ಪ್ರಧಾನಿ ಮೋದಿ ಭೇಟಿಯಾದ ವಿರೋಶ್ ಜೋಡಿ; ರಿಸೆಪ್ಶನ್ಗೆ ಆಹ್ವಾನ
Virosh Meets PM Modi : ನಿನ್ನೆ ಉದಯಪುರದಲ್ಲಿ ವಿವಾಹವಾಗಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಾಕ್ಷತೆಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ಮೋದಿ ಅವರ ಜೊತೆ ವಿರೋಶ್ ಜೋಡಿ ಆತ್ಮೀಯವಾಗಿ ಮಾತುಕತೆ ನಡೆಸಿತು.
ಉದಯಪುರದದಲ್ಲಿ ಅದ್ಧೂರಿ ವಿವಾಹವಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಇಂದು ಹಲವು ಗಣ್ಯರನ್ನು ಭೇಟಿಯಾಗಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ.
ಉದಯಪುರದಲ್ಲಿ ನಡೆದ ತೆಲುಗು ಹಾಗೂ ಕೊಡವ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ನವದೆಹಲಿಯಲ್ಲಿರುವ ಪ್ರಧಾನಿ ಮೋದಿಯವರ ಕಚೇರಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಆತ್ಮೀಯ ಸಂವಾದ ನಡೆಸಿದರು. ನವ ವಧುವಾದ ರಶ್ಮಿಕಾ ಹಳದಿ ಬಣ್ಣದ ಚುಡಿದಾರ್‌ನಲ್ಲಿ ಕಾಣಿಸಿಕೊಂಡರೆ, ವಿಜಯ್ ಬಿಳಿ ಬಣ್ಣದ ಸಲ್ವಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಧಾನಿಯವರೊಂದಿಗೆ ವೈರಲ್ ಆದ ಫೋಟೋದಲ್ಲಿ ವಿರೋಶ್ ದಂಪತಿ ಮೋದಿಯವರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಮತ್ತು ಅವರಿಗೆ ಶಾಲು ಉಡುಗೊರೆಯಾಗಿ ನೀಡುತ್ತಿರುವುದು ಕಾಣಿಸುತ್ತದೆ. ವಿವಾಹಕ್ಕೂ ಮೊದಲು ಖುದ್ದು ಪ್ರಧಾನಿಯವರೇ ವಿರೋಶ್ ಜೋಡಿಗೆ ಅಭಿನಂದಿಸುತ್ತಾ ಪತ್ರ ಬರೆದಿದ್ದರು. ಪತ್ರದಲ್ಲಿ, "ಶ್ರೀಮತಿ ಮಾಧವಿ ಮತ್ತು ಶ್ರೀ ಗೋವರ್ಧನ್ ರಾವ್ ದೇವರಕೊಂಡ ಜೀ, ಫೆಬ್ರವರಿ 26, 2026 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಆಹ್ವಾನಿಸಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಸಂತೋಷದಾಯಕ ಮತ್ತು ಶುಭ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಪ್ರಧಾನಿ ಮೋದಿ ನವ ಜೋಡಿಗೆ ಹಾರೈಸಿದ್ದರು.
ಮೋದಿ ಭೇಟಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿರೋಶ್ ಜೋಡಿ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಮಾರ್ಚ್ 4, 2026 ರಂದು ಹೈದರಾಬಾದ್‌ನಲ್ಲಿ ವಿವಾಹ ಆರತಕ್ಷತೆಯನ್ನು ಆಯೋಜಿಸಲಾಗಿದೆ.