ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆದ ಮಲ್ಟಿ ಕಲರ್ಡ್‌ ಡಿಜಿಟಲ್‌ ಪ್ರಿಂಟೆಡ್‌ ಸೀರೆಗಳು

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಮಲ್ಟಿ ಕಲರ್ಡ್‌ ಡಿಜಿಟಲ್‌ ಸೀರೆಗಳು ಟ್ರೆಂಡಿಯಾಗಿವೆ. ನೋಡಲು ಗ್ರ್ಯಾಂಡ್‌ ಲುಕ್‌ ನೀಡುವ ಈ ಸೀರೆಗಳು ಸದ್ಯ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಶ್ರೀಮುಖಿ, ನಟಿ
1/5

ಈ ವೆಡ್ಡಿಂಗ್‌ ಸೀಸನ್‌ನಲ್ಲಿ ವರ್ಣಮಯ ಪ್ರಿಂಟೆಡ್‌ ಡಿಜಿಟಲ್‌ ಸೀರೆಗಳು ಸಖತ್‌ ಟ್ರೆಂಡಿಯಾಗಿವೆ. ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಹೌದು, ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಬಗೆಬಗೆಯ ಮಲ್ಟಿ ಕಲರ್ಡ್‌ ಡಿಜಿಟಲ್‌ ಸೀರೆಗಳು, ಸೀರೆ ಲೋಕದಲ್ಲಿ ಟ್ರೆಂಡಿಯಾಗಿದ್ದು, ಗ್ರ್ಯಾಂಡ್‌ ಲುಕ್‌ ಬಯಸುವ ಮಹಿಳೆಯರನ್ನು ಸವಾರಿ ಮಾಡತೊಡಗಿವೆ.

2/5

ವೈವಿಧ್ಯಮಯ ಡಿಜಿಟಲ್‌ ಸೀರೆಗಳು

ಅಂದಹಾಗೆ, ಈ ಡಿಜಿಟಲ್‌ ಪ್ರಿಂಟೆಡ್‌ ಸೀರೆಗಳು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಸೀರೆ ಲೋಕದಲ್ಲಿ ಬಿಡುಗಡೆಗೊಂಡಿದ್ದು, ರೇಷ್ಮೆ ಸೀರೆಯಷ್ಟೇ ಗ್ರ್ಯಾಂಡ್‌ ಲುಕ್‌ ನೀಡುವಂತಹ ವಿನ್ಯಾಸಗಳಲ್ಲಿ ಬಂದಿವೆ. ಅಲ್ಲದೇ, ಕೈಗೆಟಕುವ ಬೆಲೆಯಲ್ಲಿ ದೊರಕುತ್ತಿವೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್‌ ರಾಶಿ ಮತ್ತು ಸೈಯಾರಾ.

3/5

ಟ್ರೆಂಡಿಯಾಗಿರುವ ಸೀರೆಗಳಿವು

ಮಲ್ಟಿ ಕಲರ್‌ ಪ್ರಿಂಟ್ಸ್‌ ಇರುವ ಡಿಜಿಟಲ್‌ ಸೀರೆಗಳಲ್ಲಿ ಇದೀಗ ಶಿನಾನ್‌ ಸಿಲ್ಕ್‌, ಶಿಫಾನ್‌, ಕ್ರೇಪ್‌ ಫ್ಯಾಬ್ರಿಕ್‌ನವು ಹೆಚ್ಚು ಪ್ರಚಲಿತದಲ್ಲಿವೆ. ಇವುಗಳ ಮೇಲೆ ಮಿರರ್‌ ವರ್ಕ್‌, ಎಂಬ್ರಾಯ್ಡರಿ ವರ್ಕ್‌, ಕುಂದನ್‌ ಸೇರಿದಂತೆ ನಾನಾ ಬಗೆಯ ಡಿಸೈನ್‌ನ್‌ ಮಾಡಿದಂತವು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಹೆಣ್ಣುಮಕ್ಕಳನ್ನು ಆಕರ್ಷಿಸುತ್ತಿವೆ. ಈ ಡಿಸೈನ್‌ನವನ್ನು ಹೊರತುಪಡಿಸಿದಲ್ಲಿ ಫ್ಲೋರಲ್‌ ಪ್ರಿಂಟ್ಸ್‌ ಹಾಗೂ ಟ್ರಾಪಿಕಲ್‌ ಪ್ರಿಂಟ್ಸ್‌ ಮತ್ತು ಕಲಾಂಕಾರಿ ಪ್ರಿಂಟ್ಸ್‌ನವು ಕೂಡ ಈ ಡಿಜಿಟಲ್‌ ವಿನ್ಯಾಸದಲ್ಲಿ ಎಂಟ್ರಿ ನೀಡಿ ಹಿಟ್‌ ಲಿಸ್ಟ್‌ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜಿ. ಅವರ ಪ್ರಕಾರ, ಈ ಶೈಲಿಯ ಸೀರೆಗಳು ಕೇವಲ ಸಾಮಾನ್ಯ ವರ್ಗದವರನ್ನು ಮಾತ್ರವಲ್ಲ, ಕಾರ್ಪೋರೇಟ್‌ ವರ್ಗದ ಮಾನಿನಿಯರನ್ನು ಕೂಡ ಸೆಳೆಯುತ್ತಿವೆ ಎನ್ನುತ್ತಾರೆ.

4/5

ಸೀರೆ ಹೈಲೈಟ್‌ ಮಾಡುವ ಎಂಬಾಲಿಶ್‌ಮೆಂಟ್ಸ್‌

ಈ ಸೀರೆಗಳ ವಿಶೇಷತೆಯೆಂದರೇ, ನಾನಾ ಬಗೆಯ ಡಿಸೈನ್ಸ್, ಅದರಲ್ಲೂ ಚಿಕ್ಕ ಮಿರರ್‌ ಇರುವಂತಹ ಎಂಬಾಲಿಶ್‌ಮೆಂಟ್ಸ್ ಇರುವಂತಹ ವಿನ್ಯಾಸಗಳು ಈ ಸೀರೆಯ ಹೈಲೈಟ್‌. ಇದರಿಂದಾಗಿ ಇಡೀ ಸೀರೆಯ ಲುಕ್‌ ಗ್ರ್ಯಾಂಡ್‌ ಆಗಿ ಕಾಣಿಸುತ್ತದೆ. ಹಾಗಾಗಿ ಸಾಕಷ್ಟು ಮಹಿಳೆಯರು ಮದುವೆ ಮನೆಯಲ್ಲಿ ರೇಷ್ಮೆ ಸೀರೆಯನ್ನು ಉಡುವ ಬದಲು ಇವುಗಳನ್ನೇ ಕೊಂಡು ಉಡುತ್ತಿದ್ದಾರೆ ಎನ್ನುತ್ತಾರೆ ಸೀರೆ ಡಿಸೈನರ್‌ಗಳು.

5/5

ಡಿಜಿಟಲ್‌ ಪ್ರಿಂಟೆಡ್‌ ಡಿಸೈನರ್‌ ಸೀರೆಗಳ ನಿರ್ವಹಣೆ ಹೀಗಿರಲಿ

  • ಇವುಗಳನ್ನು ಉಟ್ಟ ನಂತರ ನೆರಳಿನಲ್ಲಿ ಒಣಗಿಸಿ, ಹ್ಯಾಂಗರ್‌ನಲ್ಲಿ ನೇತುಹಾಕಿ.
  • ಆದಷ್ಟೂ ಇತರೇ ಸೀರೆಗಳ ಜತೆಗೆ ಮಡಿಚಿಡಬೇಡಿ.
  • ಡಿಸೈನರ್‌ ಸೀರೆಯಾಗಿರುವುದರಿಂದ ಮನೆಯಲ್ಲಿ ವಾಶ್‌ ಮಾಡಬೇಡಿ.
  • ಈ ಸೀರೆಗಳ ಜತೆ ಸಿಲುಕಿ ಹಾಕಿಕೊಳ್ಳುವಂತಹ ಆಭರಣಗಳನ್ನು ಧರಿಸಬೇಡಿ.
  • ಈ ಸೀರೆಯು ಮಲ್ಟಿ ಕಲರ್‌ನಲ್ಲಿರುವುದರಿಂದ ಆದಷ್ಟೂ ಟ್ರೆಂಡಿಯಾಗಿರುವ ಕಲರ್‌ನವನ್ನು ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author