Valentines Week 2026: ರೋಸ್ ಡೇ ಕೊಡುಗೆಗೆ ಇಲ್ಲಿದೆ 5 ಸೂಪರ್ ಐಡಿಯಾ
Rose Day Gifts: ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನವೇ ರೋಸ್ ಡೇ. ಈ ದಿನದಂದು ಗುಲಾಬಿಯನ್ನು ಡಿಫರೆಂಟಾಗಿ ಯಾವ್ಯಾವ ಬಗೆಯಲ್ಲಿ ಪ್ರೇಮಿ-ಸಂಗಾತಿಗೆ ಕೊಡುಗೆಯಾಗಿ ನೀಡಬಹುದು? ಎಂಬುದರ ಬಗ್ಗೆ ಒಂದಿಷ್ಟು ಐಡಿಯಾ ಇಲ್ಲಿವೆ.
ರೋಸ್ ಗಿಫ್ಟಿಂಗ್ ಐಡಿಯಾ
ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನವೇ (ಫೆಬ್ರವರಿ 7) ರೋಸ್ ಡೇ. ಈ ದಿನ ನೀವು ನಿಮ್ಮ ಪ್ರೇಮಿ ಅಥವಾ ಸಂಗಾತಿಗೆ ರೋಸ್ ನೀಡಲು ಯೋಚಿಸುತ್ತಿದ್ದೀರಾ! ಅದೇ ಹಳೆ ಸ್ಟೈಲ್‌ನ ಕೆಂಪು ಗುಲಾಬಿ ನೀಡುವ ಬದಲು ಈ ಬಾರಿ ಕೊಂಚ ಡಿಫರೆಂಟಾಗಿ ರೋಸ್ ನೀಡಬೇಕೆಂದು ಬಯಸುತ್ತಿದ್ದೀರಾ? ಹಾಗಾದಲ್ಲಿ, ಈ ರೋಸ್ ಗಿಫ್ಟಿಂಗ್ ಐಡಿಯಾಗಳನ್ನು ಟ್ರೈ ಮಾಡಿ.
ಹಾರ್ಟ್ ಆಕಾರದ ರೋಸ್ ಬೋಕೆ
ನೋಡಲು ಹೃದಯಾಕಾರದಲ್ಲಿರುವ ಈ ಗುಲಾಬಿಯ ಬಂಚ್ ಹೊಂದಿರುವ ಬೋಕೆ ಎಂತಹವರನ್ನು ಸಮ್ಮೋಹನಗೊಳಿಸುತ್ತದೆ. ಕೆಂಪು ಬಣ್ಣದನ್ನು ಹೊರತುಪಡಿಸಿ ಇತರ ಯಾವುದೇ ಬಣ್ಣದವನ್ನು ಇಲ್ಲವೇ ಮಿಕ್ಸ್ ಮ್ಯಾಚ್ ಮಾಡಿರುವಂತಹ ಬೋಕೆ ನೀಡಬಹುದು. ಮಾರುಕಟ್ಟೆಯಲ್ಲಿ ನಾನಾ ಬಗೆಯಲ್ಲಿ ಇಂತವು ಲಭ್ಯ.
ಪರಿಮಳ ಸೂಸುವ ರೋಸ್ ಕ್ಯಾಂಡಲ್ಸ್, ಎಲ್‌ಇಡಿ ಲೈಟ್ ರೋಸ್
ಪರಿಮಳ ಸೂಸುವ ವೈವಿಧ್ಯಮಯ ರೋಸ್ ಕ್ಯಾಂಡಲ್ಸ್ ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ. ಇವನ್ನು ವೀಕೆಂಡ್‌ನ ಕ್ಯಾಂಡಲ್ ಲೈಟ್ ಡಿನ್ನರ್‌ನಲ್ಲಿ ಹಚ್ಚಿ, ನಿಮ್ಮ ಪ್ರೇಮಿಯನ್ನು ಸಂತುಷ್ಟಗೊಳಿಸಬಹುದು. ಈ ಬಗೆಯ ಗಿಫ್ಟ್ ಎಂದಿಗೂ ಹಾಳಾಗದು. ಮನೆಯ ಶೋಕೇಸ್‌ನಲ್ಲಿ ನೆನಪಾಗಿ ಇರಿಸಬಹುದು. ಕೃತಕ ರೋಸ್ ಜತೆಗೆ ರೈನ್‌ಬೋ ಕಲರ್‌ನ ಅತಿ ಚಿಕ್ಕದಾದ ಎಲ್‌ಇಡಿ ಲೈಟ್‌ನಿಂದ ಅಲಂಕೃತಗೊಂಡ, ಗ್ಲಾಸ್ ಶೋ ಪೀಸ್ ಒಂದು ಉತ್ತಮ ಗಿಫ್ಟ್ ಎನ್ನಬಹುದು.
ಬಣ್ಣ ಬಣ್ಣದ ರೋಸ್ ಟೆಡ್ಡಿ
ಕೃತಕ ರೋಸ್‌ಗಳಿಂದಲೇ ಸಿದ್ಧಪಡಿಸಲಾದ ರೋಸ್ ಟೆಡ್ಡಿಗಳು ನಾನಾ ಕಲರ್‌ನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ. ಇವು ನೋಡಲು ಕ್ಯೂಟ್ ಆಗಿ ಕಾಣಿಸುತ್ತವೆ. ಜತೆಗೆ ಲೈಫ್ ಲಾಂಗ್ ಜತೆಯಲ್ಲಿರಿಕೊಳ್ಳಬಹುದು.
ರೋಸ್ ಚಾಕೋಲೇಟ್ಸ್ ಬೋಕೆ
ನಿಮ್ಮ ಪ್ರೇಮಿ ಅಥವಾ ಸಂಗಾತಿ ಚಾಕೋಲೇಟ್ ಪ್ರೇಮಿಯಾಗಿದ್ದಲ್ಲಿ ಕಸ್ಟಮೈಸ್ಡ್ ಗುಲಾಬಿ ಮತ್ತು ಚಾಕೋಲೇಟ್ ಮಿಕ್ಸ್ ಮ್ಯಾಚ್ ಮಾಡಿ ತಯಾರಿಸಲಾದ ಬೋಕೆಯನ್ನು ಕೊಡುಗೆಯಾಗಿ ನೀಡಬಹುದು.