Photos: ರಶ್ಮಿಕಾ-ವಿಜಯ್ ದೇವರಕೊಂಡ ವೆಡ್ಡಿಂಗ್ ರಿಸೆಪ್ಷನ್; ಹೈದರಾಬಾದ್‌ನಲ್ಲಿ ನಡೆದ ಈ ಕಲರ್‌ಫುಲ್ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು?
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ( Vijay Deverakonda) ದಂಪತಿಯ ವಿವಾಹ ಆರತಕ್ಷತೆ (wedding reception ) ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ತೆಲುಗು ಚಿತ್ರರಂಗದ ತಾರೆಯರಾದ ಚಿರಂಜೀವಿ, ನಾಗಾರ್ಜುನ, ಅಲ್ಲು ಅರ್ಜುನ್, ರಾಮ್ ಚರಣ್, ಶ್ರೀಲೀಲಾ, ಕರಣ್ ಜೋಹರ್, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಈ ಆರತಕ್ಷತೆಗೆ ಆಗಮಿಸಿ, ನವಜೋಡಿಗೆ ಹಾರೈಸಿದ್ದಾರೆ. ಸ್ಯಾಂಡಲ್‌ವುಡ್ ನಟಿಯರಾದ ಆಶಿಕಾ ರಂಗನಾಥ್, ಶ್ರೀಲೀಲಾ, ಅನುಷಾ ರೈ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಈ ಕಲರ್‌ಫುಲ್ ಸಮಾರಂಭದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.
ವಿರೋಶ್ ಜೋಡಿಗೆ ಹಾರೈಸಿದ ರವಿ ತೇಜ
ಆರತಕ್ಷತೆಗೆ ಬಂದ ಕರಣ್ ಜೋಹರ್
ವಿಜಯ್ ದೇವರಕೊಂಡ - ರಶ್ಮಿಕಾಗೆ ಕೃತಿ ಶೆಟ್ಟಿ ಹಾರೈಕೆ
ರಶ್ಮಿಕಾ ಅವರ ಆಪ್ತ ಗೆಳತಿ, ನಟಿ ವರ್ಷಾ ಬೊಳ್ಳಮ್ಮ
ವಿರೋಶ್ ಜೋಡಿಗೆ ಹಾರೈಸಿದ ನಿರ್ಮಾಪಕ ನಾಗವಂಶಿ - ನಿರ್ದೇಶಕ ವೆಂಕಿ ಅಟ್ಲೂರಿ
ವಿಜಯ್ ದೇವರಕೊಂಡ ಅವರ ಆಪ್ತ ಗೆಳೆಯ, ನಟ ಪ್ರಿಯಾದರ್ಶಿ
ಚಿರಂಜೀವಿ ಜೊತೆ ಕ್ಯಾಮೆರಾಗೆ ಪೋಸ್ ನೀಡಿದ ವಿಜು - ರಶ್ಮಿಕಾ ಕುಟುಂಬಗಳು
ರಶ್ಮಿಕಾ ದಂಪತಿಗೆ ಹಾರೈಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ನಾನಿ ದಂಪತಿಯಿಂದ ವಿರೋಶ್ ಜೋಡಿಗೆ ಶುಭ ಹಾರೈಕೆ
ರಾಮ್ ಚರಣ್ ದಂಪತಿಯಿಂದ ವಿರೋಶ್ ಜೋಡಿಗೆ ಪ್ರೀತಿಯ ವಿಶ್
ಸಮಾರಂಭಕ್ಕೆ ಪತ್ನಿ ಜೊತೆಗೆ ಆಗಮಿಸಿದ ಪುಷ್ಪ ಡೈರೆಕ್ಟರ್ ಸುಕುಮಾರ್
ವಿಜಯ್ ದೇವರಕೊಂಡ - ರಶ್ಮಿಕಾಗೆ ಶುಭ ಹಾರೈಸಿದ ಸತ್ಯದೇವ್
ಆರತಕ್ಷತೆಯಲ್ಲಿ ಮಿಂಚಿದ ಕಲ್ಕಿ ಡೈರೆಕ್ಟರ್ ನಾಗ್ ಅಶ್ವಿನ್, ನಿರೂಪಕಿ ಸುಮಾ ಕನಕಾಲ
ಪತ್ನಿ ಮತ್ತು ಮಗ ಜೊತೆಗೆ ಬಂದ ನಿರ್ಮಾಪಕ ದಿಲ್ ರಾಜು
ಪತ್ನಿ ಜೊತೆಗೆ ಸಮಾರಂಭಕ್ಕೆ ಆಗಮಿಸಿದ ನಟ ಶ್ರೀಕಾಂತ್ ಮೆಕಾ
ಆತ್ಮೀಯ ಸ್ನೇಹಿತನಿಗೆ ನವೀನ್ ಪೊಲಿಶೆಟ್ಟಿಯಿಂದ ಹಾರೈಕೆ
ಆರತಕ್ಷತೆಯಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್
ತಾಯಿ ಸ್ವರ್ಣಲತಾ ಜೊತೆಗೆ ಆರತಕ್ಷತೆಗೆ ಬಂದ ನಟಿ ಶ್ರೀಲೀಲಾ
ಕಾಕ್‌ಟೈಲ್ 2 ಚಿತ್ರದಲ್ಲಿ ರಶ್ಮಿಕಾ ಜೊತೆಗೆ ನಟಿಸಿರುವ ಕೃತಿ ಸನೋನ್‌ರಿಂದ ಹಾರೈಕೆ
ಆರತಕ್ಷತೆಯಲ್ಲಿ ಕನ್ನಡ ನಟಿ, ರಶ್ಮಿಕಾ ಸ್ನೇಹಿತೆ ಆಶಿಕಾ ರಂಗನಾಥ್
ತಮಿಳು ನಟ ಕಾರ್ತಿ ಅವರಿಂದ ಶುಭ ಹಾರೈಕೆ
ಪತ್ನಿ ಮಿಹೀಕಾ ಜೊತೆ ಆಗಮಿಸಿದ ನಟ ರಾಣಾ ದಗ್ಗುಬಾಟಿ
ವಿಜಯ್ ದೇವರಕೊಂಡ ಅವರ ಸುಂದರ ಕುಟುಂಬ
ಅಲ್ಲು ಅರ್ಜುನ್ ಅವರಿಂದ ಹೊಸ ಜೋಡಿಗೆ ಶುಭ ಹಾರೈಕೆ
ನವದಂಪತಿಗೆ ಹೂಗುಚ್ಛ ಕೊಟ್ಟು ಶುಭಕೋರಿದ ರಾಮ್ ಚರಣ್
ವಿಜಯ್ ದೇವರಕೊಂಡ - ರಶ್ಮಿಕಾಗೆ ಹಾರೈಸಿದ ನಾಗಾರ್ಜುನ ಕುಟುಂಬ