ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಚಳಿಗಾಲದ ಫ್ಯಾಷನ್‌ನಲ್ಲಿ ಕಾರ್ಡಿಗಾನ್ ಜಾದೂ

Fashion News: ಈ ವಿಂಟರ್ ಫ್ಯಾಷನ್‌ನಲ್ಲಿ ನಾನಾ ಬಗೆಯ ಕಾರ್ಡಿಗಾನ್ಸ್ ಎಂಟ್ರಿ ನೀಡಿವೆ. ವಾಟರ್ ಫಾಲ್ ಕಾರ್ಡಿಗಾನ್, ಕ್ಲಾಸಿ ಲಾಂಗ್ ಕಾರ್ಡಿಗಾನ್, ಪ್ರಿಂಟೆಡ್ ಕಾರ್ಡಿಗಾನ್, ನಿಟ್ವೇರ್ ಕಾರ್ಡಿಗಾನ್, ನೆಟ್ಟೆಡ್ ಕಾರ್ಡಿಗಾನ್, ವೂಲ್ ಕಾರ್ಡಿಗಾನ್ ಹೀಗೆ ನಾನಾ ಶೈಲಿಯ ಶಾರ್ಟ್ ಹಾಗೂ ಲಾಂಗ್ ಲೆಂತ್ ಇರುವ ಕಾರ್ಡಿಗಾನ್‌ಗಳು ಇಂದು ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಹೊಸ ವಿನ್ಯಾಸದ ಕಾರ್ಡಿಗಾನ್‌ಗಳು (ಚಿತ್ರಕೃಪೆ: ಪಿಕ್ಸೆಲ್)
1/5

ವೈವಿಧ್ಯಮಯ ಕಾರ್ಡಿಗಾನ್‌ಗಳು ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಹಂಗಾಮ ಎಬ್ಬಿಸುತ್ತಿವೆ.

ಟ್ರೆಂಡಿಯಾಗಿರುವ ಕಾರ್ಡಿಗಾನ್ಸ್

ವಾಟರ್ ಫಾಲ್ ಕಾರ್ಡಿಗಾನ್, ಕ್ಲಾಸಿ ಲಾಂಗ್ ಕಾರ್ಡಿಗಾನ್, ಪ್ರಿಂಟೆಡ್ ಕಾರ್ಡಿಗಾನ್, ನಿಟ್ವೇರ್ ಕಾರ್ಡಿಗಾನ್, ನೆಟ್ಟೆಡ್ ಕಾರ್ಡಿಗಾನ್, ವೂಲ್ ಕಾರ್ಡಿಗಾನ್ ಹೀಗೆ ನಾನಾ ಶೈಲಿಯ ಶಾರ್ಟ್ ಹಾಗೂ ಲಾಂಗ್ ಲೆಂತ್ ಇರುವ ಕಾರ್ಡಿಗಾನ್‌ಗಳು ಇಂದು ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗಿವೆ.

2/5

ಆಕರ್ಷಕ ಶಾರ್ಟ್ -ಲಾಂಗ್ ಕಾರ್ಡಿಗಾನ್ಸ್

ಮಂಡಿಗಿಂತ ಉದ್ದವಿರುವ ಹಾಗೂ ಕ್ರಾಪ್ ಆಗಿರುವ ಕಾರ್ಡಿಗಾನ್‌ಗಳು ಚಾಲ್ತಿಯಲ್ಲಿವೆ. ಉದ್ದಗಿರುವಂತವು ಪ್ಲಂಪಿಯಾಗಿರುವವರಿಗೆ ಹೇಳಿ ಮಾಡಿಸಿದಂತಿರುತ್ತವೆ. ಇನ್ನು, ಇವುಗಳಲ್ಲಿ ಸಾದಾ ಹಾಗೂ ಪ್ರಿಂಟ್ಸ್‌ನವು ಈ ಬಾರಿ ಹೆಚ್ಚು ಚಾಲ್ತಿಯಲ್ಲಿವೆ.

ವಾಟರ್‌ಫಾಲ್ ಕಾರ್ಡಿಗಾನ್ಸ್

ನೋಡಿದಾಗ ಇಳೆ ಬಿದ್ದಂತಿರುವ ವಿನ್ಯಾಸದಲ್ಲಿ ಇವು ಸಿದ್ಧಗೊಂಡಿರುತ್ತವೆ. ಇನ್ನು, ಧರಿಸಿದಾಗ ಫ್ಲೋ ಆದಂತೆ ಕಾಣುವ ವಾಟರ್‌ಫಾಲ್ ಕಾರ್ಡಿಗಾನ್ಸ್ ಇಂದು ಹೆಚ್ಚು ಟ್ರೆಂಡಿಯಾಗಿದೆ. ಇವು ನೋಡಲು ತಕ್ಷಣಕ್ಕೆ ಕೋಟ್‌ನಂತೆಯೂ ಕಾಣುತ್ತವೆ. ಇವುಗಳ ಫ್ಯಾಬ್ರಿಕ್ ಸಾಫ್ಟಾಗಿರುವುದರಿಂದ ಲೇಯರ್ ಲುಕ್‌ಗೆ ಹೇಳಿ ಮಾಡಿಸಿದಂತಿರುತ್ತವೆ.

3/5

ನೆಟ್ಟೆಡ್ ಲಾಂಗ್ ಕಾರ್ಡಿಗಾನ್ಸ್

ನೆಟ್ಟೆಡ್ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿಲಾದ ಕಾರ್ಡಿಗಾನ್‌ಗಳಿವು. ಲೇಯರ್ ಲುಕ್‌ಗೆ ಬೆಸ್ಟ್. ಹೊಸ ಲುಕ್ ನೀಡುತ್ತದೆ. ಒಳಗೆ ಧರಿಸಿರುವ ಟಾಪ್ ಅಥವಾ ಡ್ರೆಸ್‌ಗಳು ಕಾಣಿಸುವುದರಿಂದ ಇವು ಡಿಫರೆಂಟಾಗಿ ಕಾಣುತ್ತವೆ.

4/5

ಪ್ರಿಂಟೆಡ್ ಕಾರ್ಡಿಗಾನ್ಸ್

ಫ್ಲೋರಲ್, ಸ್ಟ್ರೈಫ್ಸ್ ಅಥವಾ ಶೇಡ್ಸ್ ಇಲ್ಲವೇ ಅನಿಮಲ್ ಪ್ರಿಂಟ್ಸ್ ಇರುವಂತಹ ಪ್ರಿಂಟೆಡ್ ಕಾರ್ಡಿಗಾನ್ಸ್ ಕೂಡ ಈ ಸೀಸನ್‌ನಲ್ಲಿ ಸಾಕಷ್ಟು ವೆರೈಟಿಯಲ್ಲಿ ದೊರೆಯುತ್ತಿವೆ.

ಕಲರ್ಸ್ ಆಯ್ಕೆ ಚೆನ್ನಾಗಿರಲಿ

ಕಾರ್ಡಿಗಾನ್ ಎಂದಾಕ್ಷಣ ಕಾಮನ್ ಕಲರ್‌ಗಳಾದ ಬ್ಲಾಕ್ ಅಥವಾ ಮರೂನ್ ಆಯ್ಕೆ ಮಾಡುವುದು ಸಾಮಾನ್ಯ. ಆದರೆ, ಫ್ಯಾಷನಿಸ್ಟಾಗಳು ಹೇಳುವಂತೆ, ಈ ಸೀಸನ್‌ಗೆ ಆದಷ್ಟೂ ವೈಬ್ರೆಂಟ್ ಶೇಡ್ಸ್ ಇಲ್ಲವೇ ಕಲರ್‌ಫುಲ್ ಆಗಿರುವಂತದ್ದನ್ನು ಸೆಲೆಕ್ಟ್ ಮಾಡಬೇಕು. ಇವು ಅತ್ಯಾಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಮಾಡೆಲ್ ಪ್ರಿಯಾ.

5/5

ಕಾರ್ಡಿಗಾನ್ ಪ್ರಿಯರಿಗೆ ಒಂದಿಷ್ಟು ಸಲಹೆ

  • ಆದಷ್ಟೂ ಕಲರ್ಸ್‌ನದ್ದು ಆಯ್ಕೆ ಮಾಡಿ.
  • ಔಟ್‌ಲುಕ್ ಪರ್ಫೆಕ್ಟ್ ಆಗಿರುವುದು ಮುಖ್ಯ.
  • ವಿಂಟರ್‌ನ ಲೇಯರ್ ಲುಕ್‌ಗೆ ಕಾರ್ಡಿಗಾನ್ ಬೆಸ್ಟ್ ಆಪ್ಷನ್.

ಶೀಲಾ ಸಿ ಶೆಟ್ಟಿ

View all posts by this author