ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Valentines Week 2026: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾಗಿರುವ 3 ಟೆಡ್ಡಿಬೇರ್ಸ್!

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ನಾನಾ ಬಗೆಯ ಅತ್ಯಾಕರ್ಷಕ ಟೆಡ್ಡಿಬೇರ್ಸ್ ಆಗಮಿಸಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಟ್ರೆಂಡಿಯಾಗಿವೆ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟೆಡ್ಡಿಬೇರ್ ಡೇ ಕೂಡ ಒಂದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಾನಾ ಬಗೆಯ ಟೆಡ್ಡಿಬೇರ್‌ಗಳು ಎಂಟ್ರಿ ನೀಡುತ್ತವೆ. ಅದರಂತೆ ಈ ಬಾರಿಯೂ ಅತ್ಯಾಕರ್ಷಕವಾದ ಸಾಕಷ್ಟು ಟೆಡ್ಡಿಬೇರ್‌ಗಳು ಪ್ರೇಮಿಗಳನ್ನು ಸೆಳೆದಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಟೆಡ್ಡಿಬೇರ್ಸ್ (ಚಿತ್ರಕೃಪೆ: ಪಿಕ್ಸೆಲ್)
1/5

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಕ್ಯೂಟ್ ಟೆಡ್ಡಿಬೇರ್‌ಗಳು ಮಾರುಕಟ್ಟೆಗೆ ಆಗಮಿಸಿದ್ದು, ಅವುಗಳಲ್ಲಿ 3 ಬಗೆಯವು ಟ್ರೆಂಡಿಯಾಗಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ. ಹೌದು, ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟೆಡ್ಡಿಬೇರ್ ಡೇ ಕೂಡ ಒಂದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಾನಾ ಬಗೆಯ ಟೆಡ್ಡಿಬೇರ್‌ಗಳು ಎಂಟ್ರಿ ನೀಡುತ್ತವೆ. ಅದರಂತೆ ಈ ಬಾರಿಯೂ ಅತ್ಯಾಕರ್ಷಕವಾದ ಸಾಕಷ್ಟು ಟೆಡ್ಡಿಬೇರ್‌ಗಳು ಪ್ರೇಮಿಗಳನ್ನು ಸೆಳೆದಿವೆ.

2/5

ಕ್ಯೂಟ್ ಪುಟಾಣಿ ಟೆಡ್ಡಿಬೇರ್ಸ್

ಕೈಗಳಲ್ಲಿ ಹಿಡಿಯಬಹುದಾದಂತಹ ಟೈನಿ ಹಾಗೂ ಪುಟಾಣಿ ಟೆಡ್ಡಿಬೇರ್‌ಗಳು ಈ ಬಾರಿ ಅತಿ ಹೆಚ್ಚು ಪ್ರೇಮಿಗಳನ್ನು ಸೆಳೆದಿವೆ. ಅವುಗಳಲ್ಲಿ ಕೈಚೈನ್ ಕ್ಯೂಟ್ ಟೆಡ್ಡಿಬೇರ್‌ಗಳೂ, ಕಾಲೇಜ್ ಬ್ಯಾಗ್‌ಗೆ ಹಾಕಬಹುದಾದಂತಹ ಟೆಡ್ಡಿಬೇರ್‌ಗಳು ಹಾಗೂ ವೆಹಿಕಲ್‌ಗಳಲ್ಲಿ ಶೋಪೀಸ್‌ನಂತೆ ಇರಿಸಬಹುದಾದಂತಹ ಟೆಡ್ಡಿಬೇರ್‌ಗಳು ಬಂದಿವೆ. ಹುಡುಗಿಯರ ಮನಸೆಳೆದಿವೆ ಎನ್ನುತ್ತಾರೆ ಆರ್ಚೀಸ್ ಶಾಪ್ನ ಮ್ಯಾನೇಜರ್ ರಾಘವ್.

3/5

ಅಪ್ಪಿಕೊಳ್ಳುವ ಬಿಗ್ ಟೆಡ್ಡಿಬೇರ್ಸ್

ಹುಡುಗಿಯರು ಪ್ರೇಮಿಯನ್ನು ನೆನಪಿಸಿಕೊಂಡಾಗ ಅಪ್ಪಿಕೊಳ್ಳಬಹುದಾದಂತಹ ಬಿಗ್ ಟೆಡ್ಡಿಬೇರ್ಸ್‌ಗಳು ಬಗೆಬಗೆಯ ಕಲರ್‌ಗಳಲ್ಲಿ ಎಂಟ್ರಿ ನೀಡಿವೆ. ವೈಬ್ರೆಂಟ್ ಕಲರ್ಸ್‌ನಿಂದಿಡಿದು ತಿಳಿ ಗುಲಾಬಿ, ಪಾಸ್ಟೆಲ್ ಶೇಡ್‌ನವು, ಕ್ರೀಮ್, ಲೈಟ್ ಬ್ರೌನ್ ಟೆಡ್ಡಿಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಶಾಪ್‌ವೊಂದರ ಮಾಲೀಕರು.

4/5

ಕಸ್ಟಮೈಸ್ಡ್ ಟೆಡ್ಡಿಬೇರ್ಸ್

ಆಯಾ ಪ್ರೇಮಿಗೆ ಇಷ್ಟವಾಗುವಂತಹ ಕಸ್ಟಮೈಸ್ಡ್ ಟೆಡ್ಡಿಬೇರ್‌ಗಳು ಕೂಡ ಇಂದು ಪ್ರಚಲಿತದಲ್ಲಿವೆ. ಇವುಗಳಲ್ಲಿ ಕೆಲವರು ಪ್ರೀತಿಯ ಸಂದೇಶ ಅಥವಾ ಫೋಟೋ ಇಲ್ಲವೇ ತಮಗೆ ಬೇಕಾದಂತೆ ಡಿಸೈನ್ ಮಾಡಿಸಿ ನೀಡುವುದು ಕಾಮನ್ ಆಗಿದೆ.

5/5

ಟೆಡ್ಡಿಬೇರ್ಸ್ ಪ್ರಿಯರಿಗೆ ಗೊತ್ತಿರಲಿ

  • ನಿರ್ವಹಣೆ ಬಗ್ಗೆ ತಿಳಿದುಕೊಂಡಿರಿ.
  • ಧೂಳು ಕೂರದಂತೆ ಕಾಪಾಡಿಕೊಳ್ಳಿ.
  • ಕಸ್ಟಮೈಸ್ಡ್ ಟೆಡ್ಡಿ ಪ್ಲ್ಯಾನ್ ಮಾಡಿ ಮಾಡಿಸಿ.

ಶೀಲಾ ಸಿ ಶೆಟ್ಟಿ

View all posts by this author