ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಹೈ ಫ್ಯಾಷನ್ ಪ್ರಿಯರನ್ನು ಸವಾರಿ ಮಾಡುತ್ತಿರುವ ಶಿಯರ್ಲಿಂಗ್ ಜಾಕೆಟ್

Winter Fashion 2025: ಧರಿಸಿದಾಗ ಲಕ್ಷುರಿ ಲುಕ್ ನೀಡುವ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳು ಈ ವಿಂಟರ್‌ನ ಯಿಯರ್ ಎಂಡ್ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿವೆ. ಯಾವ್ಯಾವ ಬಗೆಯವು ಸದ್ಯ ಚಾಲ್ತಿಯಲ್ಲಿವೆ? ಇಲ್ಲಿದೆ ಡಿಟೇಲ್ಸ್.

ಶಿಯರ್ಲಿಂಗ್ ಜಾಕೆಟ್ (ಚಿತ್ರಕೃಪೆ: ಪಿಕ್ಸೆಲ್)
1/5

ಶಿಯರ್ಲಿಂಗ್ ಜಾಕೆಟ್‌ಗಳು ಡಿಸೆಂಬರ್ ಚಳಿಯಲ್ಲಿ ಕಾಣಿಸಿಕೊಂಡಿವೆ. ಹೌದು, ಈ ಬಾರಿಯ ಇಯರ್ ಎಂಡ್ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿವೆ. ಫೇಕ್ ಫರ್‌ನಲ್ಲಿ ನಾನಾ ಕಾಲರ್ ನೆಕ್ಲೈನ್‌ಗಳಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ.

2/5

ಹೈ ಫ್ಯಾಷನ್ ಪ್ರಿಯರ ಶಿಯರ್ಲಿಂಗ್ ಜಾಕೆಟ್

ಕುರಿಗಳ ಉಣ್ಣೆಯಿಂದ ಅಥವಾ ಫೇಕ್ ಫರ್‌ನಂತಹ ಮೆಟೀರಿಯಲ್‌ನಿಂದ ಸಿದ್ಧಪಡಿಸಲಾಗುವ ಈ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್ಸ್ ನೋಡಲು ಸಖತ್ ಆಗಿ ಕಾಣಿಸುತ್ತವೆ. ಲಕ್ಷುರಿ ಲುಕ್ ನೀಡುತ್ತವೆ.

ಒಳಗಿನ ಲೇಯರ್ ಒಂದು ಬಗೆಯದ್ದಾದರೇ ಹೊರಗಡೆ ಮತ್ತೊಂದು ಮೆಟೀರಿಯಲ್‌ನಲ್ಲಿ ಸಿದ್ಧಗೊಂಡಿರುತ್ತವೆ. ಇವು ದುಬಾರಿ ಕೂಡ. ಕೆಲವು ಲಾಂಗ್ ಕೋಟ್‌ನಂತಿರುತ್ತವೆ. ಹಾಗಾಗಿ ಇವನ್ನು ಚಳಿಗಾಲದ ಲಕ್ಷುರಿ ಜಾಕೆಟ್‌ಗಳೆನ್ನುತ್ತಾರೆ ಸ್ಟೈಲಿಸ್ಟ್ ರಾಕಿ.

3/5

ದೊಡ್ಡ ಕಾಲರ್‌ನ ಶಿಯರ್ಲಿಂಗ್ ಜಾಕೆಟ್/ಕೋಟ್

ಸಾಮಾನ್ಯವಾಗಿ ಶಿಯರ್ಲಿಂಗ್ ಜಾಕೆಟ್ ಅಥವಾ ಕೋಟ್‌ಗಳ ಕಾಲರ್‌ಗಳು ನೋಡಲು ದೊಡ್ಡದಾಗಿರುತ್ತವೆ. ಇದೇ ಶಿಯರ್ಲಿಂಗ್ ಜಾಕೆಟ್‌ಗಳ ಹೈಲೈಟ್ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.

4/5

ಆಕರ್ಷಕ ಶಿಯರ್ಲಿಂಗ್ ಜಾಕೆಟ್

ಮೊದಲೆಲ್ಲಾಈ ಬಗೆಯ ಜಾಕೆಟ್/ಕೋಟ್‌ಗಳನ್ನು ಕೇವಲ ಪಾಶ್ಚಿಮಾತ್ಯ ರಾಷ್ಟ್ರದವರು ಮಾತ್ರ ಹೆಚ್ಚಾಗಿ ಧರಿಸುತ್ತಿದ್ದರು. ಆದರೆ, ಇದೀಗ ಕಾಲ ಬದಲಾಗಿದೆ. ಚಳಿಗಾಲದಲ್ಲಿ ಧರಿಸುವ ಡ್ರೆಸ್‌ಕೋಡ್‌ನಲ್ಲಿ ಇವು ಸೇರಿಕೊಂಡಿವೆ. ನಾನಾ ಬಗೆಯ ಟಾಪ್‌ಗಳ ಮೇಲೆ ಧರಿಸಬಹುದಾದ ಫ್ಯಾಷನ್‌ನಲ್ಲಿ ಇವು ಆಗಮಿಸಿವೆ.

5/5

ಶಿಯರ್ಲಿಂಗ್ ಜಾಕೆಟ್/ಕೋಟ್ ಪ್ರಿಯರಿಗೆ ಟಿಪ್ಸ್

  • ಹೈ ಫ್ಯಾಷನ್ ಡ್ರೆಸ್‌ಕೋಡ್‌ನಲ್ಲಿ ಸೇರಿಸಿಕೊಳ್ಳಬಹುದು.
  • ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಹ ವಿನ್ಯಾಸದವನ್ನು ಆಯ್ಕೆ ಮಾಡಿಕೊಳ್ಳಬೇಕು.
  • ವೀಕೆಂಡ್ ಹಾಗೂ ಟ್ರಾವೆಲ್ ಟೈಮ್‌ನಲ್ಲೂ ಧರಿಸಬಹುದು.
  • ಹೆಚ್ಚು ತಂಪಿರುವ ತಾಣಗಳಿಗೆ ಮಾತ್ರ ಇವು ಸೂಕ್ತ.
  • ನಿಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್ ಆಗುವಂತದ್ದನ್ನು ಮಾತ್ರ ಸೆಲೆಕ್ಟ್ ಮಾಡಿ.
  • ಆದಷ್ಟೂ ಟ್ರೆಂಡಿಯಾಗಿರುವುದನ್ನು ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author