನ್ನು ರಂಜಾನ್ ಆಚರಿಸುವ ಮಹಿಳೆಯರಿಗೆ ಹೆವಿ ಎಂಬ್ರಾಯ್ಡರಿ ಹಾಗೂ ಹ್ಯಾಂಡ್ ವರ್ಕ್, ಮೆಷಿನ್ ವರ್ಕ್ ಇರುವಂತವು ಆಗಮಿಸಿವೆ.

4/5

ಮೆನ್ಸ್ ಡಿಸೈನರ್‌ವೇರ್ಸ್

ಎಂದಿನಂತೆ, ಪುರುಷರಿಗಾಗಿ ಸಿಂಪಲ್ ಡಿಸೈನ್‌ನಿಂದಿಡಿದು ಕೊಂಚ ಗ್ರ್ಯಾಂಡ್‌ಲುಕ್ ನೀಡುವಂತಹ ಲಾಂಗ್ ಕುರ್ತಾ ಹಾಗೂ ಪಠಾನ್ ಶೈಲಿಯ ಡಿಸೈನರ್‌ವೇರ್‌ಗಳು, ಯುಗಾದಿ ಆಚರಿಸುವವರಿಗೆ ಪಂಚೆ-ಶಲ್ಯ ಹಾಗೂ ಧೋತಿ ಸೆಟ್‌ಗಳು ಪಾಸ್ಟೆಲ್ ಹಾಗೂ ಲೈಟ್ ವರ್ಣಗಳಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರಾದ ರಾಜೇಶ್ ಹಾಗೂ ಜನಕ್.

5/5

ಮಕ್ಕಳ ಮಿನಿ ಡಿಸೈನರ್‌ವೇರ್ಸ್

ಮಕ್ಕಳಿಗೆ ಲೆಕ್ಕವಿಲ್ಲದಷ್ಟು ಬಗೆಯ ಬ್ರೋಕೆಡ್‌ನ ಮಿನಿ ಲೆಹೆಂಗಾ, ರೆಡಿ ಮಿನಿ ಸೀರೆ, ಸಲ್ವಾರ್, ಶರಾರ ಹಾಗೂ ಅನಾರ್ಕಲಿ ಗೌನ್‌ಗಳು ಬಂದಿವೆ. ಗಂಡು ಮಕ್ಕಳಿಗೆ ಥೇಟ್ ದೊಡ್ಡವರ ಶೈಲಿಯ ಕುರ್ತಾ, ಶೆರ್ವಾನಿ ಸೆಟ್‌ಗಳು ಲಗ್ಗೆ ಇಟ್ಟಿವೆ ಎನ್ನುತ್ತಾರೆ ಶಾಪಿಂಗ್ ಮಾಲ್‌ವೊಂದರ ಸೇಲ್ಸ್ ಮ್ಯಾನ್ ರಾಜು.

ಶೀಲಾ ಸಿ ಶೆಟ್ಟಿ

View all posts by this author