Valentine’s Fashion 2026: ಪ್ರೇಮಿಗಳ ದಿನದಂದು ಮನಸ್ಥಿತಿ ಸೂಚಿಸುವ ಕಲರ್‌ಗಳಿವು!
ಪ್ರೇಮಿಗಳ ದಿನಾಚರಣೆಯಂದು ಧರಿಸುವ ಔಟ್‌ಫಿಟ್‌ನ ಬಣ್ಣಗಳು ಆಯಾ ವ್ಯಕ್ತಿಯ ಮನಸ್ಥಿತಿಯನ್ನು ವಿವರಿಸುತ್ತವಂತೆ. ಈ ದಿನ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಅದರಲ್ಲೂ ಸಿಂಗಲ್ ಆಗಿರುವವರು ಈ ಡ್ರೆಸ್‌ಕೋಡ್ ರೂಲ್ಸ್ ಫಾಲೋ ಮಾಡುವುದು ಬೆಸ್ಟ್ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹಾಗಾದಲ್ಲಿ ಯಾವ್ಯಾವ ವರ್ಣಗಳು ಏನೆಲ್ಲಾ ಸೂಚಿಸುತ್ತವೆ? ಇಲ್ಲಿದೆ ವಿವರ.
ಪ್ರೇಮಿಗಳ ದಿನಾಚರಣೆಯಂದು ಧರಿಸುವ ಉಡುಪುಗಳ ಬಣ್ಣಗಳು ಆಯಾ ವ್ಯಕ್ತಿಯ ಅಂದಿನ ಮನಸ್ಥಿತಿಯನ್ನು ಎತ್ತಿ ಹಿಡಿಯುತ್ತವೆ ಹಾಗೆನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾಗಿ ಅಂದು ಧರಿಸುವ ಬಣ್ಣಗಳ ಬಗ್ಗೆ ತಿಳಿದಿರಲಿ ಎನ್ನುತ್ತಾರೆ.
ಒಂದೊಂದು ಬಣ್ಣಗಳಿಗೂ ಒಂದೊಂದು ಅರ್ಥ
ಹೌದು, ಪ್ರೇಮಿಗಳ ದಿನದಂದು ಬಣ್ಣ ಆಯ್ಕೆ ಮಾಡುವಾಗ ಜಾಗ್ರತೆ! ಯಾಕೆಂದರೆ, ಈ ದಿನ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಅದರಲ್ಲೂ ಸಿಂಗಲ್ ಆಗಿರುವವರು ಈ ಡ್ರೆಸ್‌ಕೋಡ್ ರೂಲ್ಸ್ ಫಾಲೋ ಮಾಡುವುದು ಬೆಸ್ಟ್ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಎಂಗೇಜ್ ಆಗಿರುವುದನ್ನು ಸೂಚಿಸುವ ರೆಡ್ ಕಲರ್
ನಾನು ಈಗಾಗಲೇ ಎಂಗೇಜ್ ಆಗಿದ್ದೇನೆ, ಡಿಸ್ಟರ್ಬ್ ಮಾಡಬೇಡಿ ಎಂಬುದನ್ನು ರೆಡ್ ಕಲರ್‌ನ ಔಟ್‌ಫಿಟ್‌ಗಳು ಸೂಚಿಸುತ್ತವಂತೆ.
ಲವ್ ಪ್ರಪೋಸಲ್ ಸ್ವೀಕರಿಸಿದ್ದೇನೆ ಎನ್ನುವ ಪಿಂಕ್ ಬಣ್ಣ
ಸದ್ಯ ಈಗಷ್ಟೇ ಪ್ರೀತಿಯನ್ನು ಒಪ್ಪಿಕೊಂಡಿದ್ದೇನೆ ಎಂಬುದನ್ನು ಗುಲಾಬಿ ಅಥವಾ ಪಿಂಕ್ ಬಣ್ಣದ ಔಟ್‌ಫಿಟ್‌ಗಳು ಸೂಚಿಸುತ್ತವಂತೆ.
ನಾನು ರೆಡಿ ಎಂದು ತೋರ್ಪಡಿಸುವ ಬ್ಲ್ಯೂ ಕಲರ್
ನಾನು ನಿಮ್ಮ ಪ್ರಪೋಸಲ್‌ಗೆ ಸಿದ್ಧಳಿದ್ದೇನೆ/ಸಿದ್ಧನಿದ್ದೇನೆ ಎಂಬುದನ್ನು ನೀಲಿಯ ನಾನಾ ಶೇಡ್‌ಗಳು ಅರ್ಥವನ್ನು ಕಲ್ಪಿಸುತ್ತವಂತೆ.
ಎದುರಿರುವವರಿಗೆ ಗ್ರೀನ್ ಸಿಗ್ನಲ್ ನೀಡುವ ಹಸಿರು ಬಣ್ಣ
ಪ್ರಪೋಸ್ ಮಾಡಬೇಕೆಂದುಕೊಂಡಿರುವ ಹುಡುಗ-ಹುಡುಗಿಯರಿಗೆ ಹಸಿರು ಬಣ್ಣದ ಔಟ್‌ಫಿಟ್‌ಗಳು ಗ್ರೀನ್ ಸಿಗ್ನಲ್ ನೀಡುತ್ತವಂತೆ.
ಆರೆಂಜ್ ಔಟ್‌ಫಿಟ್ಸ್ ಒಳಾರ್ಥ
ಪ್ರಪೋಸ್ ಮಾಡಲು ನೀವು ಹೋಗುತ್ತಿದ್ದೀರಾ! ಎಂಬುದನ್ನು ಆರೆಂಜ್ ವರ್ಣದ ಔಟ್‌ಫಿಟ್‌ಗಳು ಸೂಚಿಸುತ್ತವಂತೆ.
ನನಗೆ ಆಸಕ್ತಿಯಿಲ್ಲ ಎನ್ನುವ ಬೂದು ಬಣ್ಣ
ನನಗಂತೂ ಸದ್ಯ ಪ್ರೀತಿಯಲ್ಲಿ ಆಸಕ್ತಿಯಿಲ್ಲ ಎಂಬುದನ್ನು ನೇರವಾಗಿ ತಿಳಿಸುವ ಬಣ್ಣ ಬೂದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಒಟ್ಟಿನಲ್ಲಿ, ಪ್ರೇಮಿಗಳ ದಿನದಂದು ಒಂದೊಂದು ಬಣ್ಣಗಳು ಒಂದೊಂದು ಬಗೆಯ ಅರ್ಥ ನೀಡುತ್ತವೆ. ಮೌನವಾಗಿಯೇ ಮಾತನಾಡುತ್ತವೆ. ಹಾಗಾಗಿ ಪ್ರೇಮಿಗಳ ದಿನಾಚರಣೆಯಂದು ಸಿಂಗಲ್ ಆಗಿರುವವರು, ಪ್ರೇಮಿಗಳು ಉಡುಪು ಧರಿಸುವ ಮುನ್ನ, ಔಟ್‌ಫಿಟ್‌ನ ಬಣ್ಣವನ್ನು ಗಮನದಲ್ಲಿಟ್ಟುಕೊಂಡು ಔಟ್‌ಫಿಟ್ ಧರಿಸುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.