Varamahalaxmi Saree Fashion 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಲಗ್ಗೆ ಇಟ್ಟ ಲೈಟ್‌ವೇಟ್ ರೇಷ್ಮೆ ಸೀರೆಗಳು
ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್ ಲುಕ್‌ನೀಡುವಂತಹ ಲೈಟ್‌ವೇಟ್ ರೇಷ್ಮೆ ಸೀರೆಗಳಾದ ನಾನಾ ವಿನ್ಯಾಸದ ಬುಟ್ಟಾ, ಮೊಟಿಫ್, ಪ್ರಿಂಟೆಡ್, ಚೆಕ್ಸ್, ಟೆಂಪಲ್, ಬೆಂಟೆಕ್ಸ್ ಬಾರ್ಡರ್ ಸೀರೆಗಳು ಸೇರಿದಂತೆ ನಾನಾ ಬಗೆಯ ವಿನ್ಯಾಸದ ಲೈಟ್‌ವೇಟ್ ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಲೈಟ್‌ವೇಟ್ ರೇಷ್ಮೆ ಸೀರೆಗಳ ಹವಾ
ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ನಾನಾ ವಿನ್ಯಾಸದ ಬುಟ್ಟಾ, ಮೊಟಿಫ್, ಪ್ರಿಂಟೆಡ್, ಚೆಕ್ಸ್, ಟೆಂಪಲ್, ಬೆಂಟೆಕ್ಸ್ ಬಾರ್ಡರ್ ಸೀರೆಗಳು ಸೇರಿದಂತೆ ನಾನಾ ಬಗೆಯ ವಿನ್ಯಾಸದ ಲೈಟ್‌ವೇಟ್ ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ.
ವೈವಿಧ್ಯ ಲೈಟ್‌ವೇಟ್ ರೇಷ್ಮೆ ಸೀರೆಗಳು
ಹೌದು, ಉಟ್ಟರೇ ತೂಕವಿಲ್ಲದ ನೋಡಲು ಅತ್ಯಾಕರ್ಷಕವಾಗಿ ಕಾಣುವ ಈ ರೇಷ್ಮೆ ಸೀರೆಗಳು ಎಲ್ಲ ವಯೋಮಾನದ ಮಾನಿನಿಯರನ್ನು ಸೆಳೆದಿವೆ. ಬಗೆಬಗೆಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಅಷ್ಟು ಮಾತ್ರವಲ್ಲ, ಕಾಂಟ್ರಸ್ಟ್ ವರ್ಣದ ಬಾರ್ಡರ್ ರೇಷ್ಮೆ ಸೀರೆಗಳು ಊಹೆಗೂ ಮೀರಿದ ಕಂಟೆಂಪರರಿ ಡಿಸೈನ್‌ಗಳಲ್ಲಿ ಕಲರ್ ಕಾಂಬೀನೇಷನ್‌ಗಳಲ್ಲಿ ಮುಂಬರುವ ಹಬ್ಬದ ಸೀಸನ್‌ನ ರಂಗೇರಿಸಿವೆ.
ಕ್ಲಾಸಿಕ್ ಲುಕ್ ನೀಡುವ ರೇಷ್ಮೆ ಸೀರೆಗಳು
ಇನ್ನು ಕ್ಲಾಸಿಕ್ ಲುಕ್ ನೀಡುವ ಟ್ರೆಂಡಿ ಪ್ಯಾಟರ್ನ್ಸ್ ಹೊಂದಿರುವ ಕಾಂಚೀವರಂ ಸಿಲ್ಸ್ಕ್, ನೇಕಾರರ ಕುಸುರಿ ಕೆಲಸ ಒಳಗೊಂಡಿರುವ ಬಗೆಬಗೆಯ ಹ್ಯಾಂಡ್ ಲೂಮ್ ಸಿಲ್ಕ್ಸ್, ಜಾಮ್ದಾನಿ ಕಲಾತ್ಮಕತೆಯನ್ನು ಒಳಗೊಂಡ ಭಾರವಿಲ್ಲದ ಉಪ್ಪಡಾ ಸಿಲ್ಕ್ಸ್, ಬನಾರಸ್, ಮೈಸೂರ್ ಸಿಲ್ಕ್ ಸೇರಿದಂತೆ ನಾನಾ ಬ್ರಾಂಡ್‌ನವು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ ಹಾಗೂ ಎಲ್ಲೆಡೆ ಬಿಕರಿಯಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಯುವತಿಯರಿಗೆ ಕಂಟೆಂಪರರಿ ಡಿಸೈನ್ಸ್
ಇವುಗಳ ಮಧ್ಯೆ ಜೆನ್ ಝೀ ಯುವತಿಯರಿಗೆಂದೇ ಕಂಟೆಂಪರರಿ ವಿನ್ಯಾಸ ಹೊಂದಿರುವಂತವು, ಹೂವು ಹಣ್ಣು, ಎಲೆ, ಪ್ರಾಣಿ ಪಕ್ಷಿ, ಭಗವದ್ಗೀತೆ ಶ್ಲೋಕ, ಚಿತ್ರ, ವಕ್ರ ಚಕ್ರ, ಅಡ್ಡಾ ದಿಡ್ಡಿ, ನೇರ ಗೆರೆಗಳು, ವಿಚಿತ್ರ ರೇಖಾ ಚಿತ್ರಗಳನ್ನು ಒಳಗೊಂಡ ಲೈಟ್‌ವೇಟ್ ರೇಷ್ಮೆ ಸೀರೆಗಳು ಆಗಮಿಸಿವೆ. ಈ ಶೈಲಿಯ ಲೈಟ್‌ವೇಟ್ ರೇಷ್ಮೆ ಸೀರೆಗಳ ನಿರ್ವಹಣೆ ತೀರಾ ಸುಲಭ. ಆಗಾಗ್ಗೆ ನೆರಳಿನಲ್ಲಿ ಹರಡಿ ಒಣಗಿಸಿ, ಮಡಿಸಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಲ್ಲದೇ, ಸೀರೆ ಇರಿಸುವ ಜಾಗದಲ್ಲಿ ನ್ಯಾಪ್ತಾಲೀನ್ಗುಳಿಗೆಗಳನ್ನು ಇರಿಸುವುದು ಉತ್ತಮ. ಸೀರೆಗಳನ್ನು ಇಸ್ತ್ರೀ ಮಾಡುವಾಗ ಆದಷ್ಟೂ ಕಡಿಮೆ ಉಷ್ಣತೆ ಬಳಸುವುದು ಬೆಸ್ಟ್ ಐಡಿಯಾ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.
ಲೈಟ್‌ವೇಟ್ ರೇಷ್ಮೆ ಸೀರೆ ಖರೀದಿಸುವವರಿಗೆ ಸಲಹೆ
- ಮಿಕ್ಸ್ ಮ್ಯಾಚ್ ಮಾಡಬಹುದಾದ ಬ್ಲೌಸ್ ಅಪ್ಷನ್ಇರುವಂತಹ ಲೈಟ್‌ವೇಟ್ ಸೀರೆ ಖರೀದಿಸಿ.
- ಗುಣ ಮಟ್ಟ ನೋಡಿ ಪರಿಶೀಲಿಸಿ, ಖರೀದಿಸಿ.
- ನಿಮ್ಮ ಸ್ಕಿನ್‌ಟೋನ್‌ಗೆ ಮ್ಯಾಚ್ ಆಗುವಂತ ಕಲರ್‌ನವನ್ನು ಚೂಸ್ ಮಾಡಿ.