Valentines Fashion 2026: ಇದು ಜೆನ್ ಜಿ ವ್ಯಾಲೆಂಟೈನ್ಸ್ ಡೇ ಫ್ಯಾಷನ್ ಮಂತ್ರ
ಈ ಸಾಲಿನ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್‌ನಲ್ಲಿ ಜೆನ್ ಜಿ ಫ್ಯಾಷನ್ ಟ್ರೆಂಡಿಯಾಗಿದೆ. ಈ ಕೆಟಗರಿಯಲ್ಲಿ ಯಾವ್ಯಾವ ಬಗೆಯ ಫ್ಯಾಷನ್‌ವೇರ್ಸ್ ಎಂಟ್ರಿ ನೀಡಿದೆ? ಎಂಬುದರ ಬಗ್ಗೆ ಜೆನ್ ಜಿ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್‌ಗೆ ಸಾಥ್ ನೀಡುವ ಜೆನ್ ಜಿ ಫ್ಯಾಷನ್ ಸದ್ಯ ಟ್ರೆಂಡ್‌ನಲ್ಲಿದೆ.
ವ್ಯಾಲೆಂಟೈನ್ಸ್ ಡೇಯಂದು ಸಂಭ್ರಮಿಸುವವರಿಗೆಂದೇ ನಾನಾ ಬಗೆಯ ಫ್ಯಾಷನ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿದ್ದು, ಅವುಗಳಲ್ಲಿ ಜೆನ್ ಜಿ ಫ್ಯಾಷನ್ ಸೂಪರ್ ಹಿಟ್ ಲಿಸ್ಟ್‌ನಲ್ಲಿದೆ. ಜತೆಗೆ ಎಲ್ಲಾ ವಯಸ್ಸಿನವರನ್ನು ಆಕರ್ಷಿಸಿದೆ.
ಕೊರಿಯನ್ ಫ್ಯಾಷನ್‌ವೇರ್ಸ್
ಕೊರಿಯನ್ ಫ್ಯಾಷನ್‌ವೇರ್ಸ್ ಈ ವ್ಯಾಲೆಂಟೈನ್ಸ್ ವೀಕ್‌ನ ಜೆನ್ ಜಿ ಫ್ಯಾಷನ್‌ನ ಟಾಪ್ ಕೆಟಗರಿಗೆ ಸೇರಿದೆ. ನೋಡಲು ಯಂಗ್ ಲುಕ್ ನೀಡುವಂತಹ ಲೇಯರ್ ಲುಕ್ ನೀಡುವಂತಹ ವೈವಿಧ್ಯಮಯ ಫ್ಯಾಷನ್‌ವೇರ್‌ಗಳು ಈ ಕೆಟಗರಿಯಲ್ಲಿವೆ. ಹುಡುಗಿಯರ ಮಿನಿಸ್ಕರ್ಟ್, ಕಲರ್‌ಫುಲ್ ಸ್ಟಾಕಿಂಗ್ಸ್, ಕ್ರಾಪ್ ಟಾಪ್-ಶಾರ್ಟ್ಸ್, ಫ್ರಾಕ್ಸ್, ಜಾಕೆಟ್‌ಗಳು, ಹುಡುಗರ ಪ್ರಿಂಟ್ಸ್ ಶರ್ಟ್ಸ್, ಪ್ರಿಂಟ್ಸ್ ಜಾಕೆಟ್‌ಗಳು ಇವುಗಳಲ್ಲಿ ಸೇರಿವೆ.
ಫ್ಯಾಷನಬಲ್ ಲೇಯರ್ ಫ್ಯಾಷನ್‌ವೇರ್ಸ್
ಕೊಂಚ ಡಿಸೆಂಟಾಗಿ ಕಾಣಿಸಬೇಕು, ಜತೆಗೆ ಫ್ಯಾಷನೆಬಲ್ ಆಗಿಯೂ ಕಾಣಿಸಬೇಕು ಎನ್ನುವವರಿಗೆ ಲೇಯರ್ ಲುಕ್ ನೀಡುವಂತಹ ಸಾಕಷ್ಟು ಫ್ಯಾಷನ್‌ವೇರ್ಸ್ ಬಂದಿವೆ. ಅವುಗಳಲ್ಲಿ ವೈವಿಧ್ಯಮಯ ಜಾಕೆಟ್ - ಕೋಟ್ ಡ್ರೆಸ್‌ಗಳು ಹಾಗೂ ಡಬ್ಬಲ್-ತ್ರಿಬಲ್ ಪೀಸ್ ಯೂನಿಸೆಕ್ಸ್ ಫ್ಯಾಷನ್‌ವೇರ್‌ಗಳು ಚಾಲ್ತಿಯಲ್ಲಿವೆ.
ಥ್ರಿಫ್ಟ್ ಫ್ಯಾಷನ್‌ವೇರ್ಸ್
ಅಚ್ಚರಿ ಎಂದರೇ, ಜೆನ್ ಜಿ ಹುಡುಗ-ಹುಡುಗಿಯರು ಈ ಸೀಸನ್‌ನಲ್ಲಿ ಥ್ರಿಫ್ಟ್ ಅಂದರೆ, ಸೆಕೆಂಡ್ ಹ್ಯಾಂಡ್ ಫ್ಯಾಷನ್‌ವೇರ್‌ಗಳ ಖರೀದಿ ಮಾಡುತ್ತಿದ್ದಾರೆ. ಬೆಲೆ ಮಾತ್ರ ಕಡಿಮೆಯಲ್ಲ, ಪುನರ್‌ಬಳಕೆ ನಮ್ಮ ಮಂತ್ರ ಎಂದು ಸಾರುತ್ತಿದ್ದಾರೆ. ಪಾಪುಲರ್ ಶಾಪಿಂಗ್ ಸೇಲ್‌ಗಳಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಈ ಕಾನ್ಸೆಪ್ಟ್‌ನಲ್ಲಿ ಲಭ್ಯವಿರುವಂತವನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸುವುದು ಫ್ಯಾಷನ್ ಆಗೋಗಿದೆ ಎನ್ನುತ್ತಾರೆ ಜೆನ್ ಜಿ ಸ್ಟೈಲಿಸ್ಟ್ ರಾಕಿ.