Winter Fashion 2025: ವಿಂಟರ್‌ನಲ್ಲಿ ಕಾಣಿಸಿಕೊಂಡ ಶರ್ಟ್ ಶೈಲಿಯ ಕಾರ್ಸೆಟ್ ಟಾಪ್
Shirt Style Corset Tops: ಚಳಿಗೆ ಕಾರ್ಸೆಟ್ ಧರಿಸುವುದು ಕಷ್ಟ! ಎನ್ನುವವರಿಗೆ ಇದೀಗ ಲೇಯರ್ ಲುಕ್‌ನಂತೆ ಬಿಂಬಿಸುವ ಟಾಪ್ ಸ್ಟೈಲ್ ಅಥವಾ ಶರ್ಟ್ ಸ್ಟೈಲ್ ಕಾರ್ಸೆಟ್ ಟಾಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದ್ಯಾವ ಬಗೆಯ ಟಾಪ್? ಸ್ಟೈಲಿಂಗ್ ಹೇಗೆ? ಇಲ್ಲಿದೆ ಟಿಪ್ಸ್.
ಧರಿಸಿದಾಗ ಕಾರ್ಸೆಟ್‌ನಂತೆ ಕಾಣಿಸುವ ಶರ್ಟ್ ಸ್ಟೈಲ್ ಟಾಪ್‌ಗಳು ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ.
ಲಾಂಗ್ ಸ್ಲೀವ್ ಕಾರ್ಸೆಟ್ ಸ್ಟೈಲ್ ಟಾಪ್
ಈ ಕೊರೆಯುವ ಚಳಿಯಲ್ಲಿ ಯಾರಿಗಾದರೂ ಸರಿಯೇ ಗ್ಲಾಮರಸ್ ಹೆಸರಲ್ಲಿ ಕಾರ್ಸೆಟ್ ಧರಿಸುವುದು ಕಷ್ಟ! ಲೇಯರ್ ಲುಕ್‌ನಲ್ಲೆ ಇದನ್ನು ಧರಿಸಲು ಇಚ್ಛಿಸುವವರಿಗೆಂದೇ ಮಾರುಕಟ್ಟೆಯಲ್ಲಿ ನಾನಾ ಬಗೆಯವು ಬಿಡುಗಡೆಗೊಂಡಿವೆ. ಇದನ್ನು ಸೆಲೆಬ್ರೆಟಿಗಳು ಮಾತ್ರವಲ್ಲ, ಡೀಸೆಂಟ್ ಮಾಡರ್ನ್ ಲುಕ್ ಬಯಸುವ ಯುವತಿಯರು ಕೂಡ ಧರಿಸತೊಡಗಿದ್ದಾರೆ.
ಕೃತಿಕಾ ಕಮ್ರಾ ಕಾರ್ಸೆಟ್ ಶರ್ಟ್ ಸ್ಟೈಲ್ ಟಾಪ್
ಇನ್ನು, ಇದಕ್ಕೆ ಪೂರಕ ಎಂಬಂತೆ ಬಾಲಿವುಡ್ ನಟಿ ಕೃತಿಕಾ ಕಮ್ರಾ ಕೋರಸ್ ವರ್ಲ್ಡ್‌ನ ಈ ಟಾಪ್ ಧರಿಸಿ, ಫೋಟೋಶೂಟ್ ಮಾಡಿರುವುದು, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಯುವತಿಯರನ್ನು ಸೆಳೆದಿದೆ. ಸಿಂಪಲ್ ಲುಕ್ ಬಯಸುವ ಯುವತಿಯರನ್ನು ಸವಾರಿ ಮಾಡತೊಡಗಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಏನಿದು ಟಾಪ್ ಸ್ಟೈಲ್ ಕಾರ್ಸೆಟ್ ಟಾಪ್
ಡಬ್ಬಲ್ ಶೇಡ್‌ನಲ್ಲಿ ಟ್ರೆಂಡಿಯಾಗಿರುವ ಈ ಟಾಪ್‌ನ ಕೆಳಭಾಗ ಥೇಟ್ ಕಾರ್ಸೆಟ್‌ನಂತೆಯೇ ಕಾಣಿಸುತ್ತದೆ. ಮೇಲ್ಭಾಗ ಮಾತ್ರ ಟಾಪ್‌ನಂತಿರುತ್ತದೆ. ಈ ಚಳಿಗಾಲಕ್ಕೆ ಹೊಂದುವಂತೆ ಇದನ್ನು ಲಾಂಗ್ ಸ್ಲೀವ್‌ನಲ್ಲಿ ಡಿಸೈನ್ ಮಾಡಲಾಗಿದೆ. ಬಾಡಿ ಫಿಟ್ಟಿಂಗ್ ಇರುವುದರಿಂದ ಥೇಟ್ ಕಾರ್ಸೆಟ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮಿಕ್ಸ್ –ಮ್ಯಾಚ್ ಸ್ಟೈಲಿಂಗ್
ಈ ಶೈಲಿಯ ಟಾಪ್‌ಗಳಿಗೆ ಕೇವಲ ಪ್ಯಾಂಟ್ ಮಾತ್ರವಲ್ಲ, ಸ್ಕರ್ಟ್ ಕೂಡ ಧರಿಸಬಹುದಾಗಿದೆ. ಆದರೆ, ಟಾಪ್‌ನ ಕಾಂಬಿನೇಷನ್‌ನಲ್ಲಿರಬೇಕು ಎಂದು ಸಿಂಪಲ್ ಸ್ಟೈಲಿಂಗ್ ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.