ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ugadi Shopping Tips 2026: ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಈ ಹಬ್ಬಕ್ಕೆ ಡಿಸೈನರ್‌ವೇರ್‌ ಅದರಲ್ಲೂ ಎಥ್ನಿಕ್‌ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್‌ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್‌ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ವಿವರ ಇಲ್ಲಿದೆ.

ಎಥ್ನಿಕ್‌ವೇರ್ಸ್ (ಚಿತ್ರಕೃಪೆ: ಮಿಂಚು)
1/5

ಯುಗಾದಿ ಸಂಭ್ರಮದ ಹೊಸ ವರ್ಷದ ಹಬ್ಬ. ಈ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸುವವರೆಲ್ಲರೂ ಹೊಸ ಉಡುಗೆ-ತೊಡುಗೆಗಳನ್ನು ಕೊಂಡು ಧರಿಸುವುದು ಮೊದಲಿನಿಂದಲೂ ನಮ್ಮ ಆಚರಣೆಯಲ್ಲಿ ನಡೆದುಕೊಂಡು ಬಂದಿದೆ. ಈ ಹಬ್ಬಕ್ಕೆ ಡಿಸೈನರ್‌ವೇರ್‌ ಅದರಲ್ಲೂ ಎಥ್ನಿಕ್‌ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್‌ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್‌ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

2/5

ಯುಗಾದಿಗೆ ಟ್ರೆಂಡಿ ಉಡುಗೆಗಳ ಆಯ್ಕೆ ಮಾಡಿ

ಸದಾ ಒಂದೇ ಬಗೆಯ ಉಡುಗೆ-ತೊಡುಗೆಗಳನ್ನು ಧರಿಸುವ ಬದಲು ಈ ಬಾರಿಯ ಹಬ್ಬಕ್ಕೆ ಯಾವುದೆಲ್ಲಾ ಟ್ರೆಂಡಿಯಾಗಿದೆ? ಯಾವುದೆಲ್ಲಾ ಚಾಲ್ತಿಯಲ್ಲಿದೆ? ಎಂಬುದನ್ನು ಮೊದಲು ತಿಳಿದುಕೊಳ್ಳಿ. ಸೋಷಿಯಲ್‌ ಮೀಡಿಯಾದಲ್ಲಿ ಹಾಗೂ ನ್ಯೂಸ್‌ ಪೋರ್ಟಲ್‌ನಲ್ಲಿ ಟ್ರೆಂಡ್‌ ಬಗ್ಗೆ ತಿಳಿದುಕೊಳ್ಳಿ. ಶಾಪಿಂಗ್‌ ಮಾಡಿ.

ಲೇಡಿಸ್‌ವೇರ್‌ಗಳಲ್ಲಿ ಬಗೆಬಗೆಯ ಡಿಸೈನರ್‌ವೇರ್ಸ್

ಎಂದಿನಂತೆ ಲೇಡಿಸ್‌ವೇರ್‌ಗಳಲ್ಲಿ ವೈವಿಧ್ಯಮಯ ಡಿಸೈನರ್‌ವೇರ್ಸ್ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಈ ಸೀಸನ್‌ಗೆ ಹೊಂದುವಂತಹ ಶೈಲಿಯವನ್ನು ಆಯ್ಕೆ ಮಾಡಿ ಖರೀದಿಸಿ. ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಸೀರೆ, ಲೆಹೆಂಗಾ, ಸಲ್ವಾರ್‌ ಹೀಗೆ ಸಾಕಷ್ಟು ಅಪ್ಷನ್‌ ಲಭ್ಯ.

3/5

ಮೆನ್ಸ್ ಫ್ಯಾಷನ್‌ವೇರ್‌ಗಳ ಆಯ್ಕೆ ಸುಲಭ

ಮೆನ್ಸ್ ಎಥ್ನಿಕ್‌ವೇರ್ಸ್‌ನಲ್ಲಿ ಆಯ್ಕೆ ಸುಲಭ. ಯಾಕೆಂದರೇ ಅದೇ ಹೆಸರಲ್ಲಿ ಕೊಂಚ ಡಿಸೈನ್‌ ಬದಲಾವಣೆಯಲ್ಲಿ ದೊರಕುತ್ತವೆ. ಹಾಗಾಗಿ ಇತ್ತೀಚೆಗೆ ಟ್ರೆಂಡಿಯಾಗಿರುವ ಉಡುಗೆಗಳನ್ನು ಖರೀದಿಸಿ. ಸೌತ್‌ ಇಂಡಿಯನ್‌ ಲುಕ್‌ಗಾದಲ್ಲಿ ಪಂಚೆ-ಶಲ್ಯ, ನಾರ್ತ್‌ ಇಂಡಿಯನ್‌ ಲುಕ್‌ಗಾದಲ್ಲಿ ಶೆರ್ವಾನಿ, ಧೋತಿ-ಜುಬ್ಬಾ ಪೈಜಾಮ ಆಯ್ಕೆ ಮಾಡಿ, ಖರೀದಿಸಿ.

4/5

ಮಕ್ಕಳ ಔಟ್‌ಫಿಟ್ಸ್ ಆಯ್ಕೆ ಹೀಗಿರಲಿ

ಆದಷ್ಟೂ ಮಕ್ಕಳ ಔಟ್‌ಫಿಟ್‌ ಆಯ್ಕೆ ಮಾಡುವಾಗ ಕಂಫರ್ಟಬಲ್‌ವೇರ್ಸ್‌ಗೆ ಆದ್ಯತೆ ನೀಡಿ. ಯಾಕೆಂದರೇ, ತೀರಾ ಗ್ರ್ಯಾಂಡ್‌ ಆಗಿರುವ ಉಡುಪುಗಳು ಮಕ್ಕಳಿಗೆ ಕಿರಿಕಿರಿ ಉಂಟುಮಾಡಬಹುದು.

5/5

ಹಬ್ಬದ ಡಿಸ್ಕೌಂಟ್ಸ್-ರಿಯಾಯತಿ-ವಿನಾಯತಿ

ಫ್ಯಾಮಿಲಿ ಸಮೇತ ಶಾಪಿಂಗ್‌ ಮಾಡುವುದಾದಲ್ಲಿ ಅಥವಾ ಇಂತಿಷ್ಟು ಸಾವಿರ ರೂ. ಗಳ ಶಾಪಿಂಗ್‌ ಮಾಡುವುದಾದಲ್ಲಿ ಸಾಕಷ್ಟು ಕಡೆ ಡಿಸ್ಕೌಂಟ್ಸ್, ರಿಯಾಯತಿ-ವಿನಾಯಿತಿ ಆಫರ್‌ಗಳಿರುತ್ತವೆ. ಇದನ್ನು ಸದುಪಯೋಗಪಡಿಸಿಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author