ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ugadi-Ramzan Fashion 2026: ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ರಂಜಾನ್ ಮತ್ತು ಯುಗಾದಿ ಫೆಸ್ಟೀವ್ ಸೀಸನ್‌ನಲ್ಲಿ ಇದೀಗ ನಾನಾ ಬಗೆಯ ವಿನ್ಯಾಸದ ಬ್ಯಾಂಗಲ್ಸ್ ಲಗ್ಗೆ ಇಟ್ಟಿವೆ. ನಾನಾ ಕಲರ್‌ಗಳಲ್ಲಿ ಡಿಸೈನ್‌ಗಳಲ್ಲಿ ಲಭ್ಯ. ಲೆಹೆಂಗಾ, ಸೀರೆ, ಲಂಗ-ದಾವಣಿಗೆ ಮ್ಯಾಚ್ ಆಗುವಂತಹ, ಸೈಡ್‌ನಲ್ಲಿ, ಕಡದಂತಹ ಡಿಸೈನ್ ಹೊಂದಿರುವ ಬಳೆಗಳು ಇವುಗಳೊಂದಿಗೆ ಬಂದಿವೆ. ಇವನ್ನು ಮಿಕ್ಸ್ ಮಾಡಿ ಕೂಡ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತ ವರದಿ ಇಲ್ಲಿದೆ.

ವಿವಿಧ ವಿನ್ಯಾಸದ ಬಳೆಗಳು (ಚಿತ್ರಕೃಪೆ: ಪಿಕ್ಸೆಲ್)
1/5

ಯುಗಾದಿ ಮತ್ತು ರಂಜಾನ್ ಫೆಸ್ಟೀವ್ ಸೀಸನ್‌ಗೆ ಬಗೆಬಗೆಯ ವಿನ್ಯಾಸದ ಬ್ಯಾಂಗಲ್‌ಗಳು ಬಿಡುಗಡೆಗೊಂಡಿವೆ. ಎರಡೆರಡು ಹಬ್ಬಗಳಲ್ಲಿ ಮಾನಿನಿಯರ ಕೈಗಳನ್ನು ಸಿಂಗರಿಸಲು ಸಜ್ಜಾಗಿವೆ.

2/5

ಯುಗಾದಿಗೆ ಬಂತು ಕಲರ್‌ಫುಲ್ ಸೆಟ್ ಬ್ಯಾಂಗಲ್ಸ್

ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಗ್ರ್ಯಾಂಡ್ ಶೇಡ್‌ನ ಕಲರ್‌ಫುಲ್ ಸೆಟ್ ಬಳೆಗಳು ಆಗಮಿಸಿವೆ. ನಾನಾ ಕಲರ್‌ಗಳಲ್ಲಿ ಡಿಸೈನ್‌ಗಳಲ್ಲಿ ಲಭ್ಯ. ಲೆಹೆಂಗಾ, ಸೀರೆ, ಲಂಗ-ದಾವಣಿಗೆ ಮ್ಯಾಚ್ ಆಗುವಂತಹ, ಸೈಡ್‌ನಲ್ಲಿ, ಕಡದಂತಹ ಡಿಸೈನ್ ಹೊಂದಿರುವ ಬಳೆಗಳು ಇವುಗಳೊಂದಿಗೆ ಬಂದಿವೆ. ಇವನ್ನು ಮಿಕ್ಸ್ ಮಾಡಿ ಕೂಡ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್.

3/5

ರಂಜಾನ್‌ಗೆ ಮಿರಮಿರ ಮಿನುಗುವ ಬ್ಯಾಂಗಲ್ಸ್

ಇನ್ನು, ರಂಜಾನ್ ಹಬ್ಬಕ್ಕೆ ಮಿನುಗುವ ಗೋಲ್ಡನ್ ಹಾಗೂ ಸಿಲ್ವರ್ ಶೇಡ್‌ನ ಸೆಟ್ ಬ್ಯಾಂಗಲ್‌ಗಳು ಬಂದಿವೆ. ಮೆಟಲ್, ಫೈಬರ್ ಹಾಗೂ ಗಾಜಿನಲ್ಲೂ ಈ ಸೆಟ್ ಬ್ಯಾಂಗಲ್ಸ್ ದೊರೆಯುತ್ತಿವೆ. ಒಂದಕ್ಕಿಂತ ಒಂದು ಶೈಲಿಯ ಸೆಟ್ ಗ್ರ್ಯಾಂಡ್ ವಿನ್ಯಾಸದಲ್ಲಿ ದೊರೆಯುತ್ತಿವೆ. ಶೈನಿಂಗ್ ಶೇಡ್‌ಗಳಲ್ಲಿ ಅದರಲ್ಲೂ ಗೋಲ್ಡನ್ ಹಾಗೂ ಸಿಲ್ವರ್ ಕಲರ್‌ನವು ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಸೆಟ್ ಬ್ಯಾಂಗಲ್ಸ್ ಮಧ್ಯೆ ಬಿಗ್ ಬ್ಯಾಂಗಲ್‌ಗಳು ಸೇರಿಕೊಂಡಿವೆ. ಇವು ಸೈಡ್ ಬ್ಯಾಂಗಲ್‌ಗಳ ಅಂದ ಹೆಚ್ಚಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ಹಬ್ಬದ ಬ್ಯಾಂಗಲ್ಸ್ ಖರೀದಿಗೆ 5 ಟಿಪ್ಸ್

  • ಹಬ್ಬದ ಡಿಸೈನರ್‌ವೇರ್‌ಗೆ ಮ್ಯಾಚ್ ಆಗುವ ಸೆಟ್ ಬ್ಯಾಂಗಲ್ಸ್ ಖರೀದಿಸಿ.
  • ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದಾದ ಮೂರ್ನಾಲ್ಕು ಡಿಸೈನ್‌ನ ಸೆಟ್ ಬ್ಯಾಂಗಲ್ಸ್ ಕೊಳ್ಳಿ.
5/5
  • ಗೋಲ್ಡ್-ಸಿಲ್ವರ್ ಸೆಟ್ ಬ್ಯಾಂಗಲ್ಸ್ ಎಲ್ಲವಕ್ಕೂ ಹೊಂದುತ್ತವೆ.
  • ಡಜನ್‌ಗಟ್ಟಲೆ ಸಿಗುವ ಸೆಟ್ ಬ್ಯಾಂಗಲ್ಸ್ ಆಯ್ಕೆ ಮಾಡಿ.
  • ಆದಷ್ಟೂ ಬಾಳಿಕೆ ಬರುವಂತಹ ಬಳೆಗಳನ್ನು ಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author