SL Bhyrappa: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಗಣ್ಯರಿಂದ ಎಸ್.ಎಲ್. ಭೈರಪ್ಪ ಅಂತಿಮ ದರ್ಶನ
ಕನ್ನಡದ ಆಸ್ಮಿತೆಯಾಗಿದ್ದ, ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಸ್. ಭೈರಪ್ಪ ಸೆಪ್ಟೆಂಬರ್ 24ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 94 ವರ್ಷದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್, ಉದಯ್ ಶಂಕರ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಗೌರವ ಸಲ್ಲಿಸಿದರು. ಈ ವೇಳೆ ಭೇಟಿ ನೀಡಿದ ಕೆಲವು ಗಣ್ಯರ ಫೋಟೊ ಇಲ್ಲಿದೆ.
ಎಸ್.ಎಲ್. ಭೈರಪ್ಪ ಅವರ ಕುಟುಂಬಸ್ಥರೊಂದಿಗೆ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ್ ಭಟ್ ದಂಪತಿ ಮತ್ತು ತೇಜಸ್ವಿನಿ ಅನಂತ್ ಕುಮಾರ್.
ಎಸ್.ಎಸ್. ಭೈರಪ್ಪ ಅವರ ಕುಟುಂಬ.
ಎಸ್.ಎಲ್. ಭೈರಪ್ಪ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಿಎಂ ಸಿದ್ದರಾಮಯ್ಯ. ಸಚಿವ ಎಚ್.ಕೆ. ಪಾಟೀಲ್ ಅವರಿಂದ ಅಂತಿಮ ನಮನ.
ಗೌರವ ಸಲ್ಲಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
ಲೇಖಕಿ ಸಹನಾ ಸಹನಾ ವಿಜಯಕುಮಾರ್.
ಅಂತಿಮ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಹಿರಿಯ ರಾಜಕಾರಣಿಗಳಾದ ಅರವಿಂದ ಲಿಂಬಾವಳಿ ಮತ್ತು ಮುನಿರತ್ನ.
ಸಂಸದ ತೇಜಸ್ವಿ ಸೂರ್ಯ.
ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಹಿರಿಯ ನಟಿ ಉಮಾಶ್ರೀ
ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ಮತ್ತು ರಂಗಕರ್ಮಿ ವಿಜಯಾ.
ಹಿರಿಯ ರಾಜಕಾರಣಿ ವೀರಪ್ಪ ಮೊಯ್ಲಿ, ಹಿರಿಯ ನಟ ಶ್ರೀನಾಥ್ ಮತ್ತು ಚಂದ್ರಶೇಖರ್ ಕಂಬಾರ್.
ಶಿವರಾಜ್ ತಂಗಡಗಿ ಮತ್ತು ಹಂಪ ನಾಗರಾಜಯ್ಯ.
ವೀಕರಪುತ್ರ ಶ್ರೀನಿವಾಸ್ ಮತ್ತು ಛಲವಾದಿ ನಾರಾಯಣಸ್ವಾಮಿ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಪತ್ರಕರ್ತ ಅಜಿತ್ ಹನುಮಕ್ಕನವರ್.
ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್.
ಸಿಟಿ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್.
ವಿಶ್ವವಾಣಿ ಪತ್ರಿಕೆ ಓದುತ್ತಿರುವ ಅಭಿಮಾನಿ.
ಎಸ್.ಎಲ್. ಭೈರಪ್ಪ ಅವರ ಅಂತಿಮ ದರ್ಶನಕ್ಕೆ ನೆರೆದ ಜನಸ್ಥೋಮ.