ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Wedding Fashion 2026: ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಹಾರಗಳಿವು

Wedding Jewelry Fashion: ಈ ಬಾರಿಯ ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ನಲ್ಲಿ ವಧೂ ಮಾತ್ರವಲ್ಲ, ಎಲ್ಲಾ ಮಹಿಳೆಯರು ಧರಿಸಬಹುದಾದಂತಹ ಗ್ರ್ಯಾಂಡ್ ಲುಕ್ ನೀಡುವಂತಹ ಕಲಾತ್ಮಕ ಇಮಿಟೇಷನ್ ಹಾರಗಳು ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಇಮಿಟೇಷನ್ ಹಾರ (ಚಿತ್ರಕೃಪೆ: ಪಿಕ್ಸೆಲ್)
1/5

ಈ ಬಾರಿಯ ವೆಡ್ಡಿಂಗ್ ಜ್ಯುವೆಲರಿ ಹಾಗೂ ಗ್ರ್ಯಾಂಡ್ ಆಭರಣಗಳ ಸಾಲಿನಲ್ಲಿ, ಮದುವೆಯಾಗುವ ವಧು ಮಾತ್ರವಲ್ಲ, ಮದುವೆಯಲ್ಲಿ ಹಾಗೂ ಸಮಾರಂಭಗಳಲ್ಲಿ ಎಲ್ಲಾ ಹೆಣ್ಣು ಮಕ್ಕಳು ಧರಿಸಬಹುದಾದಂತಹ ಕಲಾತ್ಮಕ ಡಿಸೈನ್‌ನ ಇಮಿಟೇಷನ್ ಹಾರಗಳು ಎಂಟ್ರಿ ನೀಡಿವೆ.

ಈ ಕಲಾತ್ಮಕ ವಿನ್ಯಾಸದಲ್ಲಿ ಇದೀಗ ದೇವಾನು ದೇವತೆಗಳ ಚಿತ್ತಾರವಿರುವಂತವು, ಪ್ರಾಣಿ-ಪಕ್ಷಿಗಳ ಲೋಕ ಕಾಣುವಂತವು ಜತೆಗೆ ಶಿಲ್ಪಕಲೆಯನ್ನು ಅಚ್ಚು ಮೂಡಿಸಿದಂತಹ ಡಿಸೈನ್‌ನವು ಹೆಚ್ಚು ಡಿಸೈನ್‌ಗಳಲ್ಲಿ ಆಗಮಿಸಿವೆ. ಕಲಾತ್ಮಕ ಡಿಸೈನ್‌ನಲ್ಲಿ ಗ್ರ್ಯಾಂಡ್ ಆಭರಣ ಬಯಸುವವರನ್ನು ಸೆಳೆದಿವೆ ಎನ್ನುತ್ತಾರೆ ಇಮಿಟೇಷನ್ ಜ್ಯುವೆಲರಿ ಮಾರಾಟಗಾರರು.

2/5

ಇಮಿಟೇಷನ್ ಹಾರಗಳ ಬೇಡಿಕೆ ಹೆಚ್ಚಲು ಕಾರಣ

ಅಂದಹಾಗೆ, ಈ ಇಮಿಟೇಷನ್ ಹಾರಗಳ ಅದರಲ್ಲೂ ಕಲಾತ್ಮಕ ಹಾರಗಳ ಬೇಡಿಕೆ ಹೆಚ್ಚಾಗಲು ಕಾರಣ ಎಡೆಬಿಡದೇ ಚಿನ್ನ-ಬೆಳ್ಳಿಯ ದರ ಆಕಾಶಕ್ಕೇರಿರುವುದು. ಸಾಮಾನ್ಯವರು ಮಾತ್ರವಲ್ಲ, ಮಧ್ಯಮ ವರ್ಗದವರೂ ಕೂಡ ಕೊಳ್ಳಲಾದಂತಹ ಪರಿಸ್ಥಿತಿಯಿಂದಾಗಿ ಮಹಿಳೆಯರು ಇಮಿಟೇಷನ್ ಹಾರಗಳ ಮೊರೆ ಹೋಗುತ್ತಿದ್ದಾರೆ. ಧರಿಸಿ, ತಮ್ಮ ಆಸೆ ಪೂರೈಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಶಿ.

3/5

ಶ್ರೀರಾಮ-ಸೀತಾ-ಲಕ್ಷ್ಮಣನ ಹಾರ

ಶ್ರೀರಾಮ ಚಂದ್ರ ಸೀತಾ, ಲಕ್ಷ್ಮಣ ಹಾಗೂ ಆಂಜನೇಯ ಸಮೇತರಾಗಿ ಇರುವಂತಹ ಆಂಟಿಕ್ ಹಾಗೂ ಕಾಪರ್ ಫಿನಿಶಿಂಗ್ ಗೋಲ್ಡ್ ಇಮಿಟೇಷನ್ ಹಾರಗಳು ಈ ಸೀಸನ್‌ನಲ್ಲಿ ಸಖತ್ ಟ್ರೆಂಡಿಯಾಗಿವೆ.

4/5

ದೇವಾನುದೇವತೆಗಳ ಹಾರ

ಲಕ್ಷ್ಮಿ, ಗಣಪ, ಇಂದ್ರ-ಚಂದ್ರ ಹೀಗೆ ದೇವಾನು ದೇವತೆಗಳ ಡಿಸೈನ್ ಹೊಂದಿರುವಂತಹ ದೊಡ್ಡ ಇಮಿಟೇಷನ್ ಹಾರಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

5/5

ಕಲರ್‌ಫುಲ್ ಬೀಡ್ಸ್ ಹಾರ

ನೋಡಲು ಥೇಟ್ ಪ್ರಿಶಿಯಸ್ ಬೀಡ್ಸ್ ಹೊಂದಿರುವಂತಹ ಕೃತಕ ಬೀಡ್ಸ್ ಹೊಂದಿರುವಂತಹ ಲೇಯರ್ ಹಾರಗಳು ಹುಡುಗಿಯರನ್ನು ಸೆಳೆದಿವೆ.

ಶೀಲಾ ಸಿ ಶೆಟ್ಟಿ

View all posts by this author