Varamahalaxmi Festival Fashion 2026: ಹಬ್ಬಕ್ಕೆ ಥೇಟ್ ವರಮಹಾಲಕ್ಷ್ಮೀಯಂತೆಯೇ ಕಂಗೊಳಿಸಲು ಇಲ್ಲಿವೆ ಫ್ಯಾಷನ್ ಎಕ್ಸ್‌ಪರ್ಟ್ಸ್ ಟಿಪ್ಸ್
ಶ್ರಾವಣ ಮಾಸದಲ್ಲಿ ಸೌತ್ ಇಂಡಿಯನ್ ಸ್ಟೈಲ್‌ಗೆ ಹೊಂದುವಂತೆ, ಮಾನಿನಿಯರು ಸೌಭಾಗ್ಯ ಲಕ್ಷ್ಮೀಯಂತೆ ಕಂಗೊಳಿಸುವುದು ಕೂಡ ಫೆಸ್ಟೀವ್ ಫ್ಯಾಷನ್ ಥೀಮ್ ಆಗಿದೆ. ಹೀಗಾಗಿ ಟ್ರೆಡಿಷನಲ್ ಡಿಸೈನರ್‌ವೇರ್ ಹಾಗೂ ಸೀರೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಥೇಟ್ ವರಮಹಾಲಕ್ಷ್ಮಿಯಂತೆಯೇ ಕಂಗೊಳಿಸಲು ಫ್ಯಾಷನ್ ಎಕ್ಸ್‌ಪರ್ಟ್ಸ್ ಕೆಲವು ಟಿಪ್ಸ್ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಟ್ರೆಡಿಷನಲ್ ಲುಕ್‌ನಲ್ಲಿ ಹಬ್ಬದಂದು ಥೇಟ್ ದೇವಿ ಅಥವಾ ವರಮಹಾಲಕ್ಷ್ಮೀಯಂತೆಯೇ ಕಾಣಿಸಿಕೊಳ್ಳಿ. ಇದು ಹಬ್ಬದ ಕಳೆ ಹೆಚ್ಚಿಸುವುದು. ಮನೆಯಲ್ಲಿ ಹರ್ಷ ಮೂಡಿಸುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಲಕ್ಷ್ಮೀಯಂತೆ ಕಂಗೊಳಿಸಲು ಹೀಗೆ ಮಾಡಿ
ಹೌದು, ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ! ಈ ಫೆಸ್ಟಿವ್ ಸೀಸನ್‌ನಲ್ಲಿ ಬಿಡುಗಡೆಯಾಗಿರುವ ಮಲ್ಟಿಪಲ್ ಶೇಡ್ಸ್‌ನ ಡಿಸೈನರ್ ರೇಷ್ಮೆ ಸೀರೆಗಳಲ್ಲಿ ಹಾಗೂ ದೇಸಿ ಡಿಸೈನರ್‌ವೇರ್‌ಗಳಲ್ಲಿ ಅದರೊಂದಿಗೆ ಮ್ಯಾಚಿಂಗ್ ಜ್ಯುವೆಲರಿ ಸೆಟ್‌ಗಳಲ್ಲಿ ಕಾಣಿಸಿಕೊಂಡು ಟ್ರೆಡಿಷನಲ್ ಲುಕ್ ಪಡೆಯಿರಿ. ಇದು ನಿಮ್ಮನ್ನು ಲಕ್ಷ್ಮೀಯಂತೆ ಕಂಗೊಳಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಟ್ರೆಡಿಷನಲ್ ಲುಕ್ ನೀಡುವ ಫ್ಯಾಷನ್
ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವ ಡಿಸೈನರ್ ರೇಷ್ಮೇ ಸೀರೆ ಇಲ್ಲವೇ ಎಥ್ನಿಕ್ ಲುಕ್ ನೀಡುವ ವೆರೈಟಿ ವಿನ್ಯಾಸದ ಗಾಗ್ರ, ಇದಕ್ಕೆ ಸೂಕ್ತವೆನಿಸುವ ಮಾನ್ಸೂನ್ ಮೇಕಪ್, ಕಣ್ಣಿಗೆ ಕಾಜಲ್, ಕಲರ್ಡ್ ವಿಂಗ್ ಐ ಲೈನರ್, ಡಿಸೈನರ್ ಡಾರ್ಕ್ ಶೇಡ್ ಬಂಗಾಳಿ ಬಿಂದಿ, ಕಿವಿಗೆ ಟ್ರೆಡಿಷನಲ್ ಜುಮ್ಕಾ ಇಲ್ಲವೇ ಬಿಗ್ ಇಯರಿಂಗ್ಸ್, ಮಲ್ಟಿಪಲ್ ಲೇಯರ್ಡ್ ಆ್ಯಂಟಿಕ್ ಹಾರ, ಬಿಗ್ ನೆಕ್ಲೇಸ್, ಕೈತುಂಬಾ ಕಾಣುವ ಸಿಂಗಲ್ ಬ್ಯಾಂಗಲ್ ಕಂಗನ್ ಸೆಟ್, ಸೊಂಟವನ್ನು ಸುತ್ತಿದ ಕಮರ್ಬಾಂದ್, ಬಾಜೂಬಂದ್ ಧರಿಸಿ. ಈ ಲುಕ್ ನಿಮ್ಮನ್ನು ಥೇಟ್ ಲಕ್ಷ್ಮಿಯಂತೆ ಪ್ರತಿಬಿಂಬಿಸುತ್ತದೆ.
ಹಬ್ಬದ ಸೀಸನ್‌ನ ಫ್ಯಾಷನ್ ಥೀಮ್
ಇನ್ನು, ಶ್ರಾವಣ ಮಾಸದಲ್ಲಿ ಸೌತ್ ಇಂಡಿಯನ್ ಸ್ಟೈಲ್‌ಗೆ ಹೊಂದುವಂತೆ, ಮಾನಿನಿಯರು ಸೌಭಾಗ್ಯ ಲಕ್ಷ್ಮೀಯಂತೆ ಕಂಗೊಳಿಸುವುದು ಕೂಡ ಫೆಸ್ಟೀವ್ ಫ್ಯಾಷನ್ ಥೀಮ್ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ದೇವಿ ಲುಕ್‌ಗೆ ಬಂಗಾರದ ಅಥವಾ ಇಮಿಟೇಷನ್ ಆಭರಣಗಳು
ಟ್ರೆಡಿಷನಲ್ ಲುಕ್‌ಗಾಗಿ ಆದಷ್ಟೂ ಹೆವ್ವಿ ಲೇಯರ್ಡ್ ಜ್ಯುವೆಲರಿಗಳನ್ನು ಧರಿಸಿ. ಕಿವಿಗೆ ಜುಮ್ಕಾ, ಮಾಟಿ, ಮಾಂಗ್ಟೀಕಾ, ಕಮರ್ಬಾಂದ್ ಹೀಗೆ ಎಲ್ಲವನ್ನೂ ಧರಿಸಿ. ಇದು ಪಕ್ಕಾ ಟ್ರೆಡಿಷನಲ್ ಲುಕ್ ನೀಡುತ್ತದೆ.
ಮೇಲಿನ ಎಲ್ಲಾ ಸ್ಟೈಲಿಂಗ್ ಪ್ರತಿ ಸ್ತ್ರೀಯ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಥೇಟ್ ದೇವಿ ಲಕ್ಷ್ಮೀಯಂತೆ ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುವುದರಲ್ಲಿ ಆಶ್ಚರ್ಯವಿಲ್ಲ.