ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mokshitha Pai: ಒಂದೇ ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಉಗ್ರಂ ಮಂಜು-ಮೋಕ್ಷಿತಾ ಪೈ

ಮೋಕ್ಷಿತಾ ಪೈ ಅವರು ಫ್ಯಾಷನ್ ಶೋ ಒಂದಕ್ಕೆ ಜಡ್ಜ್ ಆಗಿ ಹೋಗಿದ್ದು, ಇದರ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದ ವಿಶೇಷತೆ ಎಂದರೆ ಇದರಲ್ಲಿ ಉಗ್ರಂ ಮಂಜು ಕೂಡ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡವೆ ದೊಡ್ಡ- ದೊಡ್ಡ ಗಲಾಟೆ ನಡೆಯುತ್ತಲೇ ಇತ್ತು.

Max Manju and Mokshita Pai
1/6

ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಬಿಗ್‌ ಬಾಸ್ ಕನ್ನಡ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು. ಬಿಗ್‌ ಬಾಸ್ ಬಳಿಕ ನಟನೆಯಿಂದ ವಿರಾಮ ಪಡೆದಿರುವ ಇವರು ಸದ್ಯ ತಮ್ಮ ಫ್ರಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಕೆಲ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

2/6

ಸದ್ಯ ಮೋಕ್ಷಿತಾ ಪೈ ಅವರು ಫ್ಯಾಷನ್ ಶೋ ಒಂದಕ್ಕೆ ಜಡ್ಜ್ ಆಗಿ ಹೋಗಿದ್ದು, ಇದರ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದ ವಿಶೇಷತೆ ಎಂದರೆ ಇದರಲ್ಲಿ ಉಗ್ರಂ ಮಂಜು ಕೂಡ ಇದ್ದಾರೆ.

3/6

ಹೌದು, ಬಿಗ್ ​ಬಾಸ್​ ಮನೆಯಲ್ಲಿದ್ದಾಗ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡವೆ ದೊಡ್ಡ- ದೊಡ್ಡ ಗಲಾಟೆ ನಡೆಯುತ್ತಲೇ ಇತ್ತು. ಆದರೆ, ಕೊನೆ ಕೊನೆಯಲ್ಲಿ ಈ ಇಬ್ಬರು ಮುನಿಸು ಬಿಟ್ಟು ಮತ್ತೇ ಮಾತಾಡಲು ಶುರು ಮಾಡಿದ್ದರು. ಇದೀಗ ಮತ್ತೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

4/6

ಬಿಗ್ ​ಬಾಸ್​ ಮುಕ್ತಾಯದ ಬಳಿ ಈ ಇಬ್ಬರು ಅಷ್ಟಾಗಿ ಮೀಟ್​ ಆಗಿರಲಿಲ್ಲ. ಇದೀಗ ತುಮಕೂರು ಕಾಲೇಜುವೊಂದರಲ್ಲಿ ನಡೆದಿದ್ದ ಸಾರಾ ಡಿಸೈನರ್ ಫ್ಯಾಷನ್ ಶೋ 2025 (Saara designer fashion show 2025)ಕ್ಕೆ ಜಡ್ಜ್ ಆಗಿ ಈ ಇಬ್ಬರು ಭಾಗಿಯಾಗಿದ್ದರು.

5/6

ಅಷ್ಟೇ ಅಲ್ಲದೇ ಸಾರಾ ಡಿಸೈನರ್ ಫ್ಯಾಷನ್ ಶೋನಲ್ಲಿ ವೀಜೇತರಿಗೆ ಟ್ರೋಫಿ ಕೊಟ್ಟಿದ್ದಾರೆ. ಇನ್ನೂ ಈ ಇಬ್ಬರನ್ನು ಒಂದೇ ವೇದಿಕೆ ಮೇಲೆ ನೋಡಿದ ಅಭಿಮಾನಿಗಳಂತೂ ಫುಲ್​ ಖುಷಿಯಾಗಿದ್ದಾರೆ. ಅಲ್ಲದೇ ಈ ಇಬ್ಬರ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ.

6/6

ಮೋಕ್ಷಿತಾ ಪೈ ಅವರ ಹೊಸ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ‘ಮಿಡಲ್ ಕ್ಲಾಸ್ ರಾಮಾಯಣ' ಎಂಬುದು ಸಿನಿಮಾ ಹೆಸರಾಗಿದ್ದು, ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅತ್ತ ಉಗ್ರಂ ಮಂಜು ಕೂಡ ಎರಡು-ಮೂರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.