Upendra Birthday: 'ಬುದ್ಧಿವಂತ'ನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ- ಉಪ್ಪಿ ಸಿನಿ ಜರ್ನಿ ಆರಂಭವಾಗಿದ್ದು ಹೇಗೆ?
ರಿಯಲ್ ಸ್ಟಾರ್ ಉಪೇಂದ್ರಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ .ಅತ್ಯುತ್ತಮ ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ಬುದ್ದಿವಂತ ಎನಿಸಿ ಕೊಂಡಿರುವ ರಿಯಲ್ ಸ್ಟಾರ್ ಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಅನೇಕ ಗಣ್ಯ ರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಉಪೇಂದ್ರ ಅವರು ಸಿನಿ ಜರ್ನಿಯ ಹಲವು ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.
ಉಪೇಂದ್ರ ಇಂದು 57 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ, ನಟ, ಬರಹಗಾರರಾಗಿ ಖ್ಯಾತಿ ಉಪೇಂದ್ರ ಕಾಶೀನಾಥ್ ಅವರ ಬಳಿ ಅಸಿಸ್ಟಂಟ್ ಡೈರೆಕ್ಟರ್ ಆಗಿ ಮೊದಲು ಸಿನಿ ಜೀವನ ಶುರುಮಾಡಿದ್ದರು. ಆ ಬಳಿಕ ಅವರು ನಟಿಸಿದ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥೆ, ಉತ್ತಮ ಸಂದೇಶ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು.
'ತರ್ಲೆ ನನ್ಮಗ', 'ಶ್', 'ಸ್ವಸ್ತಿಕ್' ಹಾಗು 'ಓಂ' ಸಿನಿಮಾಗಳ ಮೂಲಕ ನಿರ್ದೇಶನದಲ್ಲೂ ಖ್ಯಾತಿ ಪಡೆ ದಿದ್ದ ಉಪ್ಪಿ ಪ್ರೀತ್ಸೆ, ಸೂಪರ್ ಸ್ಟಾರ್, ಹಾಳಿವುಡ್, ರಕ್ತಕಣ್ಣೀರು, ಬುದ್ಧಿವಂತ, ಕಲ್ಪನಾ, s/oಸತ್ಯಮೂರ್ತಿ, ಉಪ್ಪಿ2' ಹೀಗೆ ಹಲವು ಸಿನಿಮಾಗಳು ಉಪೇಂದ್ರಗೆ ಹೆಸರು ತಂದು ಕೊಟ್ಟಿರುವ ಸಿನಿಮಾಗಳು ಆಗಿವೆ.
1968 ರಲ್ಲಿ ಉಡುಪಿಯ ಕೋಟೇಶ್ವರದಲ್ಲಿ ಜನಿಸಿದ ಉಪೇಂದ್ರ ಅವರು ‘ಅನಂತನ ಅವಾಂತರ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುವ ಮೂಲಕ ಸಿನಿಮಾ ಪ್ರವೇಶಿಸಿದರು. ಇದು 1989ರಲ್ಲಿ ತೆರೆ ಮೇಲೆ ಬಂದಿತ್ತು. ಆ ಬಳಿಕ ‘ತರ್ಲೆ ನನ್ಮಗ’ ಅವರು ನಿರ್ದೇಶಿಸಿದ ಮೊದಲ ಸಿನಿಮಾವಾಗಿದ್ದು ‘ಎ’ ಸಿನಿಮಾದ ಮೂಲಕ ನಾಯಕ ನಟನಾದರು.
ಉಪೇಂದ್ರ ನಟಿ ಪ್ರಿಯಾಂಕಾ ಅವರನ್ನು ಮದುವೆಯಾಗಿದ್ದಾರೆ. ಡಿಸೆಂಬರ್ 14, 2003 ರಂದು ಉಪೇಂದ್ರ ಹಾಗೂ ಪ್ರಿಯಾಂಕಾ ತ್ರಿವೇದಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ‘H2O’ ಸಿನಿಮಾದ ಚಿತ್ರೀಕರಣದ ವೇಳೆ ಪ್ರಿಯಾಂಕಾ ತ್ರಿವೇದಿ ಹಾಗೂ ಉಪೇಂದ್ರ ಮಧ್ಯೆ ಪ್ರೀತಿ ಆಗಿತ್ತು.
ಉಪೇಂದ್ರ ನಟಿಸಿದ ಎ' ಸಿನಿಮಾದ ಕ್ರೇಜ್ ಈಗಲೂ ಹಾಗೆಯೇ ಇದೆ. ಜನವರಿ 23, 1998ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಕಂಡ ಈ ಸಿನಿಮಾ ಕಥೆ, ಚಿತ್ರಕಥೆ ನಿರ್ದೇಶನ ಹಾಗೂ ಹೀರೋ ಪಾತ್ರಕ್ಕೂ ಉಪೇಂದ್ರ ಅವರೇ ಜೀವ ತುಂಬಿದ್ದರು. .ಕನ್ನಡದಲ್ಲಿ ಮಾತ್ರ ವಲ್ಲದೆ, ತೆಲುಗಿನಲ್ಲೂ ಈ ಸಿನಿಮಾ ಡಬ್ ಆಗಿ ತೆರೆಕಂಡು ಹಿಟ್ ಗಳಿಸಿತ್ತು.
ಇನ್ನು ಉಪೇಂದ್ರ,ರಕ್ತ ಕಣ್ಣೀರು, ನಾಗರಹಾವು ಮುಂತಾದ ಚಿತ್ರಗಳಲ್ಲಿ ನಟಿಸಿ ಪ್ರಶಂಸೆ ಪಡೆದಿದ್ದ ಇವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. 2018ರಲ್ಲಿ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ಸಿನಿಮಾಕ್ಕಾಗಿ ಹಲವು ಪ್ರಶಸ್ತಿ ಪಡೆದ ಉಪೇಂದ್ರ 'ಎ' ಚಿತ್ರಕ್ಕಾಗಿ ಅತ್ಯುತ್ತಮ ಪುರುಷ ನಟ ಪ್ರಶಸ್ತಿ ಮತ್ತು 'ಉಪೇಂದ್ರ' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ನಟ ಉಪೇಂದ್ರ ಹುಟ್ಟುಹಬ್ಬ ಪ್ರಯುಕ್ತ ಅವರ ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ. “AK 47”, “ಲಾಕಪ್ ಡೆತ್”, ” ಕಲಾಸಿಪಾಳ್ಯ”, “ಹುಚ್ಚ” ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಇದೀಗ ನಟ ಉಪೇಂದ್ರ ಜೊತೆ 'ಗೆರಿಲ್ಲಾ ವಾರ್’ ಹೆಸರಿನ ಸಿನಿಮಾ ಮಾಡಲಿದ್ದು ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಕೂಡ ಹೆಚ್ಚಿದೆ.