ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding Fashion 2025: ಮದುವೆಯ ಸಂಭ್ರಮದ ಸಿಂಗಾರಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್

ಮದುವೆ ಮನೆಯ ಸಂಭ್ರಮದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲು ಬ್ಯೂಟಿ ಎಕ್ಸ್‌ಪರ್ಟ್ಸ್ ಒಂದಿಷ್ಟು ವೆಡ್ಡಿಂಗ್ ಲುಕ್ ಐಡಿಯಾಗಳನ್ನು ನೀಡಿದ್ದಾರೆ. ಆಕರ್ಷಕ ಮೇಕಪ್ ಆಯ್ಕೆ, ಉಡುಗೆ ತೊಡುಗೆಗಳ ಸೆಲೆಕ್ಷನ್, ಫೋಟೋಶೂಟ್, ಅತ್ಯಾಕರ್ಷಕ ಹೇರ್‌ಸ್ಟೈಲ್ ಸೇರಿದಂತೆ ಮುಂತಾದ ಬಗ್ಗೆ ಸಿಂಪಲ್ ಟಿಪ್ಸ್ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಪಿಕ್ಸೆಲ್)
1/5

ಇಂದಿನ ಟ್ರೆಂಡಿ ವೆಡ್ಡಿಂಗ್ ಸೆಲೆಬ್ರೆಷನ್‌ನಲ್ಲಿ ಆಕರ್ಷಕ ಸಿಂಗಾರಕ್ಕೆ ಮೊದಲಿಗಿಂತ ಮನ್ನಣೆ ಹೆಚ್ಚಾಗಿದೆ. ಹಾಗಾಗಿ ವೆಡ್ಡಿಂಗ್ ಸಮಾರಂಭದ ಆಕರ್ಷಕ ಲುಕ್‌ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್ ಐಡಿಯಾ ನೀಡಿದ್ದಾರೆ.

2/5

ಟ್ರೆಡಿಷನಲ್ ಶೃಂಗಾರಕ್ಕಿರಲಿ ಆದ್ಯತೆ

ವಧುವಿಗೆ ಹಾಗೂ ಮನೆಯ ಹೆಣ್ಣುಮಕ್ಕಳಿಗೆ ಉದ್ದದ ಮೊಗ್ಗಿನ ಜಡೆ, ಸೊಂಟಕ್ಕೆ ಡಾಬು, ಮಾಂಗ್ ಟೀಕಾ, ಕಾಲ್ಗೆಜ್ಜೆ, ತೋಳಿನ ಬಂಧಿ, ಬಿಗ್ ಜುಮ್ಕಾ, ಮಾಟಿ ಟ್ರೆಡಿಷನಲ್ ಶೃಂಗಾರಕ್ಕೆ ಸಾಥ್ ನೀಡುತ್ತವೆ. ಅಗಲ ಬಾರ್ಡರ್ ಹಾಗೂ ಸೆರಗು ಇರುವ ಸೀರೆ ಕೂಡ ಮದುಮಗಳನ್ನು ಮಾತ್ರವಲ್ಲ, ಇತರರನ್ನು ನೋಡಲು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಮದುವೆಯ ಕಳೆಯನ್ನು ಹೆಚ್ಚಿಸುತ್ತದೆ. ಇನ್ನು, ಹುಡುಗರು ಪಂಚೆ-ಶಲ್ಯ ಅಥವಾ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಬಹುದು.

3/5

ಆಕರ್ಷಕ ಮೇಕಪ್ ಆಯ್ಕೆ

ಸಿಂಪಲ್ ಮೇಕಪ್ ಮದುವೆಗೆ ಹೊಂದುವುದಿಲ್ಲ. ಮದುವೆಗೆ ಹೆಚ್ಡಿ ಅಥವಾ ಸೆಲೆಬ್ರೆಟಿ ಮಿನರಲ್ ಮೇಕಪ್ ಸೂಟ್ ಆಗುತ್ತವೆ. ಆಯಾ ಸ್ಕಿನ್ ಟೋನ್‌ಗೆ ಸೂಟ್ ಆಗುವಂತೆ ಸೀರೆ ಇಲ್ಲವೇ ಡಿಸೈನರ್‌ವೇರ್‌ಗೆ ಸೂಟ್ ಆಗುವಂತೆ ಮೇಕಪ್ ಮಾಡಿಸಬೇಕು. ಹುಡುಗರಿಗೂ ಅವರವರ ತ್ವಚೆಗೆ ಅನುಗುಣವಾದ ಮೇಕಪ್ ಕೆಲವೊಮ್ಮೆ ಅಗತ್ಯ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

4/5

ಉಡುಗೆ ತೊಡುಗೆಗಳ ಸೆಲೆಕ್ಷನ್

ಸೀರೆ, ಲೆಹೆಂಗಾ, ಗಾಗ್ರ, ಡಿಸೈನರ್ ದಾವಣಿ ಲಂಗ ಹಾಗೂ ಅನಾರ್ಕಲಿ, ಸೆಲ್ವಾರ್ ಕಮೀಝ್ ಹೀಗೆ ಹೆವ್ವಿ ವರ್ಕ್ ಇರುವ ಡಿಸೈನರ್‌ವೇರ್‌ಗಳು ಹುಡುಗಿಯರಿಗೆ ಮ್ಯಾಚ್ ಆಗುತ್ತವೆ. ಡಿಸೈನ್ ಹೆಚ್ಚು ಇದ್ದಷ್ಟು ಗ್ರ್ಯಾಂಡ್ ಲುಕ್ ನೀಡುತ್ತವೆ. ಹಾಗೆಯೇ ಹುಡುಗರಿಗೂ ಶೆರ್ವಾನಿ, ವೈಟ್ ಸಿಲ್ಕ್ ಪಂಚೆ, ಜುಬ್ಬಾ, ಶಲ್ಯ, ಲಾಂಗ್ ಡಿಸೈನರ್ ರೇಷ್ಮೆ ಕುರ್ತಾಗಳು ಆಕರ್ಷಕವಾಗಿ ಬಿಂಬಿಸುತ್ತವೆ.

ಪರ್ಫೆಕ್ಟ್ ಪಿಕ್ಚರ್ ಔಟ್‌ಲುಕ್

ಫೋಟೋಶೂಟ್ ಇಂದು ಎಲ್ಲೆಡೆ ಕಾಮನ್ ಆಗಿದೆ. ಹಾಗಾಗಿ ಮದುಮಗ-ಮದುಮಗಳು ಈ ಕುರಿತಂತೆಯೂ ಗಮನಹರಿಸುವುದು ಅಗತ್ಯ.

5/5

ಅತ್ಯಾಕರ್ಷಕ ಹೇರ್‌ಸ್ಟೈಲ್

ಮದುವೆಯಲ್ಲಿ ಉಡುಪುಗಳ ಜತೆ ಹೇರ್‌ಸ್ಟೈಲ್, ಜ್ಯುವೆಲರಿಗಳು ಹಾಗೂ ಆಕ್ಸೆಸರೀಸ್‌ಗೂ ಆದ್ಯತೆ ನೀಡಬೇಕು ಎನ್ನುತ್ತಾರೆ ವೆಡ್ಡಿಂಗ್ ಸ್ಟೈಲಿಸ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author