ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಚಳಿಗಾಲದಲ್ಲಿ ಬಿಂದಾಸ್ ಯುವತಿಯರ ಸ್ಕಾರ್ಫ್ ಫ್ಯಾಷನ್!

Scarf fashion : ಚಳಿಗಾಲದ ಫ್ಯಾಷನ್‌ನಲ್ಲಿ ಲೇಯರ್ ಲುಕ್‌ಗೆ ಸ್ಕಾರ್ಫ್ ಧರಿಸುವ ಟ್ರೆಂಡ್ ಮರಳಿದೆ. ಇದಕ್ಕೆ ಪೂರಕ ಎಂಬಂತೆ ನಾನಾ ಬಗೆಯ ಸ್ಕಾರ್ಫ್‌ಗಳು ಬಿಡುಗಡೆಗೊಂಡಿವೆ. ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರ ಚಳಿಗಾಲದ ಡ್ರೆಸ್‌ಕೋಡ್ ಲಿಸ್ಟ್‌ಗೆ ಸೇರಿದೆ‌. ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಬಿಂದಾಸ್ ಯುವತಿಯರ ಚಳಿಗಾಲದ ಫ್ಯಾಷನ್‌ಗೆ ಸ್ಕಾರ್ಫ್ ಫ್ಯಾಷನ್ ಮರಳಿದೆ. ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರ ಚಳಿಗಾಲದ ಡ್ರೆಸ್‌ಕೋಡ್ ಲಿಸ್ಟ್‌ಗೆ ಸೇರಿದೆ.

ಟ್ರೆಂಡಿಯಾಗಿರುವ ಸ್ಕಾರ್ಫ್ ಫ್ಯಾಷನ್

ನೋಡಲು ಒಂದಕ್ಕಿಂತ ಒಂದು ಭಿನ್ನವಾಗಿರುವ ಪ್ರಿಂಟೆಡ್‌ನವು, ಜೆಮೆಟ್ರಿಕಲ್, ಟ್ರಾಪಿಕಲ್, ಫ್ಲೋರಲ್ ಹೀಗೆ ನಾನಾ ಡಿಸೈನ್‌ನವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

2/5

ಬಿಂದಾಸ್ ಯುವತಿಯರ ಚಾಯ್ಸ್

ವೀಕೆಂಡ್‌ಗಳಲ್ಲಿ ಮಾತ್ರವಲ್ಲ, ನೋಡಲು ಚಳಿಗಾಲದಲ್ಲೂ ಆಕರ್ಷಕವಾಗಿ ಕಾಣಿಸಬೇಕೆನಿಸುವ ಯುವತಿಯರ ಕತ್ತನ್ನು ನಾನಾ ಬಗೆಯ ಸ್ಕಾರ್ಫ್‌ಗಳು ಆವರಿಸಿಕೊಂಡಿವೆ. ಹುಡುಗಿಯರ ಕುತ್ತಿಗೆ ಹಾಗೂ ತಲೆ ಮೇಲೆ ನಾನಾ ಸ್ಟೈಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

3/5

ಕಾರ್ಪೋರೇಟ್ ಡ್ರೆಸ್‌ಕೋಡ್ ಸ್ಯಾಂಪಲ್

ಇನ್ನು, ಸ್ಕಾರ್ಫ್ ಸ್ಟೈಲ್ ಸ್ಟೇಟ್‌ಮೆಂಟ್ ಇಂದು ಅತಿ ಹೆಚ್ಚಾಗಿ ಟ್ರೆಂಡ್‌ನಲ್ಲಿರುವುದು ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಫ್ಯಾಷನ್‌ನಲ್ಲಿ ಎನ್ನಬಹುದು ಎನ್ನುತ್ತಾರೆ ಕಾರ್ಪೋರೇಟ್ ಕ್ಷೇತ್ರದ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಜಾಕೆಟ್ ಹಾಗೂ ಕೋಟ್ ಜತೆಗೆ ಇವನ್ನು ಸ್ಟೈಲಿಶ್ ಆಗಿ ಧರಿಸುವುದು ಇತ್ತೀಚೆಗೆ ತೀರಾ ಕಾಮನ್ ಆಗಿದೆ ಎನ್ನುತ್ತಾರೆ.

4/5

ಸ್ಕಾರ್ಫ್ ಧರಿಸಲು ಟ್ಯುಟೋರಿಯಲ್

ನೀವು ಸ್ಟೈಲಾಗಿ ಸ್ಕಾರ್ಫ್ ಕಟ್ಟಿಕೊಳ್ಳಬೇಕೆ! ಸುತ್ತಿಕೊಳ್ಳಬೇಕೆ! ಇದಕ್ಕೆಂದೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೇಜ್‌ಗಳು ಟ್ಯುಟೋರಿಯಲ್ ನೀಡುತ್ತಿವೆ. ಲಾಂಗ್ ಸ್ಕಾರ್ಫ್, ಶಾರ್ಟ್ ಲೆಂಥ್, ಸ್ಟೋಲ್ ಸ್ಟೈಲ್ ಹೀಗೆ ನಾನಾ ಬಗೆಯ ಸ್ಟೈಲಿಂಗ್ ಕುರಿತು ಟ್ಯೂಷನ್ ನೀಡುತ್ತಿವೆ. ಇವುಗಳ ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್.

5/5

ಸ್ಕಾರ್ಫ್ ಸ್ಟೈಲಿಂಗ್ ಸಿಕ್ರೇಟ್ಸ್

  • ಡಬ್ಬಲ್ ಶೇಡ್‌ನ ಸ್ಕಾರ್ಫ್‌ನಲ್ಲಿ ಡಿಫರೆಂಟ್ ಲುಕ್ ಪಡೆಯಬಹುದು.
  • ಸಿಂಪಲ್ ಸ್ಕಾರ್ಫ್ ಡಿಸೈನ್ ಡೈಲಿ ರುಟೀನ್ ಡ್ರೆಸ್‌ಕೋಡ್‌ಗೆ ಮ್ಯಾಚ್ ಮಾಡಬಹುದು.
  • ಎಥ್ನಿಕ್ ಲುಕ್ಗೆ ನೆಕ್ ಸ್ಕಾರ್ಫ್ ಧರಿಸುವುದು ಬೇಡ.
  • ಪ್ಯಾಂಟ್ ಧರಿಸಿದ್ದಲ್ಲಿ ನೆಕ್‌ಸ್ಕಾರ್ಫ್ ಡಿಸೈನ್ ಬೆಸ್ಟ್.
  • ರಂಗೀಲಾ ಡಿಸೈನ್‌ನವು ಠಪೋರಿ ಲುಕ್ ನೀಡಬಹುದು.
  • ಆಯಾ ಉಡುಗೆಗೆ ತಕ್ಕಂತೆ ಸ್ಟೈಲಿಂಗ್ ಮಾಡುವುದು ಉತ್ತಮ.

ಶೀಲಾ ಸಿ ಶೆಟ್ಟಿ

View all posts by this author