ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Valentine’s Fashion 2026: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ರೆಡ್ ಫ್ಯಾಷನ್ ಹವಾ!

Valentine’s week: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಶಾಪಿಂಗ್ ಮಾಲ್‌ಗಳಲ್ಲಿ ಎಲ್ಲಿ ನೋಡಿದರೂ ಬಗೆಬಗೆಯ ರೆಡ್ ಕಲರ್‌ನ ಫ್ಯಾಷನ್‌ವೇರ್‌ಗಳ ಹವಾ! ಒಂದಲ್ಲ ಎರಡಲ್ಲ! ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಮಿಕ್ಸ್ ಮ್ಯಾಚ್ ವಿನ್ಯಾಸದಲ್ಲಿ ರೆಡ್ ಶೇಡ್‌ನ ಫ್ಯಾಷನ್‌ವೇರ್‌ಗಳು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ? ಈ ಎಲ್ಲದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಎಲ್ಲಿ ನೋಡಿದರೂ ರೆಡ್ ಶೇಡ್‌ನ ಫ್ಯಾಷನ್‌ವೇರ್‌ಗಳದ್ದೇ ಹವಾ! ಒಂದಲ್ಲ ಎರಡಲ್ಲ! ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಮಿಕ್ಸ್ ಮ್ಯಾಚ್ ವಿನ್ಯಾಸದಲ್ಲಿ ರೆಡ್ ಶೇಡ್‌ನ ಫ್ಯಾಷನ್‌ವೇರ್‌ಗಳು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿವೆ.

2/5

ವ್ಯಾಲೆಂಟೈನ್ಸ್ ವೀಕ್ ಕಲರ್

ಅಂದಹಾಗೆ, ಇಡೀ ವರ್ಷದಲ್ಲಿಅತಿ ಹೆಚ್ಚು ರೆಡ್ ಶೇಡ್ ಡ್ರೆಸ್‌ಗಳ ಬಳಕೆಯಾಗುವುದು ಫೆಬ್ರವರಿಯಲ್ಲಿ, ಹಾಗಾಗಿ ಇದನ್ನು ವ್ಯಾಲೆಂಟೈನ್ಸ್ ವೀಕ್ ಕಲರ್ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.

3/5

ಟ್ರೆಂಡಿಯಾಗಿರುವ ರೆಡ್ ಶೇಡ್ ಡಿಸೈನರ್‌ವೇರ್ಸ್

ಲೈಟ್, ಡಾರ್ಕ್, ವೈನ್ ರೆಡ್, ಬ್ಲಡ್ ರೆಡ್, ಕೋರಲ್, ಡೀಪ್ ರೆಡ್, ಮರ್ಸಲಾ ರೆಡ್, ಮರೂನ್ ಹೀಗೆ ನಾನಾ ಶೇಡ್‌ಗಳಲ್ಲಿ ಈ ರೆಡ್ ವರ್ಣದ ಫ್ಯಾಷನ್‌ವೇರ್ಸ್‌ಗಳು ಬಿಡುಗಡೆಗೊಂಡಿವೆ. ಜಾನ್ ಪ್ರಕಾರ, ಈ ಸೀಸನ್‌ನಲ್ಲಿ ಟೀನೇಜ್ ಹುಡುಗಿಯರಿಗೆ ನಯಾ ವಿನ್ಯಾಸದ ರೆಡ್ ಫ್ರಾಕ್ಸ್, ಮಿನಿ-ಶಾರ್ಟ್ಸ್, ಡಂಗ್ರೀಸ್, ಜಂಪ್ಸೂಟ್ಸ್, ಕ್ರಾಪ್ ಟಾಪ್ ಕೋ ಆರ್ಡ್ ಸೆಟ್ಸ್, ನಿಟ್ಟೆಡ್ ಕೋ ಆರ್ಡ್ ಸೆಟ್‌ಗಳು ಬಿಡುಗಡೆಗೊಂಡಿದ್ದರೆ, ಉದ್ಯೋಗಸ್ಥ ಯುವತಿಯರಿಗೆಂದೇ ಕೋ ಆರ್ಡ್ ಸಲ್ವಾರ್-ಕಮೀಝ್, ಗೌನ್, ಮ್ಯಾಕ್ಸಿ ಡ್ರೆಸ್‌ಗಳು ಆಗಮಿಸಿವೆ ಎನ್ನುತ್ತಾರೆ.

4/5

ರೆಡ್ ಫ್ಯಾಷನ್‌ವೇರ್ಸ್ ಪ್ರೇಮ

ರೆಡ್ ಡ್ರೆಸ್‌ಗಳನ್ನು ಕೇವಲ ಪ್ರೀತಿಸುವವರು ಮಾತ್ರ ಲವ್ ಮಾಡುತ್ತಾರೆಂದಲ್ಲ! ಬದಲಿಗೆ ಸಾಕಷ್ಟು ಮಂದಿ ಇಷ್ಟಪಟ್ಟು ರೆಡ್ ಕಲರ್ ಉಡುಗೆ ಧರಿಸುವವರಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.

5/5

ರೆಡ್ ಶೇಡ್ ಡ್ರೆಸ್ ಧರಿಸುವವರಿಗೆ ಇಲ್ಲಿವೆ ಟಿಪ್ಸ್

  • ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ರೆಡ್ ಡ್ರೆಸ್‌ಗಳ ಆಯ್ಕೆ ಮಾಡಿ.
  • ಮುಖಕ್ಕೆ ಎದ್ದು ರಾಚುವ ರೆಡ್ ಕಲರ್ ಬೇಡ!
  • ಸಾದಾ ರೆಡ್ ಶೇಡ್ ಡ್ರೆಸ್ ಹಾಗೂ ಪ್ರಿಂಟೆಡ್ ರೆಡ್ ಡ್ರೆಸ್ ಈ ಎರಡೂ ವಿಭಿನ್ನ ಲುಕ್ ನೀಡುತ್ತವೆ.
  • ಆಯಾ ಸಂದರ್ಭಕ್ಕೆ ಹಾಗೂ ವಾತಾವರಣಕ್ಕೆ ಹಾಗೂ ಪಾರ್ಟಿಗೆ ಹೊಂದುವಂತಹ ರೆಡ್ ಡ್ರೆಸ್‌ಗಳನ್ನು ಚೂಸ್ ಮಾಡಿ.
  • ರೆಡ್ ಡ್ರೆಸ್ ಧರಿಸಿದಾಗ ಮೇಕೋವರ್ ನೋಡಲು ಚೆನ್ನಾಗಿರಲಿ.
  • ರೆಡ್ ಶೇಡ್ ಔಟ್‌ಫಿಟ್‌ಗೆ ಮೇಕಪ್ ಹಿತಮಿತವಾಗಿರಲಿ.
  • ವೆಸ್ಟರ್ನ್ ಲುಕ್ ನೀಡುವುದಾದಲ್ಲಿಆದಷ್ಟು ಫಂಕಿ ಜ್ಯುವೆಲರಿಗೆ ಪ್ರಾಮುಖ್ಯತೆ ನೀಡಿ.

ಶೀಲಾ ಸಿ ಶೆಟ್ಟಿ

View all posts by this author