ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ವಿರೋಶ್' ಸಂಗೀತ್ ಸಂಭ್ರಮದ ಫೋಟೋಗಳು ವೈರಲ್; ‌ʻಆ ರಾತ್ರಿ ನಮಗೆ ಮರೆಯಲಾಗದ ಮೋಜಿನ ಕ್ಷಣʼ ಎಂದ ರಶ್ಮಿಕಾ ಮಂದಣ್ಣ

ನಟ ವಿಜಯ್‌ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಫೆ.26ರಂದು ದಾಂಪತ್ಯ ಬದುಕಿಗೆ ಕಾಲಿಟ್ಟರು. ಸದ್ಯ ಅವರು ಆರತಕ್ಷತೆಯ ತಯಾರಿಯಲ್ಲಿ ಇದ್ದಾರೆ. ಈ ನಡುವೆ ಅವರ ಸಂಗೀತ್‌ ಸಮಾರಂಭದ ಫೋಟೋಗಳು ವೈರಲ್‌ ಆಗಿವೆ. ಆ ಫೋಟೋಗಳನ್ನು ಹಂಚಿಕೊಂಡಿರುವ ವಿರೋಶ್‌ ಜೋಡಿಯ ಶೇರ್‌ ಮಾಡಿಕೊಂಡಿದೆ. ನಟಿ ರಶ್ಮಿಕಾ, "ಆ ರಾತ್ರಿ ಪ್ರೀತಿ, ಆನಂದಬಾಷ್ಪ, ನಗು, ಸಂಗೀತ, ಹಾಡು ಮತ್ತು ಮಿಂಚಿನ ಓಕುಳಿಯಿಂದ ತುಂಬಿತ್ತು. ನಾವು ರಾತ್ರಿಯಿಡೀ ಕುಣಿದು ಕುಪ್ಪಳಿಸಿದೆವು. ನಿಜವಾಗಿಯೂ ಅದು ನಮ್ಮ ಜೀವನದ ಅತ್ಯಂತ ಮೋಜಿನ ರಾತ್ರಿಯಾಗಿತ್ತು!! ವಿಜ್ಜು (ವಿಜಯ್) ಮತ್ತು ನಾನು ಪರಸ್ಪರ ಅಚ್ಚರಿ ನೀಡಬೇಕೆಂದುಕೊಂಡಿದ್ದೆವು.. ಅಲ್ಲಿಂದ ಹಿಡಿದು, ನಮ್ಮ ಕುಟುಂಬದವರು ನಮಗೆ ಸರ್‌ಪ್ರೈಸ್ ನೀಡಲು ಬಯಸಿದ್ದು.. ನಮ್ಮ ಕುಟುಂಬದವರೆಲ್ಲರೂ ಅಷ್ಟು ಮುಕ್ತವಾಗಿ ಮತ್ತು ಅದ್ಭುತವಾಗಿ ನೃತ್ಯ ಮಾಡುವುದನ್ನು ನೋಡಿ ನಮಗಾದ ಆ ಸಂಭ್ರಮ ಮತ್ತು ಆಶ್ಚರ್ಯ ಅಷ್ಟಿಷ್ಟಲ್ಲ" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಕಲರ್‌ಫುಲ್‌ ಫೋಟೋಗಳು.

1/13

"ಈ ಉಡುಪುಗಳು ಅದ್ಭುತವಾಗಿದ್ದವು.. ನಿಜಕ್ಕೂ ಅಮೇಜಿಂಗ್.. ಆ ಉಡುಪು ತುಂಬಾ ತೂಕವಿತ್ತು, ಆದರೂ ನಾನು ರಾತ್ರಿಯಿಡೀ ಅದನ್ನು ಧರಿಸಿ ಸಂಭ್ರಮಿಸಿದೆ!! ನಮ್ಮ ಕುಟುಂಬ ಹಾಗೂ ಸ್ನೇಹಿತರ ಪ್ರೀತಿಯ ನಡುವೆ ವಿಜಯ್ ಮತ್ತು ನಾನು ಒಂದಾಗಿ ಹೆಜ್ಜೆ ಹಾಕಿದ ರಾತ್ರಿಯಿದು" ಎಂದು ರಶ್ಮಿಕಾ ಹೇಳಿದ್ದಾರೆ.

2/13

ಮೈದುನ ಆನಂದ್‌ ದೇವರಕೊಂಡ ಜೊತೆ ರಶ್ಮಿಕಾ ಬಿಂದಾಸ್‌ ಡ್ಯಾನ್ಸ್.

3/13

"ಸುಂದರ ವ್ಯಕ್ತಿಗಳಿಂದ ತುಂಬಿದ್ದ ಒಂದು ದೊಡ್ಡ ಹಬ್ಬದಂತಿತ್ತು ಆ ರಾತ್ರಿ.." ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ.

4/13

"ಈ ಬಟ್ಟೆಗಳು ನಮ್ಮೊಳಗಿನ 'ಡ್ರ್ಯಾಗನ್'ಗಳನ್ನು ಹೊರತಂದವು.. ನಾನು ಬೆಳಗಿನ ಜಾವ 4 ಗಂಟೆಯವರೆಗೂ ಆ ಉಡುಪಿನಲ್ಲೇ ಇದ್ದೆ.." ಎಂದು ತಮ್ಮ ಕಾಸ್ಟ್ಯೂಮ್‌ ಬಗ್ಗೆಯೂ ವಿಜಯ್‌ ದೇವರಕೊಂಡ ಹೇಳಿಕೊಂಡಿದ್ದಾರೆ.

5/13

ಸಂಗೀತ್ ಸಮಾರಂಭದಲ್ಲಿ ವಿಜಯ್ ಮತ್ತು ರಶ್ಮಿಕಾ ಪರಸ್ಪರ ಅಚ್ಚರಿ ನೀಡಲು ಪ್ಲಾನ್ ಮಾಡಿದ್ದರು.

6/13

ರಶ್ಮಿಕಾ ಮಂದಣ್ಣ ಅವರ ಇಡೀ ಕುಟುಂಬವು ಮುಕ್ತವಾಗಿ ನೃತ್ಯ ಮಾಡಿ ನವಜೋಡಿಗೆ ಸರ್‌ಪ್ರೈಸ್ ನೀಡಿದೆ.

7/13

"ಆ ರಾತ್ರಿ ಪ್ರೀತಿ, ಆನಂದಬಾಷ್ಪ ಮತ್ತು ಸಂಗೀತದಿಂದ ತುಂಬಿತ್ತು" ಎಂದು ಭಾವುಕರಾದ ರಶ್ಮಿಕಾ.

8/13

ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ಈ ಜೋಡಿಯ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್.

9/13

ಈ ಸಂಭ್ರಮದ ಬೆನ್ನಲ್ಲೇ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ.

10/13

ಸುಮಾರು 100 ಆಪ್ತರ ಮಧ್ಯೆ ಸಂಭ್ರಮದಿಂದ ವಿರೋಶ್‌ ಜೋಡಿಯ ಮದುವೆ ನಡೆದಿತ್ತು

11/13

2018ರಲ್ಲಿ ಮೊದಲ ಬಾರಿಗೆ ವಿಜಯ್‌ ಮತ್ತು ರಶ್ಮಿಕಾ ಒಟ್ಟಿಗೆ ಸಿನಿಮಾ ಮಾಡಿದ್ದರು. ಆನಂತರ ಇಬ್ಬರ ನಡುವೆ ಪ್ರೀತಿ ಮೂಡಿತ್ತು.

12/13

ದೇಶದ ಪ್ರಮುಖ ನಗರಗಳಲ್ಲಿ ಸಿಹಿ ಹಂಚಿದ ವಿರೋಶ್‌ ಜೋಡಿ, ವಿವಿಧ ದೇವಾಲಯಗಳಲ್ಲಿ ಅನ್ನದಾನವನ್ನು ಏರ್ಪಡಿಸಿತ್ತು.

13/13

"ನಗು ತಡೆಯಲಾರದೆ ಕಣ್ಣಲ್ಲಿ ನೀರು ಬರುವವರೆಗೆ ನಕ್ಕ ಕ್ಷಣಗಳು, ಪಾದಗಳು ನೋಯುವಷ್ಟು ಕುಣಿದ ಸಂಭ್ರಮ, ಎಲ್ಲರ ಭಾಷಣ ಮತ್ತು ಸರ್‌ಪ್ರೈಸ್‌ಗಳನ್ನು ಕಂಡು ಭಾವುಕರಾಗಿ ಕಣ್ಣೀರು ಸುರಿಸಿದ ಆ ಸಂಜೆ" ಎಂದು ವಿಜಯ್‌ ದೇವರಕೊಂಡ ತಿಳಿಸಿದ್ದಾರೆ.