Valentines Week 2026: ಚಾಕೋಲೇಟ್ ಡೇಯಂದು ಗಿಫ್ಟ್ ನೀಡಲು ಇಲ್ಲಿದೆ ಐಡಿಯಾ
ಪ್ರೇಮಿಗಳ ದಿನ ಬಂದೇ ಬಿಟ್ಟಿತು. ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬರುವ ಚಾಕೋಲೇಟ್ ಡೇಯಂದು ನೀವು ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಬೇಕೇ! ಹಾಗಾದಲ್ಲಿ ಈ ಸೀಸನ್‌ನಲ್ಲಿ ಯಾವ್ಯಾವ ಬಗೆಯವು ಎಂಟ್ರಿ ನೀಡಿವೆ? ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಿ.
ಫೆಬ್ರವರಿ 9 ಚಾಕೋಲೇಟ್ ಡೇ
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೇಟ್ ಡೇ ಕೂಡ ಒಂದು. ಪ್ರತಿ ಬಾರಿ ನಿಮಗೂ ಒಂದೇ ಬಗೆಯ ಚಾಕೋಲೇಟ್ ಕೊಟ್ಟು ಬೋರಾಗಿದೆಯೇ? ಹಾಗಾದಲ್ಲಿ ಈ ಪ್ರೇಮಿಗಳ ವಾರದಲ್ಲಿ ಟ್ರೆಂಡಿಯಾಗಿರುವ ಚಾಕೋಲೇಟ್ಸ್ ಹಾಗೂ ಚಾಕೋಲೇಟ್ ಗಿಫ್ಟ್ ಬಾಕ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಪ್ರೀತಿ ಪಾತ್ರರಿಗೆ ಕೊಡುಗೆಯಾಗಿ ನೀಡಿ ಅವರ ಮನ ಗೆಲ್ಲಿ ಎನ್ನುತ್ತಾರೆ ಲವ್ ಕೋಚ್‌ಗಳು. ಈ ಪ್ರೇಮಿಗಳ ವಾರದಲ್ಲಿ ಸದ್ಯ ಟ್ರೆಂಡಿಯಾಗಿರುವ ಒಂದಿಷ್ಟು ಪಾಪುಲರ್ ಚಾಕೋಲೇಟ್ ಗಿಫ್ಟ್‌ಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.
ಎಡಿಬಲ್ ಫೋಟೋ ಚಾಕೋಲೇಟ್ಸ್
ಕಸ್ಟಮೈಸ್ಡ್ ಎಡಿಬಲ್ ಫೋಟೋ ಚಾಕೋಲೇಟ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಪ್ರೀತಿ ಪಾತ್ರರ ಫೋಟೋ ಅಂಟಿಸಿರುವಂತಹ ಎಡಿಬಲ್ ಚಾಕೋಲೇಟ್‌ಗಳು ಪ್ರಿ ಆರ್ಡರ್ ಮೇರೆಗೆ ದೊರೆಯುತ್ತಿವೆ.
ಚಾಕೋಲೇಟ್ ಬೋಕೆಗಳು
ಹೂವಿನ ಬೋಕೆಯಂತೆಯೇ ಇದೀಗ ನಾನಾ ಸೈಝ್‌ನಲ್ಲಿ ಚಾಕೋಲೇಟ್ ಬೋಕೆಗಳು ಕೂಡ ಲಭ್ಯ. ಚಾಕೋಲೇಟ್ ಪ್ರಿಯರಿಗೆಂದೇ ಲೆಕ್ಕವಿಲ್ಲದಷ್ಟು ಬಗೆಯ ವಿವಿಧ ಬೋಕೆಗಳು ದೊರೆಯುತ್ತಿವೆ. ಇವು ಹೂವಿನಂತೆಯೇ ಘಮಘಮ ಎನ್ನುತ್ತವೆ.
ಪ್ರಪೋಸಲ್ ಥೀಮ್ ಚಾಕೋಲೇಟ್ಸ್
ಚಾಕೋಲೇಟ್ ಮೇಲೆ ಲವ್ ಯು ಹಾಗೂ ವಿಲ್ ಯು ಮ್ಯಾರಿ ಮೀ ಸೇರಿದಂತೆ ಪ್ರೀತಿಯ ಕುರಿತಂತೆ ಬರೆದಂತಹ ನಾನಾ ಮೇಸೆಜ್‌ಗಳನ್ನೊಳಗೊಂಡ ಪ್ರಪೋಸಲ್ ಥೀಮ್ ಚಾಕೋಲೇಟ್‌ಗಳು ಕೂಡ ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಕಸ್ಟಮೈಸ್ಡ್ ಡಿಸೈನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ಹೃದಯಾಕಾರದ ಚಾಕೋಲೇಟ್‌ಗಳು
ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಹೃದಯಾಕಾರದ ಚಾಕೋಲೇಟ್‌ಗಳು ನಾನಾ ವೆರೈಟಿ ಡಿಸೈನರ್ ಗಿಫ್ಟ್ ಬಾಕ್ಸ್‌ಗಳಲ್ಲಿ ಲಭ್ಯ. ರೊಮ್ಯಾಂಟಿಕ್ ಸಂದೇಶ ಹಾಗೂ ಗ್ರೀಟಿಂಗ್ಸ್ ಒಳಗೊಂಡ ಗಿಫ್ಟ್ ಹ್ಯಾಂಪರ್ಸ್‌ಗಳು, ಚಿಕ್ಕ ಮಿನಿ ಚಾಕೋಲೇಟ್ ಹ್ಯಾಂಪರ್ಸ್ ಸೆಟ್‌ಗಳು ಈ ಕೆಟಗರಿಯಲ್ಲಿ ಪ್ರಚಲಿತದಲ್ಲಿವೆ.