Winter Fashion 2025: ಚಳಿಗಾಲಕ್ಕೆ ಬಂತು ಲೆದರ್ ಕೋ ಆರ್ಡ್ ಸೆಟ್ ಸ್ಕರ್ಟ್
Leather Co-ord Set Skirts: ಚಳಿಗಾಲದ ಫ್ಯಾಷನ್‌ನಲ್ಲಿ ಇದೀಗ ಗ್ಲಾಮರಸ್ ಲುಕ್ ನೀಡುವ ಲೆದರ್ ಕೋ ಆರ್ಡ್ ಸೆಟ್‌ಗಳು ಬಂದಿವೆ. ಹೈ ಫ್ಯಾಷನ್ ಯುವತಿಯರನ್ನು ಸವಾರಿ ಮಾಡತೊಡಗಿವೆ. ಈ ಕುರಿತಂತೆ ಸ್ಟೈಲಿಸ್ಟ್ ಏನು ಹೇಳುತ್ತಾರೆ? ಇಲ್ಲಿದೆ ಡಿಟೇಲ್ಸ್.
ಚಳಿಗಾಲದಲ್ಲಿ ಗ್ಲಾಮರಸ್ ಲುಕ್ ನೀಡುವ ಲೆದರ್ ಕೋ ಆರ್ಡ್ ಸ್ಕರ್ಟ್‌ಗಳು ಲಗ್ಗೆ ಇಟ್ಟಿವೆ.
ಈ ಸೀಸನ್‌ನಲ್ಲಿ ಚಾಲ್ತಿಯಲ್ಲಿರುವ ಲೆದರ್ ಔಟ್‌ಫಿಟ್‌ಗಳಲ್ಲಿ ಜಾಕೆಟ್ ಹಾಗೂ ಪ್ಯಾಂಟ್‌ಗಳನ್ನು ಹೊರತುಪಡಿಸಿದಲ್ಲಿ ಸ್ಕರ್ಟ್‌ಗಳು ಇದೀಗ ಸ್ಥಾನ ಪಡೆದಿವೆ. ಹೈ ಫ್ಯಾಷನ್ ಇಷ್ಟಪಡುವ ಯುವತಿಯರನ್ನು ಸವಾರಿ ಮಾಡತೊಡಗಿವೆ.
ಹುಡುಗಿಯರನ್ನು ಸೆಳೆದ ಲೆದರ್ ಕೋ ಆರ್ಡ್ ಸೆಟ್ ಸ್ಕರ್ಟ್
ಇದಕ್ಕೆ ಪೂರಕ ಎಂಬಂತೆ, ನಟಿ ಪ್ರಿಯಾಂಕಾ ಸರ್ಕಾರ್ ಧರಿಸಿದ್ದ ಲೆದರ್ ಕೋ ಆರ್ಡ್ ಸೆಟ್ ಸ್ಕರ್ಟ್ ಸದ್ಯ ಟ್ರೆಂಡಿಯಾಗಿದೆ. ಯುವತಿಯರು ಈಗಾಗಲೇ ಈ ಟ್ರೆಂಡ್ ಫಾಲೋ ಮಾಡತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹೈ ಫ್ಯಾಷನ್ ಪ್ರಿಯರ ಲೆದರ್ ಕೋ ಆರ್ಡ್ ಸೆಟ್
ಮೊದಲೆಲ್ಲಾ ಲೆದರ್ ಫ್ಯಾಷನ್ ಎಂದಾಕ್ಷಣ ಕೇವಲ ಜಾಕೆಟ್ ಧರಿಸುವುದು ಎಂಬಂತಿತ್ತು. ಅಲ್ಲದೇ, ಲೆದರ್ ಬೆಲೆ ದುಬಾರಿಯಾಗಿದ್ದರಿಂದ ಫ್ಯಾಷನ್ ಪ್ರಿಯ ಸಾಮಾನ್ಯ ಯುವತಿಯರನ್ನು ತಲುಪಲು ವಿಫಲವಾಯಿತು. ಆದರೆ, ಇದೀಗ ಇದಕ್ಕೂ ಪರಿಹಾರ ದೊರೆತಿದೆ. ಲೆದರ್‌ನಂತೆಯೇ ಕಾಣಿಸುವ ಫೇಕ್ ಲೆದರ್ ಫ್ಯಾಬ್ರಿಕ್‌ನ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಹಾಗಾಗಿ ಲೆದರ್ ಫ್ಯಾಷನ್ ಮರಳಿದೆ. ಅವುಗಳಲ್ಲಿ ಇದೀಗ ಹುಡುಗಿಯರ ಹಾಟ್ ಫೇವರೇಟ್ ಆದ ಕೋ ಆರ್ಡ್ ಲೆದರ್ ಸ್ಕರ್ಟ್‌ಗಳು ಟ್ರೆಂಡಿಯಾಗಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಲೆದರ್ ಕೋ ಆರ್ಡ್ ಸೆಟ್ ಸ್ಕರ್ಟ್
ಗ್ಲಾಮರಸ್ ಲುಕ್ ನೀಡುವ ಈ ಫೇಕ್ ಲೆದರ್‌ನ ನಾನಾ ಬಗೆಯ ಕೋ ಆರ್ಡ್ ಸ್ಕರ್ಟ್‌ಗಳಲ್ಲಿ ಲಾಂಗ್ ಸ್ಕರ್ಟ್, ಮಿನಿ, ಮಿಡಿ ಸ್ಕರ್ಟ್ ಹಾಗೂ ಎ ಲೈನ್ ಸ್ಕರ್ಟ್‌ಗಳು ಸದ್ಯ ಟ್ರೆಂಡ್‌ನಲ್ಲಿದ್ದು, ಪಾರ್ಟಿ ಪ್ರಿಯ ಹೈ ಫ್ಯಾಷನ್ ಪ್ರಿಯ ಹುಡುಗಿಯರನ್ನು ಸಿಂಗರಿಸುತ್ತಿವೆ ಎನ್ನುತ್ತಾರೆ ಮಾರಾಟಗಾರರು.